Home Bibles ಕೀರ್ತನೆಗಳು 134:1 · ಕನ್ನಡ ಬೈಬಲ್
ಕೀರ್ತನೆಗಳು 134:1 · ಕನ್ನಡ ಬೈಬಲ್

ಇಗೋ, ಕರ್ತನ ಆಲಯದಲ್ಲಿ ಪ್ರತಿ ರಾತ್ರಿ ನಿಲ್ಲುವವರಾದ ಕರ್ತನ ಸೇವಕರೆ ಎಲ್ಲಾ ಕರ್ತನನ್ನು ಸ್ತುತಿಸಿರಿ.

Cross references

ಲೇವ್ಯಕಾಂಡ 8:35

ಆದದರಿಂದ ಏಳು ದಿನ ಗಳ ವರೆಗೆ ನೀವು ಸಾಯದಂತೆ ಹಗಲು ರಾತ್ರಿ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಆಜ್ಞೆ ಯನ್ನು ಕೈಕೊಳ್ಳಬೇಕು. ಹೀಗೆಯೇ ನನಗೆ ಅಪ್ಪಣೆ ಯಾಗಿದೆ.ಕರ್ತನು ಮೋಶೆಯ ಕೈಗೆ ಒಪ್ಪಿಸಿ ಆಜ್ಞಾಪಿಸಿದ ಪ್ರಕಾರವೇ ಎಲ್ಲವುಗಳನ್ನು ಆರೋನನೂ ಅವನ ಕುಮಾರರೂ ಮಾಡಿದರು.

ದ್ವಿತೀಯೋಪದೇಶಕಾಂಡ 10:8

ಆ ಕಾಲದಲ್ಲಿ ಕರ್ತನು ಲೇವಿಗೋತ್ರವನ್ನು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರು ವದಕ್ಕೂ ಕರ್ತನ ಮುಂದೆ ನಿಂತುಕೊಂಡು ಆತನಿಗೆ ಸೇವೆಮಾಡಿ ಆತನ ಹೆಸರಿನಲ್ಲಿ ಆಶೀರ್ವದಿಸುವ ದಕ್ಕೂ ಈ ದಿನದ ವರೆಗೂ ಪ್ರತ್ಯೇಕಿಸಿದನು.

1 ದಿನವೃತ್ತಾಂತ 9:23

ಹೀಗೆಯೇ ಇವರಿಗೂ ಇವರ ಮಕ್ಕಳಿಗೂ ಕರ್ತನ ಮನೆಯ ಬಾಗಲ ಕಾವಲಿತ್ತು ಅದು ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರ ರಿಂದ ಕಾವಲಿತ್ತು.

1 ದಿನವೃತ್ತಾಂತ 9:27

ಈ ಅಪ್ಪಣೆಯು ಅವರದಾಗಿದದ್ದರಿಂದಲೂ ಪ್ರತಿ ಉದಯದಲ್ಲಿ ತೆರೆಯುವದು ಅವರದಾಗಿದದ್ದ ರಿಂದಲೂ ಅವರು ದೇವರ ಮನೆಯ ಸುತ್ತಲೂ ವಾಸ ವಾಗಿದ್ದರು.

1 ದಿನವೃತ್ತಾಂತ 9:33

ಇದಲ್ಲದೆ ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು ಸ್ವತಂತ್ರವಾಗಿ ಕೊಠಡಿ ಗಳಲ್ಲಿ ವಾಸವಾಗಿದ್ದರು; ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.

1 ದಿನವೃತ್ತಾಂತ 23:30

ಇದಲ್ಲದೆ ಉದಯಕಾಲದ ಲ್ಲಿಯೂ ಸಾಯಂಕಾಲದಲ್ಲಿಯೂ ನಿಂತು ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಕರ್ತನ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ

2 ದಿನವೃತ್ತಾಂತ 29:11

ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯಾಕಂದರೆ ತನ್ನ ಸಮ್ಮುಖದಲ್ಲಿ ನಿಲ್ಲುವದಕ್ಕೂ ತನ್ನನ್ನು ಸೇವಿಸುವದಕ್ಕೂ ಸೇವಕರಾಗಿರುವದಕ್ಕೂ ಧೂಪಸುಡುವದಕ್ಕೂ ಕರ್ತನು ನಿಮ್ಮನ್ನು ಆದುಕೊಂಡಿದ್ದಾನೆ ಅಂದನು.

2 ದಿನವೃತ್ತಾಂತ 35:5

ಜನರಾದ ನಿಮ್ಮ ಸಹೋದರರ ಪಿತೃಗಳ ಕುಟುಂಬ ಗಳ ವಿಭಾಗದ ಪ್ರಕಾರವಾಗಿ ಪರಿಶುದ್ಧ ಸ್ಥಾನದಲ್ಲಿ ನಿಲ್ಲಿರಿ.

ನೆಹೆಮ್ಯ 12:9

ಇದಲ್ಲದೆ ಅವರ ಸಹೋ ದರರಾದ ಬಕ್ಬುಕ್ಯನು ಉನ್ನೀಯು ವರ್ಗಗಳಲ್ಲಿ ಅವರಿಗೆ ಎದುರಾಗಿದ್ದರು.

ಕೀರ್ತನೆಗಳು 84:5

ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು; ಯಾರಲ್ಲಿ ಆತನ ಮಾರ್ಗಗಳು ಇವೆಯೋ ಅವನೇ ಧನ್ಯನು.

ಕೀರ್ತನೆಗಳು 103:21

ಕರ್ತನನ್ನು ಸ್ತುತಿಸಿರಿ. ಆತನ ಎಲ್ಲಾ ಸೈನ್ಯಗಳೇ, ಆತನ ಇಷ್ಟವನ್ನು ನಡಿಸುವ ಆತನ ಸೇವಕರೇ, ಕರ್ತನನ್ನು ಸ್ತುತಿಸಿರಿ.ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು.

ಕೀರ್ತನೆಗಳು 113:1

ಕರ್ತನನ್ನು ಸ್ತುತಿಸಿರಿ; ಕರ್ತನ ಸೇವಕರೇ; ಸ್ತುತಿಸಿರಿ; ಕರ್ತನ ಹೆಸರನ್ನು ಸ್ತುತಿಸಿರಿ;

ಕೀರ್ತನೆಗಳು 120:1

ನನ್ನ ಇಕ್ಕಟ್ಟಿನಲ್ಲಿ ನಾನು ಕರ್ತನಿಗೆ ಕೂಗಿದೆನು; ಆತನು ನನಗೆ ಉತ್ತರ ಕೊಟ್ಟನು.

ಕೀರ್ತನೆಗಳು 121:1

ನಾನು ಕಣ್ಣೆತ್ತಿ ಬೆಟ್ಟಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?

ಕೀರ್ತನೆಗಳು 122:1

ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.

ಕೀರ್ತನೆಗಳು 123:1

ಪರಲೋಕದಲ್ಲಿ ವಾಸವಾಗಿರುವಾತನೇ, ನಿನ್ನ ಕಡೆಗೆ ನನ್ನ ಕಣ್ಣುಗಳನ್ನು ಎತ್ತುತ್ತೇನೆ.

ಕೀರ್ತನೆಗಳು 124:1

ಇಸ್ರಾಯೇಲ್‌ ಈಗ ಹೇಳುವದೇನಂದರೆ: ಕರ್ತನು ನಮ್ಮ ಪಕ್ಷ ಇಲ್ಲದಿದ್ದರೆ,

ಕೀರ್ತನೆಗಳು 125:1

ಕರ್ತನಲ್ಲಿ ಭರವಸವಿಡುವವರು ಚೀಯೋನ್‌ ಪರ್ವತದ ಹಾಗಿ ದ್ದಾರೆ; ಅದು ಕದಲದೆ ಯುಗಯುಗಕ್ಕೂ ಇರುವದು.

ಕೀರ್ತನೆಗಳು 126:1

ಕರ್ತನು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡ ವರ ಹಾಗಿದ್ದೆವು.

ಕೀರ್ತನೆಗಳು 127:1

ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.

ಕೀರ್ತನೆಗಳು 128:1

ಕರ್ತನಿಗೆ ಭಯಪಟ್ಟು ಆತನ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.

ಕೀರ್ತನೆಗಳು 129:1

ನನ್ನ ಯೌವನದಿಂದ ನನಗೆ ಅವರು ಬಹಳ ಬಾಧಿಸಿದ್ದಾರೆಂದು ಇಸ್ರಾ ಯೇಲು ಈಗ ಹೇಳಬಹುದು.

ಕೀರ್ತನೆಗಳು 130:1

ಓ ಕರ್ತನೇ, ಆಗಾಧಗಳೊಳಗಿಂದ ನಿನಗೆ ಕೂಗುತ್ತೇನೆ.

ಕೀರ್ತನೆಗಳು 130:6

ಉದಯಕ್ಕಾಗಿ ಕಾದುಕೊಳ್ಳುವವ ರಿಗಿಂತ ಹೌದು, ಉದಯಕ್ಕಾಗಿ ಕಾದುಕೊಳ್ಳುವವರಿ ಗಿಂತ ನನ್ನ ಪ್ರಾಣವು ಕರ್ತನಿಗಾಗಿ ನಿರೀಕ್ಷಿಸುತ್ತದೆ.

ಕೀರ್ತನೆಗಳು 131:1

ಕರ್ತನೇ, ನನ್ನ ಹೃದಯವು ಗರ್ವದ್ದಲ್ಲ; ನನ್ನ ಕಣ್ಣುಗಳು ಅಹಂಭಾವ ದವುಗಳೂ ಅಲ್ಲ; ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ನಡೆದುಕೊಳ್ಳು ವದಿಲ್ಲ.

ಕೀರ್ತನೆಗಳು 132:1

ಕರ್ತನೇ, ದಾವೀದನನ್ನೂ ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕ ಮಾಡಿಕೋ.

ಕೀರ್ತನೆಗಳು 133:1

ಇಗೋ, ಸಹೋದರರು ಒಂದಾಗಿ ವಾಸಮಾಡುವದು ಎಷ್ಟೋಒಳ್ಳೇದು! ಎಷ್ಟೋ ರಮ್ಯವಾದದ್ದು!

ಕೀರ್ತನೆಗಳು 135:1

ಕರ್ತನನ್ನು ಸ್ತುತಿಸಿರಿ. ಕರ್ತನ ಹೆಸರನ್ನು ಸ್ತುತಿಸಿರಿ; ಕರ್ತನ ಆಲಯ ದಲ್ಲಿಯೂ

ಕೀರ್ತನೆಗಳು 135:2

ನಮ್ಮ ದೇವರ ಆಲಯದ ಅಂಗಳ ಗಳಲ್ಲಿಯೂ ನಿಲ್ಲುವ ಕರ್ತನ ಸೇವಕರೇ, ಸ್ತುತಿಸಿರಿ.

ಕೀರ್ತನೆಗಳು 135:19

ಇಸ್ರಾಯೇಲಿನ ಮನೆಯವರೇ, ಕರ್ತನನ್ನು ಸ್ತುತಿ ಸಿರಿ. ಆರೋನನ ಮನೆಯವರೇ, ಕರ್ತನನ್ನು ಸ್ತುತಿಸಿರಿ.

ಲೂಕ 2:37

ಅವಳು ಹೆಚ್ಚು ಕಡಿಮೆ ಎಂಭತ್ತುನಾಲ್ಕು ವರುಷದ ವಿಧವೆ ಯಾಗಿದ್ದು ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂ ದಲೂ ದೇವರನ್ನು ಸೇವಿಸುತ್ತಿದ್ದಳು.

ಪ್ರಕಟನೆ 7:15

ಈ ಕಾರಣದಿಂದ ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆ ಮಾಡುವವರಾ ಗಿದ್ದಾರೆ; ಸಿಂಹಾಸನದ ಮೇಲೆ ಕೂತಿರುವಾತನು ಅವರ ಮಧ್ಯದಲ್ಲಿ ವಾಸಿಸುವನು.

ಪ್ರಕಟನೆ 19:5

ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು.

Interlinear

Choose Theme