Home Bibles ಕೀರ್ತನೆಗಳು 17:11 · ಕನ್ನಡ ಬೈಬಲ್
ಕೀರ್ತನೆಗಳು 17:11 · ಕನ್ನಡ ಬೈಬಲ್

ನಮ್ಮ ಹೆಜ್ಜೆಗಳಲ್ಲಿ ಈಗ ನಮ್ಮನ್ನು ಸುತ್ತಿಕೊಂಡಿದ್ದಾರೆ; ತಮ್ಮ ದೃಷ್ಟಿಯನ್ನು ಭೂಮಿಯ ಮೇಲೆ ಇಡುತ್ತಾರೆ.

Cross references

1 ಸಮುವೇಲ 23:26

ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು; ದಾವೀದನೂ ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು; ಸೌಲನಿಗೆ ಭಯ ಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆ ಮಾಡುವಾಗ ಸೌಲನೂ ಅವನ ಮನುಷ್ಯರೂ ಹಿಡಿ ಯುವ ಹಾಗೆ ಅವರನ್ನು ಸುತ್ತಿಕೊಂಡರು.

1 ಸಮುವೇಲ 24:2

ಆಗ ಸೌಲನು ಎಲ್ಲಾ ಇಸ್ರಾಯೇಲಿನಲ್ಲಿ ಆದುಕೊಳ್ಳಲ್ಪಟ್ಟ ಮೂರು ಸಾವಿರ ಜನರನ್ನು ತಕ್ಕೊಂಡು ದಾವೀದನನ್ನೂ ಅವನ ಮನುಷ್ಯರನ್ನೂ ಹುಡುಕಲು ಕಾಡು ಮೇಕೆಗಳಿರುವ ಬಂಡೆಗಳಿಗೆ ಹೋದನು.

1 ಸಮುವೇಲ 26:2

ಆಗ ಸೌಲನು ಎದ್ದು ಜೀಫ್‌ ಅರಣ್ಯ ದಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿ ನಲ್ಲಿ ಆಯಲ್ಪಟ್ಟ ಮೂರು ಸಾವಿರ ಜನರ ಸಂಗಡ ಜೀಫ್‌ ಅರಣ್ಯಕ್ಕೆ ಹೋಗಿ ಯೆಷಿಮೋನಿಗೆ ಎದುರಾಗಿ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿದನು.

ಕೀರ್ತನೆಗಳು 10:8

ಅವನು ಹೊಂಚು ಹಾಕುವ ಗ್ರಾಮಗಳ ಸ್ಥಳಗಳಲ್ಲಿ ಕೂತುಕೊಂಡು ಗುಪ್ತವಾದ ಸ್ಥಳಗಳಲ್ಲಿ ನಿರಪರಾಧಿಯನ್ನು ಕೊಲ್ಲು ತ್ತಾನೆ. ಅವನ ಕಣ್ಣುಗಳು ಗತಿಯಿಲ್ಲದವನನ್ನು ಹೊಂಚಿ ನೋಡು ತ್ತವೆ;

ಕೀರ್ತನೆಗಳು 37:14

ದುಷ್ಟರು ಬಡವನನ್ನು ಮತ್ತು ದೀನ ನನ್ನು ಕೆಡವಿಬಿಡುವದಕ್ಕೂ ಸನ್ಮಾರ್ಗದವರನ್ನು ಕೊಲ್ಲು ವದಕ್ಕೂ ಕತ್ತಿಯನ್ನು ಹಿರಿದಿದ್ದಾರೆ ಮತ್ತು ತಮ್ಮ ಬಿಲ್ಲು ಗಳನ್ನು ಬೊಗ್ಗಿಸಿದ್ದಾರೆ.

ಕೀರ್ತನೆಗಳು 88:17

ನೀರಿನ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಂಡಿವೆ; ಏಕವಾಗಿ ನನ್ನನ್ನು ಮುತ್ತಿಕೊಂಡಿವೆ.ಪ್ರಿಯನನ್ನೂ ಸ್ನೇಹಿತನನೂ ನನಗೆ ದೂರ ಮಾಡಿದ್ದೀ; ನನ್ನ ಕತ್ತಲೆಯ ಸ್ಥಳವೇ ನನ್ನ ಪರಿಚಿತರು.

ಸಾಮೇತಿಗಳು 6:13

ಅವನು ತನ್ನ ಕಣ್ಣುಗಳಿಂದ ಸನ್ನೆಮಾಡಿ ತನ್ನ ಕಾಲುಗಳಿಂದ ಮಾತಾಡುತ್ತಾ ತನ್ನ ಬೆರಳುಗಳಿಂದ ಬೋಧಿಸುತ್ತಾನೆ.

Interlinear

Choose Theme