Home Bibles ☰ Books ಕೀರ್ತನೆಗಳು 69:17 · ಕನ್ನಡ ಬೈಬಲ್
ಕೀರ್ತನೆಗಳು 69:17 · ಕನ್ನಡ ಬೈಬಲ್

ನಿನ್ನ ಮುಖವನ್ನು ನಿನ್ನ ಸೇವಕನಿಗೆ ಮರೆಮಾಡಬೇಡ; ನಾನು ಇಕ್ಕಟ್ಟಿನಲ್ಲಿದ್ದೇನೆ; ಬೇಗ ನನಗೆ ಉತ್ತರಕೊಡು.

Cross references

ಯೋಬ 7:21

ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ.

ಕೀರ್ತನೆಗಳು 13:1

ಓ ಕರ್ತನೇ, ಎಷ್ಟರ ವರೆಗೆ ನನ್ನನ್ನು ಮರೆಯುವಿ? ಎಂದೆಂದಿಗೂ ಮರೆಯು ವಿಯೋ? ಎಷ್ಟರ ವರೆಗೆ ನಿನ್ನ ಮುಖವನ್ನು ನನ್ನಿಂದ ಮರೆಮಾಡುವಿ?

ಕೀರ್ತನೆಗಳು 22:24

ಸಂಕಟ ಪಡುವವನ ಸಂಕಟ ವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು.

ಕೀರ್ತನೆಗಳು 27:9

ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ; ನೀನು ನನಗೆ ಸಹಾಯಕನಾಗಿದ್ದೀ; ನನ್ನನ್ನು ವಿಸರ್ಜಿಸಬೇಡ; ನನ್ನ ರಕ್ಷಣೆಯ ಓ ದೇವರೇ, ನನ್ನನ್ನು ಬಿಟ್ಟುಬಿಡಬೇಡ.

ಕೀರ್ತನೆಗಳು 40:13

ಓ ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಓ ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು.

ಕೀರ್ತನೆಗಳು 44:24

ಯಾಕೆ ನಿನ್ನ ಮುಖವನ್ನು ಮರೆ ಮಾಡಿ ನಮ್ಮ ಸಂಕಟವನ್ನೂ ಬಾಧೆಯನ್ನೂ ಮರೆತು ಬಿಡುತ್ತೀ.

ಕೀರ್ತನೆಗಳು 66:14

ನನ್ನ ಇಕ್ಕಟ್ಟಿನಲ್ಲಿ ತುಟಿಗಳು ಉಚ್ಚರಿಸಿದಂಥ, ಬಾಯಿ ನುಡಿದಂಥ, ಹರಕೆಗಳನ್ನು ನಾನು ನಿನಗೆ ಸಲ್ಲಿಸುವೆನು.

ಕೀರ್ತನೆಗಳು 70:1

ಓ ದೇವರೇ, ನನ್ನನ್ನು ಬಿಡಿಸುವದಕ್ಕೂ ಕರ್ತನೇ, ನನ್ನ ಸಹಾಯಕ್ಕೂ ತ್ವರೆಪಡು.

ಕೀರ್ತನೆಗಳು 102:2

ನನಗೆ ಇಕ್ಕಟ್ಟು ಇರುವ ದಿವಸದಲ್ಲಿ ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸು; ನಾನು ಕರೆಯುವ ದಿವಸದಲ್ಲಿ ಬೇಗ ನನಗೆ ಉತ್ತರ ಕೊಡು.

ಕೀರ್ತನೆಗಳು 143:7

ಓ ಕರ್ತನೇ, ನನಗೆ ಬೇಗನೆ ಉತ್ತರಕೊಡು; ನನ್ನ ಪ್ರಾಣವು ಕುಂದಿಹೋಗಿದೆ; ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನವಾಗದ ಹಾಗೆ ನಿನ್ನ ಮುಖ ವನ್ನು ನನಗೆ ಮರೆಮಾಡಬೇಡ.

ಕೀರ್ತನೆಗಳು 143:9

ಓ ಕರ್ತನೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನಾನು ಅಡಗಿಕೊಳ್ಳು ವಂತೆ ನಿನ್ನ ಬಳಿಗೆ ಓಡುತ್ತೇನೆ.

ವಿಲಾಪಗಳು 3:22

ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.

ಮತ್ತಾಯ 26:38

ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು.

Interlinear

Choose Theme