Home Bibles ಕೀರ್ತನೆಗಳು 69:8 · ಕನ್ನಡ ಬೈಬಲ್
ಕೀರ್ತನೆಗಳು 69:8 · ಕನ್ನಡ ಬೈಬಲ್

ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ; ನನ್ನ ಒಡಹುಟ್ಟಿದವರಿಗೆ ಪರಕೀಯನಾಗಿದ್ದೇನೆ.

Cross references

1 ಸಮುವೇಲ 17:28

ಆದರೆ ಅವನು ಆ ಮನುಷ್ಯರ ಸಂಗಡ ಮಾತನಾಡುತ್ತಿರು ವದನ್ನು ಅವನ ಹಿರಿಯ ಸಹೋದರನಾದ ಎಲೀಯಾ ಬನು ಕೇಳಿ ಅವನ ಮೇಲೆ ಕೋಪಗೊಂಡು--ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು; ನೀನು ಯುದ್ಧವನ್ನು ನೋಡಲು ಇಳಿದು ಬಂದಿದ್ದೀ ಅಂದನು.

ಯೋಬ 19:13

ನನ್ನ ಸಹೋದರರನ್ನು ನನಗೆ ದೂರ ಮಾಡು ತ್ತಾನೆ; ನನ್ನ ಪರಿಚಯದ ಸ್ನೇಹಿತರು ನನಗೆ ಅನ್ಯರೇ ಆದರು.

ಕೀರ್ತನೆಗಳು 31:11

ನನ್ನ ವೈರಿ ಗಳೆಲ್ಲರಿಗೆ, ವಿಶೇಷವಾಗಿ ನನ್ನ ನೆರೆಯವರಿಗೆ, ನಾನು ನಿಂದೆಯೂ ಪರಿಚಿತರಿಗೆ ಹೆದರಿಕೆಯೂ ಆಗಿದ್ದೇನೆ; ಹೊರಗೆ ನನ್ನನ್ನು ನೋಡಿದವರು ನನ್ನನ್ನು ಬಿಟ್ಟು ಓಡಿಹೋದರು.

ಕೀರ್ತನೆಗಳು 38:11

ನನ್ನ ಪ್ರಿಯರೂ ಸ್ನೇಹಿತರೂ ನನ್ನ ಹುಣ್ಣನ್ನು ನೋಡಿ ಓರೆಯಾಗಿ ನಿಲ್ಲುತ್ತಾರೆ; ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.

ಕೀರ್ತನೆಗಳು 89:51

ಕರ್ತನೇ, ನಿನ್ನ ಶತ್ರುಗಳು ನಿಂದಿಸುತ್ತಾ ರಲ್ಲಾ? ನಿನ್ನ ಅಭಿಷಿಕ್ತನ ಹೆಜ್ಜೆಗಳನ್ನು ನಿಂದಿಸುತ್ತಾ ರಲ್ಲಾ?ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್‌, ಅಮೆನ್‌.

ಕೀರ್ತನೆಗಳು 89:52

ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್‌, ಅಮೆನ್‌.

ಯೆಶಾಯ 50:6

ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.

ಯೆಶಾಯ 53:3

ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.

ಯೆಶಾಯ 53:4

ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು.

ಯೆರೆಮಿಯ 15:15

ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮಕ್ಕಳನ್ನು ಉತ್ತರ ದೇಶ ದೊಳಗಿಂದಲೂ ನಾನು ಅವರನ್ನು ಅಟ್ಟಿ ಬಿಟ್ಟಿದ್ದ ಸಮಸ್ತ ದೇಶಗಳೊಳಗಿಂದಲೂ ಬರಮಾಡಿ ನಾನು ಅವರ ಪಿತೃಗಳಿಗೆ ಕೊಟ್ಟಂಥ ಅವರ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು ಎಂದು ಹೇಳುವ ದಿನಗಳು ಬರುವವು.

ಮೀಕ 7:5

ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ.

ಮತ್ತಾಯ 10:21

ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.

ಮತ್ತಾಯ 10:35

ಹೇಗಂದರೆ ಮಗನಿಗೂ ಅವನ ತಂದೆಗೂ ಮಗಳಿಗೂ ಆಕೆಯ ತಾಯಿಗೂ ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವದಕ್ಕೆ ನಾನು ಬಂದಿದ್ದೇನೆ.

ಮತ್ತಾಯ 26:48

ಆತನನ್ನು ಹಿಡು ಕೊಡುವದಕ್ಕಿದ್ದವನು ಅವರಿಗೆ--ನಾನು ಯಾವಾತನಿಗೆ ಮುದ್ದಿಡುತ್ತೇನೋ ಅವನೇ ಆತನು. ಆತನನ್ನು ಗಟ್ಟಿ ಯಾಗಿ ಹಿಡಿಯಿರಿ ಎಂದು ಗುರುತನ್ನು ಹೇಳಿದ್ದನು.

ಮತ್ತಾಯ 26:56

ಆದರೆ ಪ್ರವಾದಿಗಳ ಬರಹಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

ಮತ್ತಾಯ 26:70

ಆದರೆ ಅವನು ಎಲ್ಲರ ಮುಂದೆ-- ನೀನು ಏನು ಹೇಳುತ್ತಿಯೋ ನಾನು ಅರಿಯೆನು ಎಂದು ಅಲ್ಲಗಳೆದನು.

ಯೋಹಾನ 1:11

ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ.

ಯೋಹಾನ 7:5

ಯಾಕಂದರೆ ಆತನ ಸಹೋದರರು ಸಹ ಆತನ ಮೇಲೆ ನಂಬಿಕೆ ಇಟ್ಟಿರಲಿಲ್ಲ.

Interlinear

Choose Theme