Home Bibles ಪ್ರಕಟನೆ 4:3 · ಕನ್ನಡ ಬೈಬಲ್
ಪ್ರಕಟನೆ 4:3 · ಕನ್ನಡ ಬೈಬಲ್

ಕೂತಿದ್ದಾತನು ಸೂರ್ಯಕಾಂತ ಪದ್ಮರಾಗ ಕಲ್ಲುಗಳಂತೆ ಕಾಣುತ್ತಿದ್ದನು; ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆ ಬಿಲ್ಲು ಇತ್ತು.

Cross references

ಆದಿಕಾಂಡ 9:13

ನನ್ನ ಬಿಲ್ಲು ಮೇಘಗಳಲ್ಲಿ ಇಟ್ಟಿದ್ದೇನೆ. ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವದು.

ನಿರ್ಗಮಕಾಂಡ 24:10

ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.

ನಿರ್ಗಮಕಾಂಡ 28:18

ಎರಡನೆಯ ಸಾಲಿನಲ್ಲಿ ಪಚ್ಚೆ ನೀಲ ವಜ್ರ ಇರಬೇಕು.

ನಿರ್ಗಮಕಾಂಡ 39:11

ಕೆಂಪರಳು ನೀಲ ವಜ್ರ ಇವು ಎರಡನೆಯ ಸಾಲಿನಲ್ಲಿ ಇದ್ದವು.

ಯೆಶಾಯ 54:9

ಇದು ನನಗೆ ನೋಹನ ಕಾಲದ ಪ್ರಳಯ ದಂತಿದೆ; ನೋಹನ ಕಾಲದ ಪ್ರಳಯವು ಇನ್ನು ಭೂಮಿಯ ಮೇಲೆ ಹರಿಯಗೊಡಿಸುವದಿಲ್ಲವೆಂದು ನಾನು ಪ್ರಮಾಣಮಾಡಿದ ಹಾಗೆಯೇ ಇನ್ನು ನಿನ್ನ ಮೇಲೆ ಕೋಪಗೊಳ್ಳುವದಿಲ್ಲ ಇಲ್ಲವೇ ನಿನ್ನನ್ನು ಗದರಿಸುವದಿಲ್ಲ ಎಂದು ಪ್ರಮಾಣಮಾಡಿದ್ದೇನೆ.

ಯೆಹೆಜ್ಕೇಲ 1:26

ಅವುಗಳ ತಲೆಗಳ ಮೇಲಿರುವ ಗಗನಮಂಡಲದ ಮೇಲ್ಭಾಗದಲ್ಲಿ ಇಂದ್ರನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನದ ರೂಪವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.

ಯೆಹೆಜ್ಕೇಲ 1:28

ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.

ಯೆಹೆಜ್ಕೇಲ 28:13

ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.

ಪ್ರಕಟನೆ 10:1

ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠ ನಾದ ಮತ್ತೊಬ್ಬ ದೂತನು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನ ತಲೆಯ ಮೇಲೆ ಮಳೆ ಬಿಲ್ಲು ಇತ್ತು; ಅವನ ಮುಖವು ಸೂರ್ಯನಂತಿತ್ತು; ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು;

ಪ್ರಕಟನೆ 21:11

ಅದರಲ್ಲಿ ದೇವರ ಮಹಿಮೆ ಇತ್ತು; ಪಟ್ಟಣದ ಪ್ರಕಾಶವು ಅಮೂಲ್ಯವಾದ ಕಲ್ಲಿನ ಪ್ರಕಾಶಕ್ಕೆ ಸಮಾನವಾಗಿತ್ತು; ಅದು ಸೂರ್ಯ ಕಾಂತದಂತೆ ಥಳಥಳಿಸುತ್ತಿತ್ತು.

ಪ್ರಕಟನೆ 21:19

ಪಟ್ಟಣದ ಗೋಡೆಯ ಅಸ್ತಿವಾರಗಳು ಸಕಲವಿಧವಾದ ಅಮೂಲ್ಯವಾದ ಕಲ್ಲುಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿ ವಾರವು ಸೂರ್ಯಕಾಂತ, ಎರಡನೆಯದು ನೀಲಮಣಿ, ಮೂರನೆಯದು ಕೆಂಪು, ನಾಲ್ಕನೆಯದು ಪಚ್ಚೆ.

Interlinear

Choose Theme