Home Bibles 2 ದಿನವೃತ್ತಾಂತ 29:11 · ಕನ್ನಡ ಬೈಬಲ್
2 ದಿನವೃತ್ತಾಂತ 29:11 · ಕನ್ನಡ ಬೈಬಲ್

ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯಾಕಂದರೆ ತನ್ನ ಸಮ್ಮುಖದಲ್ಲಿ ನಿಲ್ಲುವದಕ್ಕೂ ತನ್ನನ್ನು ಸೇವಿಸುವದಕ್ಕೂ ಸೇವಕರಾಗಿರುವದಕ್ಕೂ ಧೂಪಸುಡುವದಕ್ಕೂ ಕರ್ತನು ನಿಮ್ಮನ್ನು ಆದುಕೊಂಡಿದ್ದಾನೆ ಅಂದನು.

Cross references

ಅಂಕೆಗಳ ಪುಸ್ತಕ 3:6

ಲೇವಿಯ ಗೋತ್ರವನ್ನು ಹತ್ತಿರ ಸೇರಿಸಿ ಯಾಜಕನಾದ ಆರೋನನ ಮುಂದೆ ನಿಲ್ಲಿಸು; ಅವರು ಅವನಿಗೆ ಸೇವೆಮಾಡಲಿ.

ಅಂಕೆಗಳ ಪುಸ್ತಕ 3:8

ಅವರು ಸಭೆಯ ಗುಡಾರದ ಎಲ್ಲಾ ವಸ್ತುಗಳನ್ನೂ ಇಸ್ರಾಯೇಲ್‌ ಮಕ್ಕಳ ಅಪ್ಪಣೆ ಯನ್ನೂ ಕಾಪಾಡಿ ಗುಡಾರದ ಸೇವೆಯನ್ನು ಮಾಡ ಬೇಕು.

ಅಂಕೆಗಳ ಪುಸ್ತಕ 8:6

ಲೇವಿಯರನ್ನು ಇಸ್ರಾಯೇಲ್‌ ಮಕ್ಕಳೊಳಗಿಂದ ತೆಗೆದುಕೊಂಡು ಅವರನ್ನು ಶುದ್ಧ ಮಾಡು.

ಅಂಕೆಗಳ ಪುಸ್ತಕ 16:35

ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.

ಅಂಕೆಗಳ ಪುಸ್ತಕ 18:2

ನಿಮ್ಮ ಪಿತೃವಾದ ಲೇವಿಯ ಗೋತ್ರದವರಾದ ನಿನ್ನ ಸಹೋದರರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಅವರು ನಿನ್ನ ಕೂಡ ಇದ್ದು ನಿನಗೆ ಸೇವೆ ಮಾಡಬೇಕು, ಆದರೆ ನೀನು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷೀ ಗುಡಾರದ ಮುಂದೆ ಸೇವೆಮಾಡಬೇಕು;

ದ್ವಿತೀಯೋಪದೇಶಕಾಂಡ 10:8

ಆ ಕಾಲದಲ್ಲಿ ಕರ್ತನು ಲೇವಿಗೋತ್ರವನ್ನು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರು ವದಕ್ಕೂ ಕರ್ತನ ಮುಂದೆ ನಿಂತುಕೊಂಡು ಆತನಿಗೆ ಸೇವೆಮಾಡಿ ಆತನ ಹೆಸರಿನಲ್ಲಿ ಆಶೀರ್ವದಿಸುವ ದಕ್ಕೂ ಈ ದಿನದ ವರೆಗೂ ಪ್ರತ್ಯೇಕಿಸಿದನು.

1 ದಿನವೃತ್ತಾಂತ 6:34

ಇವನು ಸಮುವೇಲನ ಮಗನು, ಇವನು ಎಲ್ಕಾನನ ಮಗನು, ಇವನು ಯೆರೋಹಾಮನ ಮಗನು, ಇವನು ಎಲೀಯೇಲನ ಮಗನು,

2 ದಿನವೃತ್ತಾಂತ 2:5

ನಾನು ಕಟ್ಟಿಸುವ ಆಲಯವು ದೊಡ್ಡದು; ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವನಾಗಿದ್ದಾನೆ.

ಗಲಾತ್ಯದವರಿಗೆ 6:7

ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.

Interlinear

Choose Theme