Home Bibles ಕೀರ್ತನೆಗಳು 31:17 · ಕನ್ನಡ ಬೈಬಲ್
ಕೀರ್ತನೆಗಳು 31:17 · ಕನ್ನಡ ಬೈಬಲ್

ಓ ಕರ್ತನೇ, ನಿನಗೆ ಮೊರೆಯಿಟ್ಟಿದ್ದೇನೆ; ನಾನು ಆಶಾಭಂಗಪಡ ದಂತೆ ಮಾಡು; ದುಷ್ಟರು ಆಶಾಭಂಗಪಡಲಿ; ಅವರು ಸಮಾಧಿಯಲ್ಲಿ ಮೌನವಾಗಿರಲಿ.

Cross references

1 ಸಮುವೇಲ 2:9

ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು.

ಕೀರ್ತನೆಗಳು 4:7

ಅವರ ಧಾನ್ಯವೂ ದ್ರಾಕ್ಷಾರಸವೂ ಹೆಚ್ಚಿದ ಕಾಲಕ್ಕಿಂತ ಅಧಿಕ ವಾಗಿ ನನ್ನ ಹೃದಯದಲ್ಲಿ ಸಂತೋಷವನ್ನು ಇಟ್ಟಿದ್ದೀ.ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ.

ಕೀರ್ತನೆಗಳು 6:10

ನನ್ನ ಶತ್ರುಗಳೆಲ್ಲರು ನಾಚಿಕೆಪಟ್ಟು ಬಹಳವಾಗಿ ಕಳವಳ ಗೊಳ್ಳಲಿ; ಅವರು ತಿರುಗಿಕೊಂಡು ಕ್ಷಣಮಾತ್ರದಲ್ಲಿ ನಾಚಿಕೆಪಡಲಿ.

ಕೀರ್ತನೆಗಳು 25:2

ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.

ಕೀರ್ತನೆಗಳು 31:1

ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟು ಕೊಂಡಿದ್ದೇನೆ; ನಾನು ಎಂದಿಗೂ ಆಶಾ ಭಂಗಪಡದಂತೆ ಮಾಡು; ನಿನ್ನ ನೀತಿಯಲ್ಲಿ ನನ್ನನ್ನು ರಕ್ಷಿಸು.

ಕೀರ್ತನೆಗಳು 34:5

ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ.

ಕೀರ್ತನೆಗಳು 35:4

ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.

ಕೀರ್ತನೆಗಳು 35:26

ನನ್ನ ಕೇಡಿನಲ್ಲಿ ಸಂತೋಷ ಪಡುವವರು ಕೂಡ ನಾಚಿಕೊಂಡು ಒಟ್ಟಿಗೆ ಗಲಿಬಿಲಿ ಯಾಗಿಲಿ, ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊದ್ದುಕೊಳ್ಳಲಿ.

ಕೀರ್ತನೆಗಳು 40:14

ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.

ಕೀರ್ತನೆಗಳು 69:6

ಸೈನ್ಯಗಳ ಕರ್ತನಾದ ದೇವರೇ, ನಿನ್ನನ್ನು ನಿರೀಕ್ಷಿಸು ವವರು ನನ್ನ ದೆಸೆಯಿಂದ ನಾಚಿಕೆಪಡದಿರಲಿ; ಓ ಇಸ್ರಾಯೇಲಿನ ದೇವರೇ, ನಿನ್ನನ್ನು ಹುಡುಕುವವರು ನನ್ನಿಂದ ಅವಮಾನಪಡದಿರಲಿ.

ಕೀರ್ತನೆಗಳು 70:2

ನನ್ನ ಪ್ರಾಣವನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಿಸುವವರು ಹಿಂದಿರುಗಿ ಗಲಿಬಿಲಿಯಾಗಲಿ.

ಕೀರ್ತನೆಗಳು 71:24

ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.

ಕೀರ್ತನೆಗಳು 80:4

ಸೈನ್ಯಗಳ ದೇವರಾದ ಓ ಕರ್ತನೇ, ಎಷ್ಟರವರೆಗೆ ನಿನ್ನ ಜನರ ಪ್ರಾರ್ಥನೆಗೆ ವಿರೋಧವಾಗಿ ಕೋಪ ಗೊಳ್ಳುತ್ತೀ?

ಕೀರ್ತನೆಗಳು 80:8

ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ.

ಕೀರ್ತನೆಗಳು 83:16

ಓ ಕರ್ತನೇ, ನಿನ್ನ ನಾಮವನ್ನು ಅವರು ಹುಡುಕುವ ಹಾಗೆ ಅವರ ಮುಖಗಳನ್ನು ನಾಚಿಕೆ ಯಿಂದ ತುಂಬಿಸು.

ಕೀರ್ತನೆಗಳು 94:17

ಕರ್ತನು ನನಗೆ ಸಹಾಯಕ ನಾಗಿರದಿದ್ದರೆ ನನ್ನ ಪ್ರಾಣವು ಮೌನದಲ್ಲಿ ವಾಸಿಸ ಬೇಕಾಗಿತ್ತು.

ಕೀರ್ತನೆಗಳು 115:17

ಸತ್ತವರೂ ಮೌನಕ್ಕೆ ಇಳಿದವರೆಲ್ಲರೂ ಕರ್ತನನ್ನು ಸ್ತುತಿಸುವ ದಿಲ್ಲ.ನಾವಾದರೋ ಇಂದಿನಿಂದ ಯುಗಯುಗಕ್ಕೂ ಕರ್ತನನ್ನು ಸ್ತುತಿಸುವೆವು. ಕರ್ತನನ್ನು ಸ್ತುತಿಸಿರಿ.

ಯೆಶಾಯ 41:11

ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು;

ಯೆಶಾಯ 45:16

ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.

ಯೆಶಾಯ 50:6

ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.

ಯೆಶಾಯ 65:13

ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ;

ಯೆರೆಮಿಯ 20:11

ಯೆಹೂದದ ಅರಸನ ಮನೆಯವರಿಗೆ ಹೀಗೆ ಹೇಳು--

ದಾನಿಯೇಲ 12:2

ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.

ಯೋವೇಲ 2:26

ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು ನಿಮ್ಮಲ್ಲಿ ಅದ್ಭುತದಿಂದ ನಡಿಸಿದ ನಿಮ್ಮ ದೇವರಾದ ಕರ್ತನ ಹೆಸರನ್ನು ಸ್ತುತಿಸುವಿರಿ; ನನ್ನ ಜನರು ಎಂದೆಂದಿಗೂ ನಾಚಿಕೆಪಡರು.

ಮತ್ತಾಯ 22:12

ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.

Interlinear

Choose Theme