ಪರ ಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರಿದ್ದಾರೆ? ನಿನ್ನ ಹೊರತಾಗಿ ಭೂಮಿಯಲ್ಲಿ ನಾನು ಅಪೇಕ್ಷಿಸುವವರು ಯಾರೂ ಇಲ್ಲ.
Cross references
ನೀನೇ ನನ್ನ ಕರ್ತನು; ನನ್ನ ಒಳ್ಳೇತನ ನಿನಗೆ ಮಾತ್ರವಲ್ಲದೆ
ಕರ್ತನು ನನ್ನ ಪಾಲಿನ ಮತ್ತು ನನ್ನ ಪಾತ್ರೆಯ ಭಾಗವಾಗಿದ್ದಾನೆ; ನೀನು ನನ್ನ ಸ್ವಾಸ್ತ್ಯವನ್ನು ಸ್ಥಿರವಾಗಿ ಕಾಪಾಡುತ್ತೀ.
ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.
ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
ಕರ್ತನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ನಿನಗೆ ಕೊಡುವನು.
ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ.
ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ಓ ದೇವರೇ, ನಿನ್ನನ್ನು ಕೊಂಡಾಡುವೆನು.ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
ನಿನ್ನ ಪ್ರೀತಿ ಕರುಣೆಯು ಜೀವಕ್ಕಿಂತ ಶ್ರೇಷ್ಠ ವಾದದ್ದು; ನನ್ನ ತುಟಿಗಳು ನಿನ್ನನ್ನು ಹೊಗಳುವವು.
ಪರ ಲೋಕದಲ್ಲಿ ಕರ್ತನಿಗೆ ಸಮಾನವಾದವನು ಯಾರು? ಪರಾಕ್ರಮಶಾಲಿಗಳ ಮಕ್ಕಳಲ್ಲಿ ಕರ್ತನಿಗೆ ಸಮಾನನಾದವನು ಯಾರು?
ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.
ನನ್ನ ಕೈಗಳನ್ನು ನಿನ್ನ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿನಗಾಗಿ ದಾಹಗೊಂಡಿದೆ.
ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.
ಅಂಜೂರದ ಮರವು ಚಿಗುರ ದಿದ್ದರೂ ದ್ರಾಕ್ಷೇಬಳ್ಳಿಗಳಲ್ಲಿ ಹಣ್ಣು ಇಲ್ಲದಿದ್ದರೂ ಎಣ್ಣೇ ಮರಗಳ ಉತ್ಪತ್ತಿಯು ನಿಂತುಹೋದರೂ ಹೊಲಗಳು ಆಹಾರ ಕೊಡದಿದ್ದರೂ ಹಟ್ಟಿಯೊಳಗಿಂದ ಮಂದೆಗಳು ಕಡಿದು ಬಿಡಲ್ಪಟ್ಟಿದ್ದರೂ ಗೋದಲಿಗಳಲ್ಲಿ ಮಂದೆ ಇಲ್ಲದಿದ್ದರೂ
ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.
ನನಗಿಂತ ಹೆಚ್ಚಾಗಿ ತಂದೆಯನ್ನಾಗಲೀ ತಾಯಿಯನ್ನಾಗಲೀ ಪ್ರೀತಿ ಮಾಡುವವನು ನನಗೆ ಯೋಗ್ಯನಲ್ಲ; ಮತ್ತು ಮಗನ ನ್ನಾಗಲೀ ಮಗಳನ್ನಾಗಲೀ ನನಗಿಂತ ಹೆಚ್ಚಾಗಿ ಪ್ರೀತಿ ಮಾಡುವವನು ನನಗೆ ಯೋಗ್ಯನಲ್ಲ.
ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
ಪ್ರಿಯರೇ, ನಾವು ಈಗ ದೇವರ ಪುತ್ರರಾಗಿದ್ದೇವೆ, ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತ್ಯಕ್ಷವಾಗಲಿಲ್ಲ. ಆತನು ಪ್ರತ್ಯಕ್ಷ ನಾದಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು; ಯಾಕಂದರೆ ನಾವು ಆತನನ್ನು ಆತನಿರುವ ಪ್ರಕಾರವೇ ನೋಡುವೆವು.
ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ
ಪಟ್ಟಣದಲ್ಲಿ ನಾನು ಆಲಯವನ್ನು ಕಾಣಲಿಲ್ಲ; ಯಾಕಂದರೆ ಸರ್ವಶಕ್ತನಾದ ದೇವರಾಗಿ ರುವ ಕರ್ತನೂ ಕುರಿಮರಿಯಾದಾತನೂ ಅದರ ಆಲಯವಾಗಿದ್ದಾರೆ.