ಆತನು ಬಡವನನ್ನು ಸದಾಕಾಲಕ್ಕೆ ಮರೆಯುವದಿಲ್ಲ. ಬಡವರ ನಿರೀಕ್ಷೆ ಎಂದೆಂದಿಗೂ ನಾಶವಾಗುವದಿಲ್ಲ.
Cross references
ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.
ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.
ಓ ಕರ್ತನಾದ ದೇವರೇ, ನೀನು ನನ್ನ ನಿರೀಕ್ಷೆಯೂ ನನ್ನ ಯೌವನದಿಂದ ನನ್ನ ಭರವಸವೂ ಆಗಿದ್ದೀ.
ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು.
ಆತನಿಗೆ ಮೊರೆ ಇಡುವ ಬಡವರನ್ನೂ ಸಹಾಯ ಕನಿಲ್ಲದ ದೀನನನ್ನೂ ಬಿಡಿಸುವನು.
ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ.
ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ.
ಬಡವನ ಬಲಪಾರ್ಶ್ವದಲ್ಲಿ ಅವನ ಪ್ರಾಣಕ್ಕೆ ನ್ಯಾಯತೀರಿಸುವ ವರೊಳಗಿಂದ ಅವನನ್ನು ರಕ್ಷಿಸುವದಕ್ಕೆ ಆತನು ನಿಂತುಕೊಳ್ಳುವನು.
ಓ ದೇವರೇ, ನಿಶ್ಚಯವಾಗಿ ನೀನು ದುಷ್ಟನನ್ನು ಕೊಂದುಹಾಕುವಿ; ರಕ್ತ ಪ್ರಿಯರೇ, ನನ್ನಿಂದ ತೊಲ ಗಿರಿ.
ಖಂಡಿತವಾಗಿಯೂ ಅಂತ್ಯವು ಬರು ತ್ತದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
ಹೀಗೆ ನಿನ್ನ ಪ್ರಾಣಕ್ಕೆ ಜ್ಞಾನದ ತಿಳುವಳಿಕೆಯು ಇರುವದು; ಅದು ಸಿಕ್ಕಿದಾಗ ಬಹುಮಾನವಿರುವದು; ನಿನ್ನ ನಿರೀಕ್ಷೆಯು ನಿರರ್ಥಕವಾಗುವದಿಲ್ಲ.
ಹಸಿದವರನ್ನು ಒಳ್ಳೆಯವು ಗಳಿಂದ ತೃಪ್ತಿಪಡಿಸಿ ಐಶ್ವರ್ಯವಂತರನ್ನು ಬರಿದಾಗಿ ಕಳುಹಿಸಿಬಿಟ್ಟಿದ್ದಾನೆ.
ಆತನು ತನ್ನ ಕಣ್ಣುಗಳನ್ನೆತ್ತಿ ತನ್ನ ಶಿಷ್ಯರ ಕಡೆಗೆ ನೋಡಿ--ಬಡವರಾದ ನೀವು ಧನ್ಯರು; ಯಾಕಂದರೆ ದೇವರ ರಾಜ್ಯವು ನಿಮ್ಮದೇ.
ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?