Home Bibles ☰ Books ರೋಮಾಪುರದವರಿಗೆ 15:31 · ಕನ್ನಡ ಬೈಬಲ್
ರೋಮಾಪುರದವರಿಗೆ 15:31 · ಕನ್ನಡ ಬೈಬಲ್

ಯೂದಾಯದಲ್ಲಿ ನಂಬದವರಿಂದ ನನ್ನನ್ನು ತಪ್ಪಿಸಬೇಕೆಂತಲೂ ಯೆರೂಸಲೇಮಿಗೋಸ್ಕರ ನನ್ನ ಸೇವೆಯು ಆ ಪರಿಶುದ್ಧರಿಗೆ ಹಿತಕರವಾಗಿ ತೋರಬೇಕೆಂತಲೂ

Cross references

ಅಪೋಸ್ತಲರ ಕೃತ್ಯಗಳು 21:17

ನಾವು ಯೆರೂಸಲೇಮಿಗೆ ಬಂದಾಗ ಸಹೋದ ರರು ನಮ್ಮನ್ನು ಸಂತೋಷದಿಂದ ಸೇರಿಸಿಕೊಂಡರು.

ಅಪೋಸ್ತಲರ ಕೃತ್ಯಗಳು 22:24

ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು;

ಅಪೋಸ್ತಲರ ಕೃತ್ಯಗಳು 23:12

ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು.

ಅಪೋಸ್ತಲರ ಕೃತ್ಯಗಳು 24:1

ಐದು ದಿವಸಗಳಾದ ಮೇಲೆ ಮಹಾ ಯಾಜಕನಾದ ಅನನೀಯನು ಹಿರಿಯರೊಂದಿಗೂ ಒಬ್ಬಾನೊಬ್ಬ ವಾಕ್ಚಾತುರ್ಯನಾದ ತೆರ್ತುಲ್ಲ ನೆಂಬವನೊಂದಿಗೂ ಬಂದು ಪೌಲನಿಗೆ ವಿರೋಧ ವಾದದ್ದನ್ನು ಅಧಿಪತಿಗೆ ತಿಳಿಯಪಡಿಸಿದರು.

ಅಪೋಸ್ತಲರ ಕೃತ್ಯಗಳು 25:2

ಆಗ ಮಹಾ ಯಾಜಕನೂ ಯೆಹೂದ್ಯರಲ್ಲಿ ಮುಖ್ಯಸ್ಥರೂ ಪೌಲನಿಗೆ ವಿರೋಧವಾಗಿ ಅವನಿಗೆ ಫಿರಿಯಾದಿ ಹೇಳಿದರು.

ಅಪೋಸ್ತಲರ ಕೃತ್ಯಗಳು 25:24

ಆಗ ಫೆಸ್ತನು--ಅರಸನಾದ ಅಗ್ರಿಪ್ಪನೇ, ಇಲ್ಲಿ ನಮ್ಮೊಂದಿಗೆ ಸೇರಿ ಬಂದಿರುವ ಎಲ್ಲಾ ಜನರೇ, ಇವನು ಇನ್ನು ಮೇಲೆ ಜೀವಿಸಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯಾವ ಮನುಷ್ಯನ ವಿಷಯವಾಗಿ ಯೆಹೂದ್ಯರ ಜನಸಮೂಹವೆಲ್ಲಾ ನನ್ನನ್ನು ಬೇಡಿ ಕೊಂಡಿತೋ ಇವನನ್ನು ನೀವು ನೋಡು

ರೋಮಾಪುರದವರಿಗೆ 15:25

ಆದರೆ ಈಗ ಪರಿಶುದ್ಧರಿಗೆ ಸೇವೆಮಾಡುವದಕ್ಕೋಸ್ಕರ ನಾನು ಯೆರೂಸಲೇಮಿಗೆ ಹೋಗುತ್ತೇನೆ.

2 ಕೊರಿಂಥದವರಿಗೆ 8:4

ಪರಿಶುದ್ಧರಿಗೆ ದಾನ ಕೊಡುವ ಅನ್ಯೋನ್ಯತೆಯಲ್ಲಿ ತಾವು ಪಾಲುಗಾರ ರಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು.

2 ಕೊರಿಂಥದವರಿಗೆ 9:1

ಪರಿಶುದ್ಧರಿಗೆ ಪರಿಚರ್ಯ ಮಾಡುವದನ್ನು ಕುರಿತು ನಿಮಗೆ ಬರೆಯುವದಕ್ಕೆ ನನಗೆ ಅವಶ್ಯವಿಲ್ಲ.

1 ತೆಸಲೋನಿಕದವರಿಗೆ 2:15

ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ.

2 ತೆಸಲೋನಿಕದವರಿಗೆ 3:2

ಮೂರ್ಖರಾದ ದುಷ್ಟಜನರ ಕೈಯಿಂದ ನಾವು ತಪ್ಪಿಸಲ್ಪಡುವ ಹಾಗೆಯೂ ಪ್ರಾರ್ಥಿಸಿರಿ; ಯಾಕಂದರೆ ಎಲ್ಲರಲ್ಲಿ ನಂಬಿಕೆ ಯಿಲ್ಲವಲ್ಲಾ.

2 ತಿಮೋಥೆಯ 3:11

ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬ ದನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು.

2 ತಿಮೋಥೆಯ 4:17

ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸಾರಲ್ಪಡುವದು ಸಂಪೂರ್ಣವಾಗಿ ಗ್ರಹಿಕೆ ಯಾಗುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು; ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.

Interlinear

Choose Theme