ದೇವರು ಆಶ್ಚರ್ಯವಾಗಿ ತನ್ನ ಶಬ್ದದಿಂದ ಗುಡುಗುತ್ತಾನೆ; ನಾವು ಗ್ರಹಿಸದ ಮಹತ್ತುಗಳನ್ನು ಆತನು ಮಾಡುತ್ತಾನೆ.
Cross references
ಕರ್ತನು ಆಕಾಶದಿಂದ ಗುಡುಗಿದನು. ಮಹೋ ನ್ನತನು ತನ್ನ ಶಬ್ದವನ್ನು ಕೊಟ್ಟನು;
ಆತನು ದೊಡ್ಡ ವುಗಳನ್ನು ಶೋಧಿಸಲಸಾಧ್ಯವಾಗಿ ಮಾಡುತ್ತಾನೆ; ಎಣಿಕೆ ಇಲ್ಲದ ಅದ್ಭುತಗಳನ್ನು ಮಾಡುತ್ತಾನೆ.
ಆತನು ಕಂಡುಹಿಡಿಯಲಾರದಂಥ ಮಹತ್ಕಾರ್ಯ ಗಳನ್ನೂ ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾನೆ.
ದೇವರನ್ನು ಶೋಧಿಸಿ ಕಂಡುಕೊಳ್ಳುವಿಯೋ? ಸರ್ವಶಕ್ತನ ಸಂಪೂರ್ಣತ್ವವನ್ನು ನಿನ್ನಿಂದ ಕಂಡು ಹಿಡಿಯ ಲಾದೀತೆ?
ಇಗೋ, ಇವು ಆತನ ಮಾರ್ಗಗಳ ಭಾಗಗಳು; ಆತನನ್ನು ಕುರಿತು ಸ್ವಲ್ಪ ಭಾಗ ಮಾತ್ರ ಕೇಳಿದ್ದೇವೆ; ಆದರೆ ಆತನ ಪರಾಕ್ರಮದ ಗುಡುಗನ್ನು ಯಾವನು ಗ್ರಹಿಸಿಕೊಳ್ಳು ವನು ಎಂಬದು.
ಇಗೋ, ದೇವರು ದೊಡ್ಡವನಾಗಿದ್ದಾನೆ. ನಾವು ಆತನನ್ನು ಅರಿಯದವರಾಗಿದ್ದೇವೆ. ಆತನ ವರುಷಗಳ ಲೆಕ್ಕಕ್ಕೆ ಶೋಧನೆ ಇಲ್ಲ.
ಹೌದು, ತನ್ನ ಬಾಣಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚುಗಳನ್ನೆಸೆದು ಅವರನ್ನು ಗಲಿಬಿಲಿ ಮಾಡಿದನು.
ತನ್ನ ಸಮಯದಲ್ಲಿ ಪ್ರತಿಯೊಂದನ್ನು ಆತನು ಸುಂದರವಾಗಿ ಮಾಡಿದ್ದಾನೆ. ಆದಿಯಿಂದ ಅಂತ್ಯದ ವರೆಗೂ ದೇವರು ನಡಿಸುವ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸಲಾರದಂತೆ ಅವರ ಹೃದಯದಲ್ಲಿ ಆತನು ಲೋಕವನ್ನು ಇಟ್ಟಿದ್ದಾನೆ.
ನಿಮಗೆ ತಿಳಿದಿಲ್ಲವೋ? ನೀವು ಕೇಳಿಲ್ಲವೋ? ಆದಿಯಿಂದಲೇ ನಿಮಗೆ ತಿಳಿಸಲ್ಪಟ್ಟಿಲ್ಲವೋ? ಭೂಮಿ ಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗ ಲಿಲ್ಲವೋ?
ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಕರ್ತನು ನಿರಂತರವಾದ ದೇವರೂ ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವದಿಲ್ಲ ಇಲ್ಲವೆ ಬಳಲುವ ದಿಲ್ಲ; ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ!
ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.