Home Bibles ಕೀರ್ತನೆಗಳು 72:12 · ಕನ್ನಡ ಬೈಬಲ್
ಕೀರ್ತನೆಗಳು 72:12 · ಕನ್ನಡ ಬೈಬಲ್

ಆತನಿಗೆ ಮೊರೆ ಇಡುವ ಬಡವರನ್ನೂ ಸಹಾಯ ಕನಿಲ್ಲದ ದೀನನನ್ನೂ ಬಿಡಿಸುವನು.

Cross references

1 ಸಮುವೇಲ 22:2

ಇದಲ್ಲದೆ ಶ್ರಮೆಪಟ್ಟವರೂ ಸಾಲಗಾರರೂ ತೃಪ್ತಿಯಿಲ್ಲದವರೂ ಅವನ ಸಂಗಡ ಕೂಡಿಕೊಂಡರು. ಆಗ ಅವರಿಗೆ ದಾವೀದನು ಅಧಿಪತಿಯಾದನು, ಹೆಚ್ಚು ಕಡಿಮೆ ನಾನೂರು ಜನರು ಅವನ ಬಳಿಯಲ್ಲಿ ಇದ್ದರು.

2 ಸಮುವೇಲ 14:16

ನಿನ್ನ ದಾಸಿಯಾದ ನಾನು ಅರಸನ ಬಳಿಗೆ ಹೋಗುತ್ತೇನೆ; ಒಂದು ವೇಳೆ ಅರಸನು ತನ್ನ ದಾಸಿಯ ಕಾರ್ಯವನ್ನು ನೆರವೇರಿಸಿಯಾನು. ಅರಸನು ಕೇಳಿ ನನ್ನನ್ನು ನನ್ನ ಮಗನನ್ನೂ ದೇವರ ಬಾಧ್ಯತೆಯಲ್ಲಿಂದ ನಾಶಮಾಡಬೇಕಾದ ಮನುಷ್ಯರ ಕೈಯಿಂದ ದಾಸಿಯನ್ನು ತಪ್ಪಿಸುವನು ಎಂದು ಅಂದುಕೊಂಡೆನು.

ಯೋಬ 29:12

ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು.

ಯೋಬ 36:15

ಬಡವನನ್ನು ಆತನು ಕಷ್ಟದ ಸ್ಥಿತಿಯಿಂದ ತಪ್ಪಿಸುತ್ತಾನೆ. ಬಾಧೆಯಲ್ಲಿ ಅವರ ಕಿವಿ ಯನ್ನು ತೆರೆಯುತ್ತಾನೆ.

ಕೀರ್ತನೆಗಳು 10:17

ಕರ್ತನೇ, ದೀನರ ಆಶೆ ಯನ್ನು ಕೇಳಿದ್ದೀ; ನೀನು ಅವರ ಹೃದಯವನ್ನು ಸಿದ್ಧ ಪಡಿಸಿ ಅವರ ಮೊರೆಗೆ ಕಿವಿಗೊಡುತ್ತೀ.ಭೂಮಿಯ ಮನುಷ್ಯನು ಇನ್ನು ಭಯಪಡಿಸದ ಹಾಗೆ ದಿಕ್ಕಿಲ್ಲದ ವರಿಗೂ ಕುಗ್ಗಿದವರಿಗೂ ನ್ಯಾಯತೀರಿಸುವದಕ್ಕೆ ಕಿವಿಗೊಟ್ಟಿದ್ದೀ.

ಕೀರ್ತನೆಗಳು 55:17

ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು.

ಕೀರ್ತನೆಗಳು 72:4

ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು.

ಕೀರ್ತನೆಗಳು 82:3

ದರಿದ್ರ ನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿ ದೀನನಿಗೂ ಬಡವ ನಿಗೂ ನೀತಿಯನ್ನು ಮಾಡಿರಿ.

ಕೀರ್ತನೆಗಳು 102:17

ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ.

ಕೀರ್ತನೆಗಳು 102:20

ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ.

ಸಾಮೇತಿಗಳು 29:7

ಬಡವರ ನಿಮಿತ್ತ ನೀತಿವಂತನು ಯೋಚಿಸುತ್ತಾನೆ; ದುಷ್ಟನು ಅದನ್ನು ತಿಳುಕೊಳ್ಳುವಂತೆ ಲಕ್ಷ್ಯಕ್ಕೆ ತರುವ ದಿಲ್ಲ.

ಸಭಾಪ್ರಸಂಗಿ 4:1

ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.

ಯೆಶಾಯ 41:17

ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್‌ ದೇವ ರಾಗಿರುವ ನಾನು ಅವರನ್ನು ಕೈಬಿಡೆನು.

ಯೆಶಾಯ 63:4

ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು.

ಲೂಕ 4:18

ಕರ್ತನ ಆತ್ಮವು ನನ್ನ ಮೇಲೆ ಇದೆ; ಯಾಕಂದರೆ ಬಡವರಿಗೆ ಸುವಾರ್ತೆ ಸಾರುವದಕ್ಕೆ ಆತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯ ವುಳ್ಳವರನ್ನು ಸ್ವಸ್ಥಮಾಡುವದಕ್ಕೂ ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವದಕ್ಕೂ ಕುರುಡರಿಗೆ ದೃಷ್ಟಿ ಕೊಡುವದಕ್ಕೂ ಜಜ್ಜಲ್ಪಟ್ಟವರನ್ನು ಬಿ

ಲೂಕ 7:22

ತರು ವಾಯ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕುರು ಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠ ರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತದೆ ಎಂದು ನೀವು ಕಂಡು ಕೇಳಿದ ಇವು ಗಳನ್ನು

2 ಕೊರಿಂಥದವರಿಗೆ 8:9

ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.

ಹೆಬ್ರಿಯರಿಗೆ 7:25

ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.

ಪ್ರಕಟನೆ 3:17

ನೀನು--ನಾನು ಐಶ್ವರ್ಯವಂತನು, ಧನವೃದ್ಧಿಯುಳ್ಳವನು, ಯಾವದರ ಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ನಿರ್ಗತಿಕನು, ದರಿದ್ರನು, ಬಡವನು, ಕುರುಡನು, ಬೆತ್ತಲೆಯಾದವನು ಆಗಿರುವ ದನ್ನು ತಿಳಿಯದೆ ಇದ್ದೀ.

Interlinear

Choose Theme