Home Bibles 1 ತೆಸಲೋನಿಕದವರಿಗೆ 2:15 · ಕನ್ನಡ ಬೈಬಲ್
1 ತೆಸಲೋನಿಕದವರಿಗೆ 2:15 · ಕನ್ನಡ ಬೈಬಲ್

ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ.

Cross references

ಎಸ್ತೇರ್ 3:8

ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ.

ಕೀರ್ತನೆಗಳು 109:20

ಇದು ನನ್ನ ಪ್ರಾಣಕ್ಕೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಕರ್ತನಿಂದ ಪ್ರತಿಫಲವಾಗಿರಲಿ.

ಆಮೋಸ 7:12

ಇನ್ನೂ ಅಮಚ್ಯನು ಆಮೋಸನಿಗೆ ಹೇಳಿದ್ದೇನಂದರೆ--ಓ ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು; ಅಲ್ಲಿ ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು.

ಮತ್ತಾಯ 5:12

ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.

ಮತ್ತಾಯ 21:35

ಆಗ ಒಕ್ಕಲಿಗರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು ಇನ್ನೊಬ್ಬ ನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು.

ಮತ್ತಾಯ 23:31

ಆದದರಿಂದ ನೀವು ಆ ಪ್ರವಾದಿ ಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ.

ಮತ್ತಾಯ 23:37

ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ

ಮತ್ತಾಯ 27:25

ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು.

ಲೂಕ 11:48

ಇದರಿಂದ ನಿಜವಾ ಗಿಯೂ ನಿಮ್ಮ ತಂದೆಗಳ ಕೃತ್ಯಗಳನ್ನು ನೀವು ಒಪ್ಪಿ ಕೊಳ್ಳುವಂತೆ ಸಾಕ್ಷೀಕರಿಸುತ್ತೀರಿ; ಯಾಕಂದರೆ ಅವರು ನಿಜವಾಗಿಯೂ ಅವರನ್ನು ಕೊಂದರು; ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ.

ಲೂಕ 13:33

ಆದಾಗ್ಯೂ ಈ ದಿವಸ ನಾಳೆ ಮತ್ತು ನಾಡದ್ದು ನಾನು ಸಂಚರಿಸಲೇಬೇಕು; ಯಾಕಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡಲಾರನು.

ಲೂಕ 24:20

ಪ್ರಧಾನ ಯಾಜಕರೂ ನಮ್ಮ ಅಧಿಕಾರಿಗಳೂ ಆತನನ್ನು ಮರಣ ದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿದರು.

ಅಪೋಸ್ತಲರ ಕೃತ್ಯಗಳು 2:23

ಆದರೆ ದೇವರ ಸ್ಥಿರಸಂಕಲ್ಪಕ್ಕನುಸಾರವಾಗಿಯೂ ಭವಿಷ್ಯದ್‌ ಜ್ಞಾನಕ್ಕನುಸಾರವಾಗಿಯೂ ಆತನು ಒಪ್ಪಿಸಲ್ಪಟ್ಟಾಗ ನೀವು ಆತನನ್ನು ಹಿಡಿದು ದುಷ್ಟರ ಕೈಗಳಿಂದ ಶಿಲುಬೆಗೆ ಹಾಕಿಸಿಕೊಂದಿರಿ.

ಅಪೋಸ್ತಲರ ಕೃತ್ಯಗಳು 3:15

ಜೀವಾಧಿ ಪತಿಯನ್ನು ಕೊಲ್ಲಿಸಿದಿರಿ; ದೇವರು ಆತನನ್ನೇ ಸತ್ತವ ರೊಳಗಿಂದ ಎಬ್ಬಿಸಿದ್ದಾನೆ; ಇದಕ್ಕೆ ನಾವು ಸಾಕ್ಷಿಗಳಾ ಗಿದ್ದೇವೆ.

ಅಪೋಸ್ತಲರ ಕೃತ್ಯಗಳು 4:10

ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ.

ಅಪೋಸ್ತಲರ ಕೃತ್ಯಗಳು 5:30

ನೀವು ಮರಕ್ಕೆ ತೂಗುಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಎಬ್ಬಿಸಿದನು.

ಅಪೋಸ್ತಲರ ಕೃತ್ಯಗಳು 7:52

ಪ್ರವಾದಿ ಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿ ದ್ದಾರೆ? ಅವರು ಆ ನೀತಿವಂತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು. ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ.

ಅಪೋಸ್ತಲರ ಕೃತ್ಯಗಳು 12:3

ಇದು ಯೆಹೂದ್ಯರಿಗೆ ಮೆಚ್ಚಿಗೆಯಾಗಿರುವದನ್ನು ಅವನು ನೋಡಿದ್ದರಿಂದ ಪೇತ್ರನನ್ನು ಹಿಡಿಯುವದಕ್ಕಾಗಿ ಮುಂಗೊಂಡನು. (ಆಗ ಅವು ಹುಳಿಯಿಲ್ಲದ ರೊಟ್ಟಿಯ ದಿವಸಗಳಾಗಿದ್ದವು).

ಅಪೋಸ್ತಲರ ಕೃತ್ಯಗಳು 22:18

ನೀನು ತ್ವರೆಪಟ್ಟು ಯೆರೂಸ ಲೇಮಿನಿಂದ ಬೇಗನೆ ಹೊರಟು ಹೋಗು; ನನ್ನ ವಿಷಯವಾದ ಸಾಕ್ಷಿಯನ್ನು ಅವರು ಅಂಗೀಕರಿಸುವದಿಲ್ಲ ಎಂದು ನನಗೆ ಹೇಳಿದಾತನನ್ನು ನಾನು ಕಂಡೆನು.

1 ಕೊರಿಂಥದವರಿಗೆ 10:5

ಆದರೆ ಅವ ರೊಳಗೆ ಅನೇಕರ ವಿಷಯದಲ್ಲಿ ದೇವರು ಸಂತೋಷಿ ಸಲಿಲ್ಲ; ಯಾಕಂದರೆ ಅವರು ಅಡವಿಯೊಳಗೆ ಸಂಹರಿ ಸಲ್ಪಟ್ಟರು.

Interlinear

Choose Theme