Home Bibles ಕೀರ್ತನೆಗಳು 143:6 · ಕನ್ನಡ ಬೈಬಲ್
ಕೀರ್ತನೆಗಳು 143:6 · ಕನ್ನಡ ಬೈಬಲ್

ನನ್ನ ಕೈಗಳನ್ನು ನಿನ್ನ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿನಗಾಗಿ ದಾಹಗೊಂಡಿದೆ.

Cross references

ನಿರ್ಗಮಕಾಂಡ 9:29

ಆಗ ಮೋಶೆಯು ಅವನಿಗೆ--ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೆ ಕರ್ತನ ಕಡೆಗೆ ನನ್ನ ಕೈಗಳನ್ನು ಚಾಚುವೆನು; ಭೂಮಿಯು ಕರ್ತನದೇ ಎಂದು ನೀನು ತಿಳುಕೊಳ್ಳು ವಂತೆ ಗುಡುಗುಗಳು ನಿಂತುಹೋಗುವವು. ಆನೆಕಲ್ಲಿನ ಮಳೆಯು ಇನ್ನು ಬಾರದು.

ಯೋಬ 7:2

ಸೇವಕನು ನೆರಳನ್ನು ಅಪೇಕ್ಷಿಸುವ ಪ್ರಕಾರವೂ ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾ ರವೂ

ಯೋಬ 11:13

ನೀನು ನಿನ್ನ ಹೃದಯವನ್ನು ಸಿದ್ಧಮಾಡಿ ನಿನ್ನ ಕೈಗಳನ್ನು ಆತನ ಕಡೆಗೆ ಚಾಚಿದರೆ,

ಕೀರ್ತನೆಗಳು 42:1

ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ.

ಕೀರ್ತನೆಗಳು 42:3

ನಿನ್ನ ದೇವರು ಎಲ್ಲಿ ಎಂದು ಅವರು ದಿನವೆಲ್ಲಾ ನನಗೆ ಹೇಳುವ ದರಿಂದ ನನ್ನ ಕಣ್ಣೀರು ನನಗೆ ಹಗಲಿರುಳು ಆಹಾರ ವಾಗಿದೆ.

ಕೀರ್ತನೆಗಳು 44:20

ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದರೆ

ಕೀರ್ತನೆಗಳು 63:1

ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.

ಕೀರ್ತನೆಗಳು 84:2

ಕರ್ತನ ಅಂಗಳ ಗಳಿಗಾಗಿ ನನ್ನ ಪ್ರಾಣವು ಬಯಸಿ, ಹೌದು, ಅದು ಕುಂದುತ್ತದೆ; ನನ್ನ ಹೃದಯವೂ ಶರೀರವೂ ಜೀವ ವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ.

ಕೀರ್ತನೆಗಳು 88:9

ಬಾಧೆಯ ದೆಸೆಯಿಂದ ನನ್ನ ಕಣ್ಣು ದುಃಖಿಸುತ್ತದೆ. ಕರ್ತನೇ, ದಿನವೆಲ್ಲಾ ನಿನ್ನನ್ನು ಕರೆಯು ತ್ತೇನೆ; ನಾನು ನಿನ್ನ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.

ಕೀರ್ತನೆಗಳು 88:10

ಸತ್ತವರಿಗೆ ಅದ್ಭುತಗಳನ್ನು ತೋರಿಸುವಿಯೋ? ಸತ್ತವರು ಎದ್ದು ನಿನ್ನನ್ನು ಕೊಂಡಾಡುವರೋ? ಸೆಲಾ.

ಯೆಶಾಯ 26:8

ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.

ಯೆಶಾಯ 35:7

ಒಣನೆಲವು ಕೊಳವಾಗು ವದು; ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗು ವದು. ಸರ್ಪಗಳು ವಾಸಿಸುವ ಮಲಗುವ ಪ್ರತಿ ಯೊಂದು ಸ್ಥಳವು ಹುಲ್ಲು, ಜೊಂಡುಗಳಿಂದ ತುಂಬಿ ರುವದು.

ಯೋಹಾನ 7:37

ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.

Interlinear

Choose Theme