Home Bibles ಯೋಬ 19:13 · ಕನ್ನಡ ಬೈಬಲ್
ಯೋಬ 19:13 · ಕನ್ನಡ ಬೈಬಲ್

ನನ್ನ ಸಹೋದರರನ್ನು ನನಗೆ ದೂರ ಮಾಡು ತ್ತಾನೆ; ನನ್ನ ಪರಿಚಯದ ಸ್ನೇಹಿತರು ನನಗೆ ಅನ್ಯರೇ ಆದರು.

Cross references

ಯೋಬ 6:15

ನನ್ನ ಸಹೋದರರು ಹಳ್ಳದ ಹಾಗೆ ಮೋಸ ಮಾಡಿದ್ದಾರೆ; ಹಳ್ಳಗಳ ಪ್ರವಾಹದಂತೆ ಹಾದು ಹೋಗುತ್ತಾರೆ.

ಯೋಬ 6:20

ಅವರು ನಿರೀಕ್ಷಿ ಸಿದ್ದರಿಂದ ನಾಚುತ್ತಾರೆ; ಅವುಗಳ ಬಳಿಗೆ ಬಂದು ಲಜ್ಜೆಗೊಂಡರು

ಯೋಬ 6:21

ಈಗ ನೀವು ಏನೂ ಅಲ್ಲದವರಾ ಗಿದ್ದೀರಿ; ನನ್ನ ವಿಪತ್ತನ್ನು ನೋಡಿ ಭಯಪಡುತ್ತೀರಿ.

ಯೋಬ 16:7

ಆತನು ಈಗ ನನ್ನನ್ನು ದಣಿಸಿದ್ದಾನೆ; ನನ್ನ ಜೊತೆಯವರನ್ನೆಲ್ಲಾ ನೀನು ಹಾಳುಮಾಡಿದಿ.

ಯೋಬ 42:11

ಆಗ ಅವನ ಸಹೋದರರೆಲ್ಲರೂ ಅವನ ಸಹೋದರಿಯರೆಲ್ಲರೂ ಮುಂಚಿನ ಅವನ ಪರಿಚಿತಿಯವರೆಲ್ಲರೂ ಅವನ ಬಳಿಗೆ ಬಂದು ಅವನ ಸಂಗಡ ಅವನ ಮನೆಯಲ್ಲಿ ರೊಟ್ಟಿ ತಿಂದು, ಕರ್ತನು ಅವನ ಮೇಲೆ ಬರಮಾಡಿದ ಎಲ್ಲಾ ಕೇಡಿಗೋಸ್ಕರ ಅವನ ಸಂಗಡ ದುಃಖಪಟ್ಟು ಅವನನ್ನು ಸಂತೈಸಿದರು. ಅವರು ಅವನಿಗೆ ಪ್ರತಿ ಮನುಷ್ಯನು ಒಂದು ಹಣವನ್ನೂ ಬಂಗಾರದ ಒಂದು ಉಂಗುರವನ್ನೂ ಕೊಟ್ಟರು.

ಕೀರ್ತನೆಗಳು 31:11

ನನ್ನ ವೈರಿ ಗಳೆಲ್ಲರಿಗೆ, ವಿಶೇಷವಾಗಿ ನನ್ನ ನೆರೆಯವರಿಗೆ, ನಾನು ನಿಂದೆಯೂ ಪರಿಚಿತರಿಗೆ ಹೆದರಿಕೆಯೂ ಆಗಿದ್ದೇನೆ; ಹೊರಗೆ ನನ್ನನ್ನು ನೋಡಿದವರು ನನ್ನನ್ನು ಬಿಟ್ಟು ಓಡಿಹೋದರು.

ಕೀರ್ತನೆಗಳು 31:12

ಸತ್ತವನ ಹಾಗೆ ಮನಸ್ಸಿನೊಳಗಿಂದ ಮರೆತು ಬಿಡಲ್ಪಟ್ಟಿದ್ದೇನೆ; ನಾನು ಒಡೆದ ಬೋಕಿಯ ಹಾಗೆ ಇದ್ದೆನೆ.

ಕೀರ್ತನೆಗಳು 38:11

ನನ್ನ ಪ್ರಿಯರೂ ಸ್ನೇಹಿತರೂ ನನ್ನ ಹುಣ್ಣನ್ನು ನೋಡಿ ಓರೆಯಾಗಿ ನಿಲ್ಲುತ್ತಾರೆ; ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.

ಕೀರ್ತನೆಗಳು 38:12

ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.

ಕೀರ್ತನೆಗಳು 69:8

ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ; ನನ್ನ ಒಡಹುಟ್ಟಿದವರಿಗೆ ಪರಕೀಯನಾಗಿದ್ದೇನೆ.

ಕೀರ್ತನೆಗಳು 69:9

ನಿನ್ನ ಆಲಯದ ಆಸಕ್ತಿಯು ನನ್ನನ್ನು ತಿಂದುಬಿಟ್ಟಿದೆ; ನಿನ್ನನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.

ಕೀರ್ತನೆಗಳು 69:20

ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ.

ಕೀರ್ತನೆಗಳು 88:8

ನನ್ನ ಪರಿಚಿತರನ್ನು ನನಗೆ ದೂರಮಾಡಿದ್ದೀ; ನನ್ನನ್ನು ಅವ ರಿಗೆ ಅಸಹ್ಯ ಮಾಡಿದ್ದೀ; ಮುಚ್ಚಲ್ಪಟ್ಟಿದ್ದೇನೆ, ಹೊರಗೆ ಬರಲಾರೆನು.

ಕೀರ್ತನೆಗಳು 88:18

ಪ್ರಿಯನನ್ನೂ ಸ್ನೇಹಿತನನೂ ನನಗೆ ದೂರ ಮಾಡಿದ್ದೀ; ನನ್ನ ಕತ್ತಲೆಯ ಸ್ಥಳವೇ ನನ್ನ ಪರಿಚಿತರು.

ಮತ್ತಾಯ 26:56

ಆದರೆ ಪ್ರವಾದಿಗಳ ಬರಹಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

2 ತಿಮೋಥೆಯ 4:16

ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನೊಂದಿಗೆ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ತೊರೆದುಬಿಟ್ಟರು; ಇದು ಅವರ ಲೆಕ್ಕಕ್ಕೆ ಸೇರಿಸಲ್ಪಡದೆ ಇರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ.

Interlinear

Choose Theme