Home Bibles ಪರಮಗೀತ 2:4 · ಕನ್ನಡ ಬೈಬಲ್
ಪರಮಗೀತ 2:4 · ಕನ್ನಡ ಬೈಬಲ್

ಔತಣದ ಮನೆಗೆ ನನ್ನನ್ನು ಕರಕೊಂಡು ಬಂದನು; ನನ್ನ ಮೇಲೆ ಅವನ ಧ್ವಜ ಪ್ರೀತಿಯೇ.

Cross references

ಎಸ್ತೇರ್ 7:7

ಅರಸನು ಕೋಪವುಳ್ಳವನಾಗಿ ದ್ರಾಕ್ಷಾ ರಸದ ಔತಣದಿಂದ ಎದ್ದು ಅರಮನೆಯ ತೋಟಕ್ಕೆ ಹೋದನು. ಆದರೆ ಹಾಮಾನನು ರಾಣಿಯಾದ ಎಸ್ತೇ ರಳ ಮುಂದೆ ತನ್ನ ಪ್ರಾಣಕ್ಕೋಸ್ಕರ ಬೇಡಿಕೊಳ್ಳುತ್ತಾ ನಿಂತನು, ಯಾಕಂದರೆ ಅರಸನಿಂದ ತನಗೆ ಕೇಡು ನಿರ್ಣಯವಾಯಿತೆಂದು ತಿಳಿದನು.

ಯೋಬ 1:10

ನೀನು ಅವನಿಗೂ ಅವನ ಮನೆಗೂ ಅವನಿಗೆ ಉಂಟಾದ ಎಲ್ಲವುಗಳಿಗೂ ಸುತ್ತಲೂ ಬೇಲಿ ಕಟ್ಟಿದೆಯಲ್ಲಾ? ಅವನ ಕೈ ಕೆಲಸವನ್ನು ಆಶೀರ್ವದಿಸಿದಿ; ಅವನ ಸಂಪತ್ತು ದೇಶದಲ್ಲಿ ಹಬ್ಬಿಯದೆ.

ಕೀರ್ತನೆಗಳು 20:5

ನಾವು ನಿನ್ನ ರಕ್ಷಣೆಯಲ್ಲಿ ಹರ್ಷಿಸಿ ನಮ್ಮ ದೇವರ ಹೆಸರಿನಲ್ಲಿ ಧ್ವಜ ಎತ್ತುವೆವು; ಕರ್ತನು ನಿನ್ನ ಬಿನ್ನಹಗಳನ್ನೆಲ್ಲಾ ಪೂರೈ ಸಲಿ.

ಕೀರ್ತನೆಗಳು 60:4

ಸತ್ಯದ ನಿಮಿತ್ತ ಧ್ವಜವು ಎತ್ತಲ್ಪಡುವಂತೆ ನಿನಗೆ ಭಯಪಡುವವರಿಗೆ ನೀನು ಅದನ್ನು ಕೊಟ್ಟಿದ್ದೀ. ಸೆಲಾ.

ಕೀರ್ತನೆಗಳು 63:2

ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.

ಕೀರ್ತನೆಗಳು 84:10

ಸಾವಿರ ದಿವಸಗಳಿಗಿಂತ ನಿನ್ನ ಅಂಗಳಗ ಳಲ್ಲಿ ಇರುವ ಒಂದು ದಿನವು ಒಳ್ಳೇದಾಗಿದೆ; ದುಷ್ಟರ ಗುಡಾರಗಳಲ್ಲಿ ವಾಸಮಾಡುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯುವವನಾಗಿರುವದು ನನಗೆ ಒಳ್ಳೆಯದು.

ಪರಮಗೀತ 1:1

ಸೊಲೊಮೋನನ ಗೀತಗಳ ಗೀತ.

ಪರಮಗೀತ 1:4

ನನ್ನನ್ನು ಎಳಕೋ, ನಾವು ನಿನ್ನ ಹಿಂದೆ ಓಡುವೆವು; ಅರಸನು ನನ್ನನ್ನು ತನ್ನ ಕೊಠಡಿಗಳಿಗೆ ಕರಕೊಂಡು ಬಂದಿದ್ದಾನೆ. ನಾವು ನಿನ್ನಲ್ಲಿ ಉಲ್ಲಾಸಪಟ್ಟು ಸಂತೋಷಪಡುತ್ತೇವೆ; ದ್ರಾಕ್ಷಾರಸ ಕ್ಕಿಂತ ನಿನ್ನ ಪ್ರೀತಿಯನ್ನು ಜ್ಞಾಪಕಮಾಡುತ್ತೇವೆ; ಯಥಾ ರ್ಥರು ನಿನ್ನನ್ನು ಪ್ರೀತಿಮಾಡುತ್ತಾರೆ.

ಪರಮಗೀತ 5:1

ನನ್ನ ತೋಟಕ್ಕೆ ಬಂದೆನು, ನನ್ನ ಸಹೋದರಿಯೇ, ವಧುವೇ; ನನ್ನ ರಕ್ತಬೋಳ ವನ್ನೂ ನನ್ನ ಸುಗಂಧಗಳನ್ನೂ ಕೂಡಿಸಿದ್ದೇನೆ; ನನ್ನ ಜೇನು ಗೂಡನ್ನೂ ಜೇನು ತುಪ್ಪವನ್ನೂ ತಿಂದಿದ್ದೇನೆ; ನನ್ನ ದ್ರಾಕ್ಷಾರಸವನ್ನೂ ನನ್ನ ಹಾಲನ್ನೂ ಕುಡಿದಿದ್ದೇನೆ. ತಿನ್ನಿರಿ, ಓ ಸ್ನೇಹಿತರೇ; ಕುಡಿಯಿರಿ. ಹೌದು, ನನ್ನ ಪ್ರಿಯರೇ, ಸಮೃದ್ಧಿಯಾಗಿ ಕುಡಿಯಿರಿ.

ಪರಮಗೀತ 6:4

ಓ ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದ ರಿಯೂ ಯೆರೂಸಲೇಮಿನ ಹಾಗೆ ರಮ್ಯಳೂ ಧ್ವಜ ಗಳಿರುವ ದಂಡಿನ ಹಾಗೆ ಭಯಂಕರಳೂ ಆಗಿದ್ದೀ.

ಯೆಶಾಯ 11:10

ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.

ಯೋಹಾನ 14:21

ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಅನುಸರಿಸುವವನೇ ನನ್ನನ್ನು ಪ್ರೀತಿಸುವವನು; ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು. ನಾನು ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ವ್ಯಕ್ತಪಡಿಸಿ ಕೊಳ್ಳುವೆನು ಎಂದು ಹೇಳಿದನು.

ಯೋಹಾನ 15:9

ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ; ನೀವು ನನ್ನ ಪ್ರೀತಿಯಲ್ಲಿ ನೆಲೆಯಾಗಿರ್ರಿ.

ರೋಮಾಪುರದವರಿಗೆ 5:8

ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾನೆ.

ರೋಮಾಪುರದವರಿಗೆ 8:28

ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯ ಲ್ಪಟ್ಟು ಆತನನ್ನು ಪ್ರಿತಿಸುವವರ ಒಳ್ಳೇದಕ್ಕಾಗಿ ಎಲ್ಲವು ಗಳು ಒಟ್ಟಾಗಿ ಸಂಭವಿಸುತ್ತವೆಯೆಂದು ನಾವು ಬಲ್ಲೆವು.

ಪ್ರಕಟನೆ 3:20

ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು.

Interlinear

Choose Theme