Home Bibles ರೋಮಾಪುರದವರಿಗೆ 4:19 · ಕನ್ನಡ ಬೈಬಲ್
ರೋಮಾಪುರದವರಿಗೆ 4:19 · ಕನ್ನಡ ಬೈಬಲ್

ಅವನು ಹೆಚ್ಚು ಕಡಿಮೆ ನೂರುವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದನು; ಆದಾಗ್ಯೂ ಅವನು ಅಪನಂಬಿಕೆಯಿಂದ ಚಂಚಲನಾಗಲಿಲ್ಲ.

Cross references

ಆದಿಕಾಂಡ 17:17

ಆಗ ಅಬ್ರಹಾಮನು ಅಡ್ಡಬಿದ್ದು ನಕ್ಕು-ನೂರು ವರುಷ ದವನಿಗೆ ಮಗುವು ಹುಟ್ಟುವದುಂಟೇ? ತೊಂಭತ್ತು ವರುಷದವಳಾದ ಸಾರಳು ಹೆರುವದುಂಟೇ ಎಂದು ತನ್ನ ಹೃದಯದಲ್ಲಿ ಅಂದುಕೊಂಡನು.

ಆದಿಕಾಂಡ 18:11

ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು.

ಮತ್ತಾಯ 6:30

ಆದದರಿಂದ ಈ ಹೊತ್ತು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಓ ಅಲ್ಪ ವಿಶ್ವಾಸಿಗಳೇ, ಆತನು ಇನ್ನೂ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸುವನಲ್ಲವೇ?

ಮತ್ತಾಯ 8:26

ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.

ಮತ್ತಾಯ 14:29

ಅದಕ್ಕಾತನು--ಬಾ ಅಂದನು. ಆಗ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ಹೋಗು ವದಕ್ಕಾಗಿ ನೀರಿನ ಮೇಲೆ ನಡೆದನು.

ಮತ್ತಾಯ 14:31

ತಕ್ಷಣವೇ ಯೇಸು ತನ್ನ ಕೈಯನ್ನು ಚಾಚಿ ಅವನನ್ನು ಹಿಡಿದು--ಓ ಅಲ್ಪ ವಿಶ್ವಾಸಿಯೇ, ನೀನು ಯಾಕೆ ಸಂದೇಹಪಟ್ಟೆ ಎಂದು ಅವನಿಗೆ ಹೇಳಿದನು.

ಮಾರ್ಕ 9:23

ಆಗ ಯೇಸು ಅವನಿಗೆ--ನೀನು ನಂಬುವದಾದರೆ ಆಗುವದು; ನಂಬುವವನಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.

ಯೋಹಾನ 20:27

ಆಮೇಲೆ ಆತನು ತೋಮನಿಗೆ--ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ನೋಡು; ನಿನ್ನ ಕೈಯನ್ನು ಈ ಕಡೆ ಚಾಚಿ ನನ್ನ ಪಕ್ಕೆಯಲ್ಲಿ ಹಾಕು; ನಂಬಿಕೆಯಿಲ್ಲದವನಾಗಿರದೆ ನಂಬುವವ ನಾಗಿರು ಅಂದನು.

ರೋಮಾಪುರದವರಿಗೆ 4:20

ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ; ಆದರೆ ದೇವರನ್ನು ಘನಪಡಿಸುವವನಾಗಿ ದೃಢನಂಬಿಕೆಯುಳ್ಳ ವನಾದನು.

ರೋಮಾಪುರದವರಿಗೆ 14:21

ದೇವರ ಕಾರ್ಯವನ್ನು ಆಹಾರದ ನಿಮಿತ್ತವಾಗಿ ಕೆಡಿಸಬಾರದು. ಎಲ್ಲಾ ಪದಾರ್ಥಗಳೂ ಶುದ್ಧವೇ ಹೌದು; ಆದರೆ ವಿಘ್ನವನ್ನುಂಟು ಮಾಡು ವಂತೆ ತಿನ್ನುವವನಿಗೆ ಅದು ಕೆಟ್ಟದ್ದಾಗಿದೆ.

ಹೆಬ್ರಿಯರಿಗೆ 11:11

ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು.

Interlinear

Choose Theme