Home Bibles ಕೀರ್ತನೆಗಳು 27:13 · ಕನ್ನಡ ಬೈಬಲ್
ಕೀರ್ತನೆಗಳು 27:13 · ಕನ್ನಡ ಬೈಬಲ್

ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.

Cross references

ಯೋಬ 28:13

ಮನುಷ್ಯನು ಅದರ ಬೆಲೆಯನ್ನು ತಿಳಿದುಕೊಳ್ಳುವದಿಲ್ಲ; ಜೀವಿತರ ಭೂಮಿಯಲ್ಲಿ ಅದು ದೊರಕುವದಿಲ್ಲ.

ಯೋಬ 33:30

ಅವನ ಪ್ರಾಣವನ್ನು ಕುಣಿಯಿಂದ ಹಿಂತಿರುಗಿ ತಂದು ಜೀವದ ಬೆಳಕಿನಿಂದ ಅವನನ್ನು ಬೆಳಗುವ ಹಾಗೆ ಮಾಡುವನು.

ಕೀರ್ತನೆಗಳು 31:19

ನಿನಗೆ ಭಯಪಡುವವರಿಗೋಸ್ಕರ ಮನುಷ್ಯ ಪುತ್ರರ ಮುಂದೆ ನಿನ್ನಲ್ಲಿ ಭರವಸೆ ಇಟ್ಟವರಿಗೋಸ್ಕರ ನೀನು ಇಟ್ಟಿರುವ ಒಳ್ಳೇತನವು ಎಷ್ಟೋ ದೊಡ್ಡದು.

ಕೀರ್ತನೆಗಳು 42:5

ನನ್ನ ಪ್ರಾಣವೇ,ನೀನು ಕುಗ್ಗಿಹೋಗಿರುವದೇನು? ನನ್ನಲ್ಲಿ ನೀನು ಯಾಕೆ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು; ನಾನು ಆತನ ಸಹಾಯಕ್ಕಾಗಿ ಆತನನ್ನು ಇನ್ನೂ ಕೊಂಡಾಡುವೆನು.

ಕೀರ್ತನೆಗಳು 52:5

ಆದದರಿಂದ ದೇವರು ಅದೇ ರೀತಿಯಲ್ಲಿ ನಿನ್ನನ್ನು ಸದಾಕಾಲಕ್ಕೂ ನಾಶಮಾಡಿ, ತೆಗೆದುಬಿಡುವನು. ನಿನ್ನ ವಾಸಸ್ಥಳದಿಂದ ಕಿತ್ತುಹಾಕುವನು; ಜೀವಿತರ ದೇಶ ದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವನು. ಸೆಲಾ.

ಕೀರ್ತನೆಗಳು 56:3

ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು.

ಕೀರ್ತನೆಗಳು 56:13

ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?

ಕೀರ್ತನೆಗಳು 116:9

ಜೀವಿತರ ದೇಶದಲ್ಲಿ ಕರ್ತನ ಮುಂದೆ ನಡೆದುಕೊಳ್ಳುವೆನು.

ಕೀರ್ತನೆಗಳು 142:5

ಓ ಕರ್ತನೇ, ನಿನಗೆ ಮೊರೆಯಿಡುತ್ತೇನೆ, ನಾನು ಹೇಳುವದೇನಂದರೆ -- ನೀನು ನನ್ನ ಆಶ್ರಯವೂ ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀ ಎಂಬದೇ.

ಕೀರ್ತನೆಗಳು 142:6

ನನ್ನ ಕೂಗನ್ನು ಆಲೈಸು; ನಾನು ಬಹಳ ಕುಂದಿ ಹೋಗಿದ್ದೇನೆ. ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸು; ಅವರು ನನಗಿಂತ ಬಲವುಳ್ಳವರಾಗಿದ್ದಾರೆ.ನಿನ್ನ ಹೆಸರನ್ನು ಕೊಂಡಾಡುವ ಹಾಗೆ ನನ್ನ ಪ್ರಾಣ ವನ್ನು ಸೆರೆಯಿಂದ ಹೊರಗೆ ಬರಮಾಡು; ನೀತಿವಂತರು ನನ್ನನ್ನು ಮುತ್ತಿಕೊಳ್ಳುವರು; ನನಗೆ ನೀನು ಉಪಕಾರ ಮಾಡುವಿ.

ಯೆಶಾಯ 38:11

ಕರ್ತನನ್ನು, ಜೀವಿತರ ದೇಶದಲ್ಲಿಯೂ ಸಹ ಕರ್ತನನ್ನು ನೋಡೆನೆಂದೂ ಇನ್ನೂ ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ನೋಡಲಾರೆ ನಲ್ಲಾ ಎಂದು ಅಂದುಕೊಂಡೆನು.

ಯೆಶಾಯ 38:19

ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು.

ಯೆಹೆಜ್ಕೇಲ 26:20

ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.

2 ಕೊರಿಂಥದವರಿಗೆ 4:1

ಆದದರಿಂದ ನಾವು ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಡುವದಿಲ್ಲ.

2 ಕೊರಿಂಥದವರಿಗೆ 4:8

ಎಲ್ಲಾ ಕಡೆಗಳಲ್ಲಿ ನಮಗೆ ಕಳವಳ ವಿದ್ದರೂ ನಾವು ಸಂಕಟಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ.

2 ಕೊರಿಂಥದವರಿಗೆ 4:16

ಈ ಕಾರಣದಿಂದ ನಾವು ಧೈರ್ಯಗೆಡುವದಿಲ್ಲ; ಆದರೆ ನಮ್ಮ ಹೊರಮನುಷ್ಯನು ನಾಶವಾಗುತಾ ಇದ್ದರೂ ನಮ್ಮ ಒಳಮನುಷ್ಯನು ದಿನೇದಿನೇ ಹೊಸಬ ನಾಗುತ್ತಾ ಇರುವನು.

ಎಫೆಸದವರಿಗೆ 2:8

ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.

Interlinear

Choose Theme