Home Bibles ಕೀರ್ತನೆಗಳು 68:23 · ಕನ್ನಡ ಬೈಬಲ್
ಕೀರ್ತನೆಗಳು 68:23 · ಕನ್ನಡ ಬೈಬಲ್

ನಿನ್ನ ಪಾದವೂ ನಿನ್ನ ಶತ್ರುಗಳ ರಕ್ತದಲ್ಲಿ ಕಲಕುವ ಹಾಗೆ ಮಾಡುವೆನು. ನಿನ್ನ ನಾಯಿಗಳ ನಾಲಿಗೆಯೂ ಸಹ ಹಾಗೆಯೇ ಮಾಡುವದು.

Cross references

1 ಅರಸುಗಳು 21:19

ನೀನು ಅವನಿಗೆನೀನು ಕೊಂದುಹಾಕಿ ಸ್ವಾಧೀನಮಾಡಿಕೊಂಡಿಯಲ್ಲಾ. ಆದದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕು ವವು ಎಂದು ಕರ್ತನು ಹೇಳುತ್ತಾನೆಂದು ಅಂದನು.

1 ಅರಸುಗಳು 22:38

ಆ ರಥವು ಸಮಾರ್ಯದ ಕೆರೆಯಲ್ಲಿ ತೊಳೆಯಲ್ಪಡುವಾಗ ಕರ್ತನು ಹೇಳಿದ ವಾಕ್ಯದ ಪ್ರಕಾರವೇ ನಾಯಿಗಳು ಅವನ ರಕ್ತವನ್ನು ನೆಕ್ಕಿದವು; ಹಾಗೆಯೇ ಅವರು ಕವಚವನ್ನು ತೊಳೆದರು.

2 ಅರಸುಗಳು 9:33

ಅವನು-- ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ ಅಂದನು. ಅವರು ಅವ ಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ ಕುದುರೆಗಳ ಮೇಲೆಯೂ ಚೆಲ್ಲಲ್ಪಟ್ಟಿತು. ಅವನು ಅವಳನ್ನು ತುಳಿಸಿದನು.

ಕೀರ್ತನೆಗಳು 58:10

ಮುಯ್ಯಿಗೆಮುಯ್ಯಿ ಆಗುವದನ್ನು ನೀತಿವಂತನು ದೃಷ್ಟಿಸುವಾಗ ಅವನು ಸಂತೋಷ ಪಡುವನು; ಅವನು ತನ್ನ ಪಾದಗಳನ್ನು ದುಷ್ಟರ ರಕ್ತ ದಲ್ಲಿ ತೊಳೆಯುವನು.ನಿಶ್ಚಯವಾಗಿ ನೀತಿವಂತನಿಗೆ ಪ್ರತಿಫಲವಿದೆ; ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯ ತೀರಿಸುವ ದೇವರು ಆತನೇ ಎಂದು ಮನುಷ್ಯನು ಹೇಳುವನು.

ಯೆಶಾಯ 63:1

ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ.

ಆಮೋಸ 9:3

ಅವರು ಕರ್ಮೆಲಿನ ಬೆಟ್ಟದ ಕೊನೆಯಲ್ಲಿ ಅಡಗಿಕೊಂಡರೂ ನಾನು ಅವರನ್ನು ಹುಡುಕಿ ಅಲ್ಲಿಂದ ತೆಗೆಯುವೆನು; ಅವರು ನನ್ನ ಕಣ್ಣುಗಳಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ ಸರ್ಪಕ್ಕೆ ಅಪ್ಪಣೆಕೊಟ್ಟು ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.

ಪ್ರಕಟನೆ 19:17

ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವದನ್ನು ನಾನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ--ಬನ್ನಿರಿ, ಮಹಾ ದೇವರ ಭೋಜನಕ್ಕೆ ಕೂಡಿಕೊಳ್ಳಿರಿ,

Interlinear

Choose Theme