Home Bibles ☰ Books ಯೋಬ 7:21 · ಕನ್ನಡ ಬೈಬಲ್
ಯೋಬ 7:21 · ಕನ್ನಡ ಬೈಬಲ್

ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ.

Cross references

2 ಸಮುವೇಲ 24:10

ಆದರೆ ದಾವೀದನು ಜನರನ್ನು ಲೆಕ್ಕಿಸಿದ ತರು ವಾಯ ಅವನು ತನ್ನ ಹೃದಯದಲ್ಲಿ ತಿವಿಯಲ್ಪಟ್ಟನು. ಆದದರಿಂದ ದಾವೀದನು ಕರ್ತನಿಗೆ--ನಾನು ಮಾಡಿ ದ್ದರಲ್ಲಿ ಮಹಾ ಪಾಪಮಾಡಿದೆನು. ಕರ್ತನೇ, ದಯ ಮಾಡಿ ನಿನ್ನ ಸೇವಕನ ಅಕ್ರಮವನ್ನು ಪರಿಹರಿಸು; ನಾನು ಬಹಳ ಹುಚ್ಚುತನ ಮಾಡಿದೆನು ಅಂದನು.

ಯೋಬ 3:13

ಹಾಗಾಗಿದ್ದರೆ ಈಗ ಮೌನವಾಗಿ ಮಲಗಿ ಕೊಳ್ಳುತ್ತಿದ್ದೆನು; ವಿಶ್ರಾಂತಿಯಲ್ಲಿರುತ್ತಿದ್ದೆನು.

ಯೋಬ 7:8

ನನ್ನನ್ನು ನೋಡು ವವನ ಕಣ್ಣು ನನ್ನನ್ನು ಇನ್ನು ಮೇಲೆ ನೋಡದು; ನಿನ್ನ ಕಣ್ಣುಗಳು ನನ್ನ ಮೇಲಿವೆ ನಾನು ಮಾತ್ರ ಇರು ವದಿಲ್ಲ.

ಯೋಬ 10:9

ಕುಂಬಾ ರನ ಮಣ್ಣಿನಂತೆ ನನ್ನನ್ನು ರೂಪಿಸಿದ್ದೀ ಎಂದು ಜ್ಞಾಪಕ ಮಾಡಿಕೋ ಎಂದು ಬೇಡಿಕೊಳ್ಳುತ್ತೇನೆ; ಆದಾಗ್ಯೂ ನನ್ನನ್ನು ಧೂಳಿಗೆ ತಿರುಗಿಸುತ್ತಿಯೋ?

ಯೋಬ 10:14

ನಾನು ಪಾಪಮಾಡಿದರೆ ನನ್ನನ್ನು ಗುರುತಿಸಿ ನನ್ನ ಅಕ್ರಮವನ್ನು ಪರಿಹರಿಸುವದಿಲ್ಲ.

ಯೋಬ 13:23

ನನ್ನ ಅಕ್ರಮಗಳೂ ಪಾಪಗಳೂ ಎಷ್ಟಿವೆ? ನನ್ನ ಅಪರಾಧವನ್ನೂ ಪಾಪವನ್ನೂ ನನಗೆ ತಿಳಿಯಪಡಿಸು.

ಯೋಬ 14:10

ಆದರೆ ಮನುಷ್ಯನು ಸತ್ತು ಕ್ಷಯಿಸಿ ಹೋಗುತ್ತಾನೆ; ಮನುಷ್ಯನು ಪ್ರಾಣ ಬಿಟ್ಟ ಬಳಿಕ ಅವನೆಲ್ಲಿರುವನು?

ಯೋಬ 17:14

ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು.

ಯೋಬ 20:8

ಕನಸಿನ ಹಾಗೆ ಅವನು ಕಾಣದೆ ಹಾರಿಹೋಗುವನು; ರಾತ್ರಿಯ ದರ್ಶನದ ಹಾಗೆ ಓಡಿಸಲ್ಪಡುವನು.

ಯೋಬ 21:32

ಅವನು ಸಮಾಧಿಗಳಿಗೆ ಒಯ್ಯಲ್ಪಡು ವನು; ಗೋರಿಯ ಮೇಲೆ ಇರುವನು.

ಕೀರ್ತನೆಗಳು 37:36

ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ.

ಕೀರ್ತನೆಗಳು 103:15

ಮನುಷ್ಯನ ದಿವಸಗಳೋ ಹುಲ್ಲಿನ ಹಾಗೆ ಅವೆ; ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ.

ಸಭಾಪ್ರಸಂಗಿ 12:7

ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂತಿರುಗು ವದು.

Interlinear

Choose Theme