Home Bibles ಕೀರ್ತನೆಗಳು 18:14 · ಕನ್ನಡ ಬೈಬಲ್
ಕೀರ್ತನೆಗಳು 18:14 · ಕನ್ನಡ ಬೈಬಲ್

ಹೌದು, ತನ್ನ ಬಾಣಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚುಗಳನ್ನೆಸೆದು ಅವರನ್ನು ಗಲಿಬಿಲಿ ಮಾಡಿದನು.

Cross references

ಅಂಕೆಗಳ ಪುಸ್ತಕ 24:8

ದೇವರು ಅವನನ್ನು ಐಗುಪ್ತದಿಂದ ಹೊರಗೆ ತಂದನು. ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಅವನಿಗೆ ಉಂಟು. ಅವನು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು ಅವರ ಎಲುಬುಗಳನ್ನು ಚೂರು ಮಾಡಿ ತನ್ನ ಬಾಣ ಗಳಿಂದ ಗಾಯಮಾಡುವನು.

ದ್ವಿತೀಯೋಪದೇಶಕಾಂಡ 32:23

ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿ ಡುವೆನು; ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.

ದ್ವಿತೀಯೋಪದೇಶಕಾಂಡ 32:42

ಸತ್ತವರ ಮತ್ತು ಸೆರೆಯವರ ರಕ್ತದಿಂದಲೂ ಆರಂಭದ ಶತ್ರುವಿನ ಪ್ರತೀಕಾರದಿಂದಲೂ ನನ್ನ ಬಾಣಗಳನ್ನು ರಕ್ತದಿಂದ ಅಮಲೇರುವಂತೆ ಮಾಡು ವೆನು. ನನ್ನ ಕತ್ತಿ ಮಾಂಸವನ್ನು ತಿನ್ನುವದು.

ಯೆಹೋಶುವ 10:10

ಆಗ ಕರ್ತನು ಅವರನ್ನು ಇಸ್ರಾಯೇಲಿನ ಮುಂದೆ ಗಲಿಬಿಲಿಮಾಡಿ ಅವರನ್ನು ಗಿಬ್ಯೋನಿನಲ್ಲಿ ದೊಡ್ಡ ಸಂಹಾರದಿಂದ ಸಂಹರಿಸಿ ಬೇತ್‌ಹೋರೋನಿಗೆ ಹೋಗುವ ಮಾರ್ಗದಲ್ಲಿ ಹಿಂದಟ್ಟಿ ಅಜೇಕ ಮಕ್ಕೇದದ ವರೆಗೂ ಹೊಡೆದನು.

1 ಸಮುವೇಲ 2:10

ಕರ್ತನ ಸಂಗಡ ವಿವಾದಿಸುವವರು ಮುರಿದು ಚೂರಾಗುವರು. ಆತನು ಆಕಾಶದಲ್ಲಿಂದ ಅವರ ಮೇಲೆ ಗುಡುಗುವನು. ಕರ್ತನು ಲೋಕಾಂತ್ಯದ ವರೆಗೂ ನ್ಯಾಯತೀರಿಸಿ ತನ್ನ ಅರಸನಿಗೆ ಬಲಕೊಡುವನು, ತನ್ನ ಅಭಿಷಿಕ್ತನ ಕೊಂಬನ್ನು ಉನ್ನತಮಾಡುವನು ಎಂಬದು.

ಯೋಬ 6:4

ಸರ್ವ ಶಕ್ತನ ಬಾಣಗಳು ನನ್ನಲ್ಲಿ ಇವೆ; ಅವುಗಳ ವಿಷವು ನನ್ನ ಆತ್ಮವನ್ನು ಕುಡಿಯುತ್ತವೆ; ದೇವರ ಹೆದರಿಕೆಗಳು ನನಗೆ ವಿರೋಧವಾಗಿ ನನ್ನ ಸುತ್ತಲೂ ಇಳಿದವು.

ಯೋಬ 37:4

ಅದರ ತರುವಾಯ ಶಬ್ದವು ಗರ್ಜಿಸುತ್ತದೆ; ತನ್ನ ಮಹತ್ತಿನ ಶಬ್ದದಿಂದ ಗುಡುಗುತ್ತಾನೆ. ಆತನ ಶಬ್ದ ಕೇಳಲ್ಪಡುವಾಗ ಅವು ಗಳನ್ನು ಹಿಂದೆಗೆಯುವದಿಲ್ಲ.

ಯೋಬ 37:5

ದೇವರು ಆಶ್ಚರ್ಯವಾಗಿ ತನ್ನ ಶಬ್ದದಿಂದ ಗುಡುಗುತ್ತಾನೆ; ನಾವು ಗ್ರಹಿಸದ ಮಹತ್ತುಗಳನ್ನು ಆತನು ಮಾಡುತ್ತಾನೆ.

ಯೋಬ 38:35

ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ?

ಯೋಬ 40:9

ಇಲ್ಲವೆ ದೇವರ ಹಾಗೆ ತೋಳುಳ್ಳವನಾಗಿದ್ದೀಯೋ? ಇಲ್ಲವೆ ಆತನ ಹಾಗೆ ಗುಡುಗಿನಿಂದ ಆರ್ಭಟ ಮಾಡು ವಿಯೋ?

ಕೀರ್ತನೆಗಳು 21:12

ನೀನು ಅವರನ್ನು ಬೆನ್ನು ತಿರಿಗಿಸುವಂತೆ ಮಾಡುವಿ: ಅವರ ಮುಖಕ್ಕೆ ಎದುರಾಗಿ ನಿನ್ನ ಬಿಲ್ಲನೂ ಹಗ್ಗಗಳಲ್ಲಿ ಹೂಡುವಿ.ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.

ಕೀರ್ತನೆಗಳು 29:3

ಕರ್ತನ ಧ್ವನಿಯು ನೀರುಗಳ ಮೇಲೆ ಅದೆ. ಮಹಿ ಮೆಯ ದೇವರು ಗುಡುಗುತ್ತಾನೆ. ಕರ್ತನು ಬಹಳ ನೀರುಗಳ ಮೇಲೆ ಇದ್ದಾನೆ.

ಕೀರ್ತನೆಗಳು 29:7

ಕರ್ತನ ಸ್ವರವು ಅಗ್ನಿ ಜ್ವಾಲೆಗಳನ್ನು ಭೇದಿಸುತ್ತದೆ.

ಕೀರ್ತನೆಗಳು 77:17

ಮೋಡಗಳು ನೀರನ್ನು ಸುರಿಸಿದವು; ಆಕಾಶಗಳು ಶಬ್ದ ಮಾಡಿದವು; ನಿನ್ನ ಬಾಣಗಳು ಸಹ ಹಾರಿ ಬಂದವು.

ಕೀರ್ತನೆಗಳು 77:18

ನಿನ್ನ ಗುಡುಗಿನ ಶಬ್ದವು ಆಕಾಶ ಮಂಡಲದಲ್ಲಿ ಇತ್ತು; ಮಿಂಚುಗಳು ಜಗತ್ತನ್ನು ಬೆಳಗ ಮಾಡಿದವು; ಭೂಮಿಯು ನಡುಗಿ ಕದಲಿತು.

ಕೀರ್ತನೆಗಳು 144:6

ಮಿಂಚನ್ನು ಮಿಂಚಿಸಿ ಅವರನ್ನು ಚದರಿಸು; ನಿನ್ನ ಬಾಣಗಳನ್ನು ಎಸೆದು ಅವರನ್ನು ನಾಶಮಾಡು.

ಯೆಶಾಯ 30:30

ಆಗ ಕರ್ತನು ತನ್ನ ಗಂಭೀರವಾದ ಸ್ವರವನ್ನು ಕೇಳಮಾಡಿ ತೀವ್ರ ಕೋಪ, ಕಬಳಿಸುವ ಅಗ್ನಿಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿ ಸುವನು.

ಯೋವೇಲ 2:11

ಕರ್ತನು ತನ್ನ ಸೈನ್ಯದ ಮುಂದೆ ತನ್ನ ಶಬ್ದವನ್ನು ಮಾಡುತ್ತಾನೆ; ಆತನ ದಂಡು ಬಹು ದೊಡ್ಡದಾಗಿದೆ; ಹೌದು, ಬಲವಾದ ದ್ದಾಗಿದ್ದು ಆತನ ವಾಕ್ಯವನ್ನು ನಡಿಸುತ್ತದೆ; ಕರ್ತನ ದಿನವು ದೊಡ್ಡದು, ಮಹಾ ಭಯಂಕರವಾದದ್ದು, ಅದನ್ನು ತಾಳಿಕೊಳ್ಳುವವನ್ಯಾರು?

ಹಬಕ್ಕೂಕ 3:11

ಸೂರ್ಯ ಚಂದ್ರಗಳು ತಮ್ಮ ನಿವಾಸ ದಲ್ಲಿ ಕದಲದೆ ನಿಂತುಬಿಟ್ಟವು. ನಿನ್ನ ಬಾಣಗಳು ಬೆಳಕಿ ನಿಂದಲೂ ನಿನ್ನ ಈಟಿಯು ಮಿಂಚುವ ಪ್ರಕಾಶದಿಂದಲೂ ಹೊರಟವು.

ಜೆಕರ್ಯ 9:14

ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು.

Interlinear

Choose Theme