ಕೀರ್ತನೆಗಳು 2:8 · ಕನ್ನಡ ಬೈಬಲ್
ನನ್ನನ್ನು ಕೇಳು; ಆಗ ಅನ್ಯಜನರನ್ನು ನಿನ್ನ ಬಾಧ್ಯತೆಯಾಗಿಯೂ ಭೂಮಿಯ ಕಟ್ಟಕಡೆಯ ವರೆಗೆ ನಿನ್ನ ಸ್ವಾಸ್ಥ್ಯವಾಗಿಯೂ ಕೊಡುವೆನು.
Cross references
ಕೀರ್ತನೆಗಳು 22:27
ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
ಕೀರ್ತನೆಗಳು 72:8
ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಆತನು ಆಳುವನು.
ಕೀರ್ತನೆಗಳು 82:8
ಓ ದೇವರೇ, ಏಳು; ಭೂಮಿಗೆ ನ್ಯಾಯತೀರಿಸು; ನೀನು ಜನಾಂಗಗಳನ್ನೆಲ್ಲಾ ಬಾಧ್ಯವಾಗಿ ಹೊಂದುವಿ.
ಕೀರ್ತನೆಗಳು 89:27
ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು.
ದಾನಿಯೇಲ 7:13
ನಾನು ಕಂಡ ರಾತ್ರಿಯ ದರ್ಶನದಲ್ಲಿ ಇಗೋ, ಮನುಷ್ಯ ಕುಮಾರನಂತಿರುವ ಒಬ್ಬನು ಆಕಾಶದ ಮೇಘಗಳ ಸಂಗಡ ಪೂರ್ವಿಕನ ಬಳಿಗೆ ಸವಿಾಪಿಸಿದನು. ಅವನನ್ನು ಆತನ ಬಳಿಗೆ ಕರೆತಂದರು.
ಯೋಹಾನ 17:4
ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ; ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ;