ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು.
Cross references
ಆಗ ಅಬ್ರಹಾಮನು ಅಡ್ಡಬಿದ್ದು ನಕ್ಕು-ನೂರು ವರುಷ ದವನಿಗೆ ಮಗುವು ಹುಟ್ಟುವದುಂಟೇ? ತೊಂಭತ್ತು ವರುಷದವಳಾದ ಸಾರಳು ಹೆರುವದುಂಟೇ ಎಂದು ತನ್ನ ಹೃದಯದಲ್ಲಿ ಅಂದುಕೊಂಡನು.
ಅಬ್ರಹಾಮನಿಗೆ ಸುನ್ನತಿಯಾದಾಗ ಅವನು ತೊಂಭತ್ತೊಂಭತ್ತು ವರುಷದವನಾಗಿದ್ದನು.
ಅಬ್ರಹಾಮನು ಮುದುಕನೂ ದಿನಗತಿಸಿದವನೂ ಆಗಿದ್ದನು. ಕರ್ತನು ಅಬ್ರಹಾಮ ನನ್ನು ಎಲ್ಲಾದರಲ್ಲಿ ಆಶೀರ್ವದಿಸಿದನು.
ಇದಲ್ಲದೆ ನನ್ನ ಯಜಮಾನನ ಹೆಂಡತಿಯಾದ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ.
ರಾಹೇಲಳು ತನ್ನ ತಂದೆಗೆ--ನಾನು ನಿನ್ನ ಮುಂದೆ ಏಳಲಾರದೆ ಇರುವದರಿಂದ ನನ್ನ ಪ್ರಭುವೇ, ನಿನಗೆ ಕೋಪಬಾರದೆ ಇರಲಿ. ಯಾಕಂದರೆ ಸ್ತ್ರೀಯರ ಕ್ರಮ ನನಗೆ ಆಗಿದೆ ಅಂದಳು. ಅವನು ಆ ವಿಗ್ರಹಗಳನ್ನು ಹುಡುಕಿ ಕಂಡುಕೊಳ್ಳದೆ ಹೋದನು.
ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತಸ್ರಾವವಿದ್ದರೆ ಅವಳು ಏಳು ದಿವಸಗಳ ವರೆಗೆ ಪ್ರತ್ಯೇಕಿಸಲ್ಪಡಬೇಕು. ಅವಳನ್ನು ಯಾವನಾದರೂ ಮುಟ್ಟಿದರೆ ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು;
ಯೆಹೋಶುವನು ದಿನ ತುಂಬಿದ ಮುದುಕ ನಾಗಲು ಕರ್ತನು ಅವನಿಗೆ--ನೀನು ಮುದುಕನಾಗಿ ದಿನಗಳು ಹೋದವನಾದಿ; ಆದರೆ ಸ್ವಾಧೀನಮಾಡಿಕೊಳ್ಳತಕ್ಕ ಸೀಮೆಯು ಇನ್ನು ಬಹಳ ವಾಗಿ ಇರುತ್ತದೆ.
ಎಲಿಸಬೇತಳು ಬಂಜೆಯಾದದರಿಂದ ಅವರಿಗೆ ಮಕ್ಕ ಳಿರಲಿಲ್ಲ; ಅವರಿಬ್ಬರೂ ಬಹಳ ಪ್ರಾಯಹೋದವರಾ ಗಿದ್ದರು.
ಆಗ ಜಕರೀಯನು ಆ ದೂತನಿಗೆ--ಇದನ್ನು ನಾನು ಯಾವದರಿಂದ ತಿಳು ಕೊಳ್ಳಲಿ? ಯಾಕಂದರೆ ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯಗತಿಸಿದವಳು ಅಂದನು.
ಇಗೋ, ಬಂಜೆಯೆಂದು ಕರೆಯಲ್ಪಟ್ಟ ನಿನ್ನ ಬಂಧುವಾದ ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಮಗನನ್ನು ಗರ್ಭಧರಿಸಿದ್ದಾಳೆ. ಆಕೆಗೆ ಇದು ಆರನೆಯ ತಿಂಗಳು.
ಅವನು ತಾನು ಅನೇಕ ಜನಾಂಗಗಳಿಗೆ ತಂದೆಯಾಗಿ ರುವನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ--ನಿನ್ನ ಸಂತಾನವು ಹೀಗಾಗುವದು ಎಂದು ಹೇಳಲ್ಪಟ್ಟಂತೆ ನಿರೀಕ್ಷಿಸಿ ನಂಬಿದನು.
ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು.
ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು.