ಆಗ ಸೌಲನು ಎದ್ದು ಜೀಫ್ ಅರಣ್ಯ ದಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿ ನಲ್ಲಿ ಆಯಲ್ಪಟ್ಟ ಮೂರು ಸಾವಿರ ಜನರ ಸಂಗಡ ಜೀಫ್ ಅರಣ್ಯಕ್ಕೆ ಹೋಗಿ ಯೆಷಿಮೋನಿಗೆ ಎದುರಾಗಿ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿದನು.
Cross references
ಮೂರು ಸಾವಿರ ಜನರಲ್ಲಿ ಎರಡು ಸಾವಿರ ಜನರು ಸೌಲನು ಇರುವ ಮಿಕ್ಮಾಷಿ ನಲ್ಲಿಯೂ ಬೇತೇಲಿನ ಪರ್ವತದಲ್ಲಿಯೂ ಇದ್ದರು; ಸಾವಿರ ಜನರು ಯೋನಾತಾನನ ಸಂಗಡ ಬೆನ್ಯಾವಿಾನ್ ದೇಶದ ಗಿಬೆಯದಲ್ಲಿದ್ದರು. ಉಳಿದ ಜನರನ್ನು ಅವರ ವರ ಡೇರೆಗಳಿಗೆ ಕಳುಹಿಸಿಬಿಟ್ಟನು.
ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾ ನೆಂದು ನನಗೆ ಹೇಳುತ್ತಾರೆ. ಅವನು ಅಡಗಿಕೊಂಡಿರುವ ಎಲ್ಲಾ ರಹಸ್ಯ ಸ್ಥಳಗಳನ್ನು ನೋಡಿ ತಿಳುಕೊಂಡು ನಿಜವಾದ ವರ್ತಮಾನವನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ; ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ ಯೆಹೂದದ ಸಹಸ್ರಗಳಲ್ಲಿ ಅವನನ್ನು ಹುಡುಕ ಹೋಗುವೆನು ಅಂದನು.
ಆಗ ಸೌಲನು ಎಲ್ಲಾ ಇಸ್ರಾಯೇಲಿನಲ್ಲಿ ಆದುಕೊಳ್ಳಲ್ಪಟ್ಟ ಮೂರು ಸಾವಿರ ಜನರನ್ನು ತಕ್ಕೊಂಡು ದಾವೀದನನ್ನೂ ಅವನ ಮನುಷ್ಯರನ್ನೂ ಹುಡುಕಲು ಕಾಡು ಮೇಕೆಗಳಿರುವ ಬಂಡೆಗಳಿಗೆ ಹೋದನು.
ಅವನು ಮಾರ್ಗದಲ್ಲಿ ಕುರಿ ಹಟ್ಟಿಗಳು ಇರುವ ಗವಿಯ ಬಳಿಗೆ ಬಂದು ಅದರಲ್ಲಿ ಅವನು ತನ್ನ ಕಾಲುಗಳನ್ನು ಮುಚ್ಚಿಕೊಳ್ಳಲು ಪ್ರವೇಶಿಸಿದನು. ಆದರೆ ದಾವೀದನೂ ಅವನ ಮನುಷ್ಯರೂ ಆ ಗವಿಯ ಪಕ್ಕ ದಲ್ಲಿ ಇದ್ದರು.
ದಾವೀದನಿಗೆ--ನೀನು ನನಗಿಂತ ನೀತಿವಂತನು; ನೀನು ನನಗೆ ಒಳ್ಳೇದನ್ನು ಮಾಡಿದಿ; ಆದರೆ ನಾನು ನಿನಗೆ ಕೇಡನ್ನು ಮಾಡಿದೆನು.
ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.
ಓ ಕರ್ತನೇ, ದುಷ್ಟನ ಕೈಗಳಿಗೆ ನನ್ನನ್ನು ತಪ್ಪಿಸಿ ಕಾಪಾಡು; ಬಲಾತ್ಕಾರಿಯಿಂದ ನನ್ನನ್ನು ತಪ್ಪಿಸಿ ಕಾಯಿ; ನಾನು ಎಡವಿ ಬೀಳಬೇಕೆಂದು ಯೋಚಿಸುತ್ತಾರೆ.