Home Bibles ಕೀರ್ತನೆಗಳು 29:10 · ಕನ್ನಡ ಬೈಬಲ್
ಕೀರ್ತನೆಗಳು 29:10 · ಕನ್ನಡ ಬೈಬಲ್

ಕರ್ತನು ಪ್ರಳಯದ ಮೇಲೆ ಕೂತುಕೊಳ್ಳುತ್ತಾನೆ; ಹೌದು, ಯುಗಯುಗಕ್ಕೂ ಕರ್ತನು ಅರಸನಾಗಿ ಕೂತು ಕೊಂಡಿದ್ದಾನೆ.ಕರ್ತನು ತನ್ನ ಜನರಿಗೆ ಬಲವನ್ನು ಕೊಡುವನು; ಕರ್ತನು ತನ್ನ ಜನರನ್ನು ಸಮಾಧಾನ ದಿಂದ ಆಶೀರ್ವದಿಸುವನು.

Cross references

ಆದಿಕಾಂಡ 6:17

ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.

ಆದಿಕಾಂಡ 8:1

ಆಗ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಜೀವರಾಶಿ ಗಳನ್ನೂ ಪಶುಗಳನ್ನೂ ಜ್ಞಾಪಕಮಾಡಿಕೊಂಡು ದೇವರು ಭೂಮಿಯ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.

ಯೋಬ 38:8

ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು?

ಯೋಬ 38:25

ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು?

ಕೀರ್ತನೆಗಳು 2:6

ಆದಾಗ್ಯೂ ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.

ಕೀರ್ತನೆಗಳು 9:8

ಆತನೇ ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವನು; ಆತನು ಪ್ರಜೆಗಳಿಗೆ ಯಥಾರ್ಥವಾಗಿ ನ್ಯಾಯತೀರ್ಪು ಕೊಡುವನು.

ಕೀರ್ತನೆಗಳು 10:16

ಕರ್ತನು ಯುಗ ಯುಗಾಂತರಗಳಿಗೂ ಅರಸನಾಗಿದ್ದಾನೆ; ಅನ್ಯಜನಾಂಗಗಳು ಆತನ ದೇಶದೊ ಳಗಿಂದ ನಾಶವಾದರು.

ಕೀರ್ತನೆಗಳು 29:3

ಕರ್ತನ ಧ್ವನಿಯು ನೀರುಗಳ ಮೇಲೆ ಅದೆ. ಮಹಿ ಮೆಯ ದೇವರು ಗುಡುಗುತ್ತಾನೆ. ಕರ್ತನು ಬಹಳ ನೀರುಗಳ ಮೇಲೆ ಇದ್ದಾನೆ.

ಕೀರ್ತನೆಗಳು 65:7

ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,

ಕೀರ್ತನೆಗಳು 93:1

ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.

ಕೀರ್ತನೆಗಳು 99:1

ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.

ಕೀರ್ತನೆಗಳು 104:6

ನೀನು ಜಲಾಗಾಧದಿಂದ ವಸ್ತ್ರದ ಹಾಗೆ ಅದನ್ನು ಮುಚ್ಚಿದ್ದೀ; ಬೆಟ್ಟಗಳ ಮೇಲೆ ನೀರುಗಳು ನಿಂತವು.

ದಾನಿಯೇಲ 2:44

ಅರ ಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವನು. ಅದರ ರಾಜ್ಯ ವನ್ನು ಬೇರೆ ಜನರಿಗೆ ಕೊಡದೆ ಆ ರಾಜ್ಯಗಳನ್ನೆಲ್ಲಾ ಧ್ವಂಸ ಮಾಡಿ ಮುಗಿಸಿ ಎಂದೆಂದಿಗೂ ನಿಲ್ಲುವದು.

ಮತ್ತಾಯ 6:13

ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್‌.

ಮಾರ್ಕ 4:41

ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.

1 ತಿಮೋಥೆಯ 1:17

ನಿತ್ಯನಾದ ಅರಸನೂ ನಿರ್ಲಯನೂ ಅದೃಶ್ಯನೂ ಆಗಿರುವ ಜ್ಞಾನಿಯಾದ ಒಬ್ಬನೇ ದೇವರಿಗೆ ಘನವೂ ಮಹಿಮೆಯೂ ಎಂದೆಂದಿಗೂ ಇರಲಿ. ಆಮೆನ್‌.

Interlinear

Choose Theme