Home Bibles ಕೀರ್ತನೆಗಳು 116:9 · ಕನ್ನಡ ಬೈಬಲ್
ಕೀರ್ತನೆಗಳು 116:9 · ಕನ್ನಡ ಬೈಬಲ್

ಜೀವಿತರ ದೇಶದಲ್ಲಿ ಕರ್ತನ ಮುಂದೆ ನಡೆದುಕೊಳ್ಳುವೆನು.

Cross references

ಆದಿಕಾಂಡ 17:1

ಅಬ್ರಾಮನು ತೊಂಭತ್ತೊಂಭತ್ತು ವರುಷದವನಾದಾಗ ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಾನೇ ಸರ್ವಶಕ್ತನಾದ ದೇವರು; ನನ್ನ ಸನ್ನಿಧಿಯಲ್ಲಿ ನಡೆದು ನೀನು ಸಂಪೂರ್ಣನಾಗಿರು.

1 ಅರಸುಗಳು 2:4

ನೀನು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ನಿನ್ನ ದೇವರಾದ ಕರ್ತನ ನಿಯಮಗಳನ್ನೂ ಆಜ್ಞೆಗಳನ್ನೂ ನ್ಯಾಯಗಳನ್ನೂ ಸಾಕ್ಷಿಗಳನ್ನೂ ಕೈಕೊಂಡು ಆತನ ಮಾರ್ಗದಲ್ಲಿ ನಡೆಯುವ ಹಾಗೆ ಆತನ ಆಜ್ಞೆಯನ್ನು ಕೈಗೊಳ್ಳು.

1 ಅರಸುಗಳು 8:25

ನೀನು ನಿನ್ನ ಬಾಯಿಂದ ಹೇಳಿದ್ದನ್ನು ಇಂದಿನ ಪ್ರಕಾರವೇ ನಿನ್ನ ಕೈಯಿಂದ ನೆರವೇರಿಸಿದ ಕಾರಣ ಈಗ ಇಸ್ರಾಯೇಲಿನ ದೇವರಾದ ಕರ್ತನೇ, ನಿನ್ನ ಮಕ್ಕಳು ತಮ್ಮ ಮಾರ್ಗಕ್ಕೆ ಜಾಗ್ರತೆಯಾಗಿದ್ದು ನೀನು ನನ್ನ ಮುಂದೆ ನಡೆದ ಪ್ರಕಾರ ಅವರು ನನ್ನ ಮುಂದೆ ನಡೆದರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ತಪ್ಪದೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ನೀನು ನನ್ನ ತಂದೆಯೂ, ನಿನ್ನ ಸೇವಕನಾದ ದಾವೀದನಿಗೆ ಹೇಳಿದ ಮಾತು ನೆರವೇರಿಸು.

1 ಅರಸುಗಳು 9:4

ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಮಾಡುವ ಹಾಗೆ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಕೈಕೊಂಡು ಸಂಪೂರ್ಣ ಹೃದಯದಿಂದಲೂ ಯಥಾರ್ಥತೆಯಿಂದಲೂ ನಿನ್ನ ತಂದೆಯಾದ ದಾವೀದನು ನಡೆದ ಪ್ರಕಾರ ನೀನು ನನ್ನ ಮುಂದೆ ನಡೆದರೆ

ಕೀರ್ತನೆಗಳು 27:13

ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.

ಕೀರ್ತನೆಗಳು 61:7

ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.

ಯೆಶಾಯ 53:8

ಆತನು ಸೆರೆಯಿಂದಲೂ ನ್ಯಾಯತೀರ್ಪಿ ನಿಂದಲೂ ತೆಗೆಯಲ್ಪಟ್ಟನು; ಆತನ ಸಂತತಿಯನ್ನು ತಿಳಿಯಪಡಿಸಿದವರು ಯಾರು? ಆತನು ಜೀವಿತರ ದೇಶದಿಂದ ಕಡಿಯಲ್ಪಟ್ಟವನು (ತೆಗೆಯಲ್ಪಟ್ಟನು); ತನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಪೆಟ್ಟು ತಿಂದನು.

ಲೂಕ 1:6

ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನ್ಯಾಯವಿಧಿಗಳನ್ನು ತಪ್ಪಿಲ್ಲದೆ ಕೈಕೊಂಡು ದೇವರ ಮುಂದೆ ನೀತಿವಂತರಾಗಿದ್ದರು.

ಲೂಕ 1:75

ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ಆತನ ಮುಂದೆ ಪರಿಶುದ್ಧತೆಯಿಂದಲೂ ನೀತಿಯಿಂದಲೂ ಆತನನ್ನು ಸೇವಿಸುವವರಾಗುವದಕ್ಕೆ ಆತನು ಅನುಗ್ರಹಿ ಸುವನು.

Interlinear

Choose Theme