Home Bibles ☰ Books 2 ಅರಸುಗಳು 9:33 · ಕನ್ನಡ ಬೈಬಲ್
2 ಅರಸುಗಳು 9:33 · ಕನ್ನಡ ಬೈಬಲ್

ಅವನು-- ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ ಅಂದನು. ಅವರು ಅವ ಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ ಕುದುರೆಗಳ ಮೇಲೆಯೂ ಚೆಲ್ಲಲ್ಪಟ್ಟಿತು. ಅವನು ಅವಳನ್ನು ತುಳಿಸಿದನು.

Cross references

1 ಅರಸುಗಳು 21:11

ಆಗ ಅವನ ಪಟ್ಟಣದಲ್ಲಿರುವ ಹಿರಿಯರೂ ಗೌರವಸ್ಥರೂ ತಮಗೆ ಈಜೆಬೆಲಳು ಕಳುಹಿಸಿದ ಪತ್ರದ ಪ್ರಕಾರವೇ ಮಾಡಿ ದರು.

2 ಅರಸುಗಳು 7:20

ಆ ಪ್ರಕಾರವೇ ಅವನಿಗೆ ಸಂಭವಿಸಿತು; ಏನಂದರೆ ಬಾಗಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಸತ್ತನು.

2 ಅರಸುಗಳು 9:26

ನಾನೂ ನೀನೂ ಅವನ ತಂದೆಯಾದ ಅಹಾಬನ ಹಿಂದೆ ಕುದುರೆ ಏರಿಕೊಂಡು ಹೋಗುತ್ತಿರುವಾಗ ಕರ್ತನು ಈ ಭಾರವನ್ನು ಅವನ ಮೇಲೆ ಹೊರಿಸಿದನೆಂದು ಜ್ಞಾಪಕಮಾಡಿಕೋ. ಏನಂದರೆ--ನಾಬೋತನ ರಕ್ತವನ್ನೂ ಅವನ ಕುಮಾರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ--ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆ ನೆಂದು ಕರ್ತನು ಹೇಳುತ್ತಾನೆ. ಆದದರಿಂದ ಕರ್ತನ ವಾಕ್ಯದ ಪ್ರಕಾರ ಅವನನ್ನು ಎತ್ತಿಕೊಂಡು ಆ ಹೊಲ ದಲ್ಲಿ ಹಾಕಿಬಿಡು ಅಂದನು.

ಯೆಶಾಯ 25:10

ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.

ಯೆಶಾಯ 26:6

ಕಾಲು ತುಳಿ ತಕ್ಕೆ ಈಡಾಗಿದೆ, ಬಡವರ ಕಾಲುಗಳೂ ದೀನರ ಪಾದಗಳೂ ಅದನ್ನು ತುಳಿಯುವವು;

ವಿಲಾಪಗಳು 1:15

ಕರ್ತನು ನನ್ನ ಎದುರಿನಲ್ಲಿ ನನ್ನ ಪರಾಕ್ರಮಶಾಲಿಗಳನ್ನೆಲ್ಲಾ ಕಾಲಿನ ಕೆಳಗೆ ತುಳಿದುಬಿಟ್ಟಿದ್ದಾನೆ; ಆತನು ನನ್ನ ಯೌವನಸ್ಥರನ್ನು ಜಜ್ಜಲು ನನಗೆ ವಿರುದ್ಧವಾಗಿ ಸಭೆಯನ್ನು ಕರೆದಿದ್ದಾನೆ; ಕರ್ತನು ಯೆಹೂದದ ಮಗಳಾದ ಕನ್ಯೆಯನ್ನು ದ್ರಾಕ್ಷೆಯ ತೊಟ್ಟಿಯಂತೆ ತುಳಿದಿದ್ದಾನೆ.

ಮೀಕ 7:10

ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು.

ಜೆಕರ್ಯ 10:5

ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು.

ಮಲಾಕಿ 4:3

ದುಷ್ಟರನ್ನು ತುಳಿದುಬಿಡುವಿರಿ; ಯಾಕಂದರೆ ನಾನು ಕಾರ್ಯ ಸಾಧಿಸುವ ದಿನದಲ್ಲಿ ಅವರು ನಿಮ್ಮ ಪಾದಗಳ ಕೆಳಗೆ ಬೂದಿಯಾಗಿರುವರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಮತ್ತಾಯ 5:13

ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಅದಕ್ಕೆ ಇನ್ನಾತ ರಿಂದ ರುಚಿ ಬಂದೀತು? ಅಂದಿನಿಂದ ಅದು ನಿಷ್ಪ್ರಯೋಜನವಾದದ್ದಾಗಿ ಹೊರಗೆ ಬಿಸಾಡಲ್ಪಟ್ಟು ಜನರಿಂದ ತುಳಿದಾಡಲ್ಪಡುವದು.

ಹೆಬ್ರಿಯರಿಗೆ 10:29

ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.

Interlinear

Choose Theme