ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ.
Cross references
ಆದದರಿಂದ ದಾವೀದನು ಹೆಚ್ಚು ಕಡಿಮೆ ಆರು ನೂರು ಮಂದಿಯಾದ ತನ್ನ ಜನರು ಎದ್ದು ಕೆಯಾಲಾವನ್ನು ಬಿಟ್ಟು ಹೊರಟು ತಾವು ಹೋಗಬೇಕಾದಲ್ಲಿಗೆ ಹೋದರು. ದಾವೀದನು ಕೆಯಾಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಹೊರಡುವದನ್ನು ನಿಲ್ಲಿಸಿಬಿಟ್ಟನು.
ಆಗ ಯೋವಾಬನು ಮನೆಯೊಳಗೆ ಅರಸನ ಬಳಿಗೆ ಬಂದು ಅವನಿಗೆ--
ಯೆಹೂದ್ಯರಿಗೆ ಬೆಳಕೂ ಸಂತೋಷವೂ ಆನಂದವೂ ಘನವೂ ಉಂಟಾ ಗಿದ್ದವು.ಪ್ರತಿ ಪ್ರಾಂತ್ಯದಲ್ಲಿಯೂ ಪ್ರತಿ ಪಟ್ಟಣ ದಲ್ಲಿಯೂ ಅರಸನ ಮಾತೂ ಅವನ ಆಜ್ಞೆಯೂ ಎಲ್ಲಿಗೆ ಬಂತೋ ಅಲ್ಲಿ ಯೆಹೂದ್ಯರಿಗೆ ಸಂತೋಷವೂ ಆನಂದವೂ ಹಬ್ಬವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಆ ದೇಶದ ಅನೇಕ ಜನರು ಯೆಹೂದ್ಯ ರಾದರು. ಯಾಕಂದರೆ ಯೆಹೂದ್ಯರ ಭಯವು ಅವರ ಮೇಲೆ ಇತ್ತು.
ಕರ್ತನೇ ನನ್ನನ್ನು ಕಾಪಾಡಿದ್ದರಿಂದ ನಾನು ಮಲಗಿ ನಿದ್ದೆಗೈದು ಎಚ್ಚತ್ತೆನು.
ನನ್ನ ದೇವರಾದ ಓ ಕರ್ತನೇ, ದೃಷ್ಟಿಸಿ ನನಗೆ ಉತ್ತರಕೊಡು; ನಾನು ಮರಣದ ನಿದ್ದೆಮಾಡದ ಹಾಗೆಯೂ
ನೀನು ನನ್ನ ದೀಪವನ್ನು ಬೆಳಗಿಸುವಿ; ನನ್ನ ದೇವ ರಾದ ಕರ್ತನು ನನ್ನ ಕತ್ತಲೆಯನ್ನು ಪ್ರಕಾಶಿಸುವಂತೆ ಮಾಡುವನು.
ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ.
ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟು. ನಿನ್ನ ತೇಜಸ್ಸಿನ ಬೆಳಕನ್ನು ನೋಡುವೆವು.
ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.
ಓ ಕರ್ತನೇ, ನಿನ್ನ ನಾಮವನ್ನು ಅವರು ಹುಡುಕುವ ಹಾಗೆ ಅವರ ಮುಖಗಳನ್ನು ನಾಚಿಕೆ ಯಿಂದ ತುಂಬಿಸು.
ಬೆಳಕು ನೀತಿವಂತನಿಗೋಸ್ಕರವೂ ಸಂತೋಷವು ಯಥಾರ್ಥ ಹೃದಯದವರಿಗೋಸ್ಕರವೂ ಬಿತ್ತಲ್ಪಟ್ಟಿವೆ.ನೀತಿವಂತರೇ, ಕರ್ತನಲ್ಲಿ ಸಂತೋ ಷಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
ಪರಲೋಕದಲ್ಲಿ ವಾಸವಾಗಿರುವಾತನೇ, ನಿನ್ನ ಕಡೆಗೆ ನನ್ನ ಕಣ್ಣುಗಳನ್ನು ಎತ್ತುತ್ತೇನೆ.
ನಾನು ಕೂಗಿಕೊಂಡ ದಿವಸದಲ್ಲಿ ನೀನು ನನಗೆ ಉತ್ತರ ಕೊಟ್ಟೆ; ನನ್ನ ಪ್ರಾಣವನ್ನು ಬಲಪಡಿಸಿದ್ದೀ; ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು ನನ್ನನ್ನು ಬಲಪಡಿಸಿದ್ದೀ.
ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿ ರಕ್ಷಣೆಯನ್ನು ಹೊಂದಿರಿ; ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.
ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು.
ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ