Home Bibles ಕೀರ್ತನೆಗಳು 90:12 · ಕನ್ನಡ ಬೈಬಲ್
ಕೀರ್ತನೆಗಳು 90:12 · ಕನ್ನಡ ಬೈಬಲ್

ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿವಸಗಳನ್ನು ಲೆಕ್ಕಿಸುವದಕ್ಕೆ ನಮಗೆ ಕಲಿಸು.

Cross references

ದ್ವಿತೀಯೋಪದೇಶಕಾಂಡ 32:29

ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!

ಯೋಬ 28:28

ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.

ಕೀರ್ತನೆಗಳು 39:4

ಕರ್ತನೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ ನನ್ನ ಅಂತ್ಯವನ್ನೂ ನನ್ನ ದಿವಸಗಳು ಕೊಂಚ ವೆಂಬದನ್ನೂ ನನಗೆ ತಿಳಿಸು.

ಕೀರ್ತನೆಗಳು 39:5

ಇಗೋ, ನನ್ನ ದಿವಸ ಗಳನ್ನು ಗೇಣುದ್ದವಾಗಿ ಮಾಡಿದ್ದೀ; ನನ್ನ ಆಯುಷ್ಯವು ನಿನ್ನ ಮುಂದೆ ಏನೂ ಇಲ್ಲದ ಹಾಗಿದೆ; ನಿಶ್ಚಯವಾಗಿ ಉತ್ತಮ ಸ್ಥಿತಿಯಲ್ಲಿರುವ ಪ್ರತಿಯೊಬ್ಬನು ಒಟ್ಟಾರೆಯಲ್ಲಿ ವ್ಯರ್ಥವಾದವನೇ. ಸೆಲಾ.

ಸಾಮೇತಿಗಳು 2:2

ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ

ಸಾಮೇತಿಗಳು 3:13

ಜ್ಞಾನವನ್ನು ಕಂಡು ಕೊಳ್ಳುವವನೂ ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು.

ಸಾಮೇತಿಗಳು 4:5

ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ.

ಸಾಮೇತಿಗಳು 4:7

ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ.

ಸಾಮೇತಿಗಳು 7:1

ನನ್ನ ಮಗನೇ, ನನ್ನ ಮಾತುಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ.

ಸಾಮೇತಿಗಳು 8:32

ಆದದರಿಂದ ಓ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು.

ಸಾಮೇತಿಗಳು 16:16

ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ.

ಸಾಮೇತಿಗಳು 18:1

ಅಭಿಲಾಷೆಯಿಂದ ಮನುಷ್ಯನು ತನ್ನನ್ನು ಪ್ರತ್ಯೇಕಿಸಿಕೊಂಡವನಾಗಿ ಎಲ್ಲಾ ಜ್ಞಾನ ಕ್ಕಾಗಿ ಹುಡುಕುತ್ತಾ ಕೈಹಾಕುತ್ತಾನೆ.

ಸಾಮೇತಿಗಳು 22:17

ಕಿವಿಗೊಟ್ಟು ಜ್ಞಾನಿ ಗಳ ಮಾತನ್ನು ಕೇಳು; ನನ್ನ ತಿಳುವಳಿಕೆಗೆ ನಿನ್ನ ಹೃದಯ ವನ್ನು ಪ್ರಯೋಗಿಸು.

ಸಾಮೇತಿಗಳು 23:12

ಶಿಕ್ಷಣಕ್ಕೆ ನಿನ್ನ ಹೃದಯವನ್ನೂ ವಿವೇ ಕದ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು.

ಸಾಮೇತಿಗಳು 23:23

ಸತ್ಯವನ್ನೂ ಜ್ಞಾನ ವನ್ನೂ ಶಿಕ್ಷೆಯನ್ನೂ ವಿವೇಕವನ್ನೂ ಕೊಂಡು ಅವುಗ ಳನ್ನು ಮಾರಬೇಡ.

ಸಭಾಪ್ರಸಂಗಿ 7:2

ಔತಣದ ಮನೆಗೆ ಹೋಗುವದಕ್ಕಿಂತ ಗೋಳಾಟದ ಮನೆಗೆ ಹೋಗು ವದು ಲೇಸು; ಎಲ್ಲಾ ಮನುಷ್ಯರ ಅಂತ್ಯವು ಇದಾಗಿದೆ; ಇದರಿಂದ ಜೀವಿತನು ಅದನ್ನು ತಮ್ಮ ಹೃದಯದಲ್ಲಿ ಇಟ್ಟು ಸ್ಮರಿಸಿಕೊಳ್ಳುವನು.

ಸಭಾಪ್ರಸಂಗಿ 9:10

ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.

ಲೂಕ 12:35

ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀಪಗಳು ಉರಿಯುತ್ತಿರಲಿ.

ಯೋಹಾನ 9:4

ನನ್ನನ್ನು ಕಳುಹಿಸಿದಾತನ ಕೆಲಸ ಗಳನ್ನು ಹಗಲಿರುವಾಗ ನಾನು ಮಾಡತಕ್ಕದ್ದು; ರಾತ್ರಿ ಬರುತ್ತದೆ, ಆಗ ಯಾವ ಮನುಷ್ಯನೂ ಕೆಲಸಮಾಡ ಲಾರನು.

ಎಫೆಸದವರಿಗೆ 5:16

ದಿನಗಳು ಕೆಟ್ಟವುಗಳಾಗಿರು ವದರಿಂದ ಕಾಲವನ್ನು ಸುಮ್ಮನೆ ಕಳೆಯದೆ ಉಪಯೋಗಿ ಸಿಕೊಳ್ಳಿರಿ.

Interlinear

Choose Theme