Home Bibles ☰ Books ನಿರ್ಗಮಕಾಂಡ 24:10 · ಕನ್ನಡ ಬೈಬಲ್
ನಿರ್ಗಮಕಾಂಡ 24:10 · ಕನ್ನಡ ಬೈಬಲ್

ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.

Cross references

ಆದಿಕಾಂಡ 32:30

ಆಗ ಯಾಕೋಬನು--ನಾನು ದೇವರನ್ನು ಮುಖಾಮುಖಿ ಯಾಗಿ ನೋಡಿದರೂ ನನ್ನ ಪ್ರಾಣವು ಕಾಪಾಡಲ್ಪಟ್ಟಿತು ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್‌ ಎಂದು ಹೆಸರಿಟ್ಟನು.

ಆದಿಕಾಂಡ 32:31

ಅವನು ಪೆನೂವೇಲನ್ನು ದಾಟಿ ಹೋದಾಗ ಅವನಿಗೆ ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನಿಮಿತ್ತ ಕುಂಟಿಕೊಂಡು ನಡೆದನು.ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲ್‌ ಮಕ್ಕಳು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದ ವರೆಗೂ ತಿನ್ನುವದಿಲ್ಲ.

ನಿರ್ಗಮಕಾಂಡ 3:6

ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.

ನಿರ್ಗಮಕಾಂಡ 33:20

ಆತನು ಅವನಿಗೆ--ನೀನು ನನ್ನ ಮುಖವನ್ನು ನೋಡ ಲಾರಿ; ಯಾವ ಮನುಷ್ಯನೂ ನನ್ನನ್ನು ನೋಡಿ ಬದುಕುವದಿಲ್ಲ ಅಂದನು.

ನಿರ್ಗಮಕಾಂಡ 33:23

ತರುವಾಯ ನನ್ನ ಕೈಯನ್ನು ತೆಗೆದು ಬಿಡುವೆನು, ಆಗ ನೀನು ನನ್ನ ಹಿಂಭಾಗವನ್ನು ನೋಡುವಿ, ಆದರೆ ನನ್ನ ಮುಖವು ಕಾಣಿಸುವದಿಲ್ಲ ಅಂದನು.

ನ್ಯಾಯಾಧಿಪತಿಗಳು 13:21

ಆದರೆ ಕರ್ತನ ದೂತನು ಮಾನೋಹನಿಗೂ ಅವನ ಹೆಂಡತಿಗೂ ತಿರಿಗಿ ಕಾಣಿಸ ಲಿಲ್ಲ. ಆಗ ಇವನು ಕರ್ತನ ದೂತನೆಂದು ಮಾನೋಹನು ತಿಳುಕೊಂಡನು. ಮಾನೋಹನು ತನ್ನ ಹೆಂಡತಿಗೆ--ನಾವು ದೇವರನ್ನು ಕಂಡದ್ದರಿಂದ ನಿಶ್ಚಯ ವಾಗಿ ಸಾಯುವೆವು ಅಂದನು.

ನ್ಯಾಯಾಧಿಪತಿಗಳು 13:22

ಅವನ ಹೆಂಡತಿ ಅವನಿಗೆ--ಕರ್ತನು ನಮ್ಮನ್ನು ಕೊಂದುಹಾಕುವದಕ್ಕೆ ಮನಸ್ಸಾಗಿದ್ದರೆ ಆತನು ನಮ್ಮ ಕೈಯಿಂದ ದಹನಬಲಿ ಯನ್ನೂ ಅರ್ಪಣೆಯನ್ನೂ ಅಂಗೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯ ಮಾಡುತ್ತಿರಲಿಲ್ಲ ಅಂದಳು.

1 ಅರಸುಗಳು 22:19

ವಿಾಕಾಯೆಹುವು--ಆದದರಿಂದ ಕರ್ತನ ವಾಕ್ಯವನ್ನು ಕೇಳು--ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರುವದನ್ನೂ ನೋಡಿದೆನು ಅಂದನು.

2 ದಿನವೃತ್ತಾಂತ 6:17

ಈಗ ಇಸ್ರಾಯೇಲಿನ ದೇವ ರಾದ ಓ ಕರ್ತನೇ, ನಿನ್ನ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ನಿಶ್ಚಯವಾಗಲಿ.

ಪರಮಗೀತ 6:10

ಚಂದ್ರನ ಹಾಗೆ ಸುಂದರಿಯೂ ಸೂರ್ಯನ ಹಾಗೆ ನಿರ್ಮಲವಾದವಳೂ ಧ್ವಜಗಳಿರುವ ದಂಡಿನ ಹಾಗೆ ಭಯಂಕರವಾದವಳೂ ಉದಯದ ಹಾಗೆ ದೃಷ್ಟಿಸಿ ನೋಡುವವಳೂ ಆಗಿರುವ ಇವಳು ಯಾರು?

ಯೆಶಾಯ 6:1

ಅರಸನಾದ ಉಜ್ಜೀಯನು ಮರಣ ಹೊಂದಿದ ವರುಷದಲ್ಲಿ ಕರ್ತನು ಉನ್ನ ತೋನ್ನತವಾಗಿ ಸಿಂಹಾಸನಾರೂಢನಾಗಿರುವದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.

ಯೆಹೆಜ್ಕೇಲ 1:26

ಅವುಗಳ ತಲೆಗಳ ಮೇಲಿರುವ ಗಗನಮಂಡಲದ ಮೇಲ್ಭಾಗದಲ್ಲಿ ಇಂದ್ರನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನದ ರೂಪವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.

ಯೆಹೆಜ್ಕೇಲ 10:1

ಆಗ ನಾನು ನೋಡಲಾಗಿ ಇಗೋ,ಕೆರೂಬಿಯರ ತಲೆಯ ಮೇಲಿದ್ದ ವಿಶಾಲ ವಾದ ಆಕಾಶದಲ್ಲಿ ಅವರ ಮೇಲೆ ನೀಲಮಣಿಯಂತೆ ಸಿಂಹಾಸನಾಕಾರದಂತಿರುವ ರೂಪವು ತೋರಿತು.

ಮತ್ತಾಯ 17:2

ಅಲ್ಲಿ ಆತನು ಅವರ ಮುಂದೆ ರೂಪಾಂತರ ಗೊಂಡನು. ಆತನ ಮುಖವು ಸೂರ್ಯನಂತೆ ಪ್ರಕಾಶಿಸಿತು; ಮತ್ತು ಆತನ ಉಡುಪು ಬೆಳಕಿನಂತೆ ಬೆಳ್ಳಗಿತ್ತು.

ಯೋಹಾನ 1:18

ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.

Interlinear

Choose Theme