ಮೊಲೆ ಬಿಡಿಸಿದ ಕೂಸು ತನ್ನ ತಾಯಿಯ ಬಳಿಯಲ್ಲಿ ಇರುವ ಪ್ರಕಾರ ನಿಶ್ಚಯವಾಗಿ ನನ್ನನ್ನು ಸಂತೈಸಿಕೊಂಡು ಮೌನವಾಗಿದ್ದೇನೆ; ನನ್ನ ಪ್ರಾಣವು ಮೊಲೆ ಬಿಡಿಸಿದ ಕೂಸಿನ ಹಾಗೆ ನನ್ನ ಬಳಿಯಲ್ಲಿ ಅದೆ.ಇಸ್ರಾಯೇಲು ಈಗಿನಿಂದ ಯುಗಯುಗಕ್ಕೂ ಕರ್ತನನ್ನು ಎದುರುನೋಡಲಿ.
Cross references
ಇಗೋ, ಕರ್ತನು ಈ ಹೊತ್ತು ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನೆಂಬದನ್ನು ಈ ದಿನ ನಿನ್ನ ಕಣ್ಣುಗಳು ನೋಡಿದವು. ಕೆಲವರು ನಿನ್ನನ್ನು ಕೊಂದುಹಾಕಲು ಹೇಳಿದರು; ಆದರೆ ನನ್ನ ಕಣ್ಣು ನಿನ್ನನ್ನು ಕರುಣಿಸಿತು; ನಾನು--ಅವನು ಕರ್ತನ ಅಭಿಷಿಕ್ತನಾದದರಿಂದ ನನ್ನ ಕೈ ನನ್ನ ಒಡೆಯನಿಗೆ ವಿರೋಧವಾಗಿ ಚಾಚೆನು ಅಂದೆನು.
ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ.
ಆದರೆ ಜನರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕುಮಾರ ಕುಮಾರ್ತೆಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ ಅವನು ಬಹಳ ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.
ಆಗ ಅರಸನು ಚಾದೋಕನಿಗೆ--ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರಿಗಿ ತಕ್ಕೊಂಡು ಹೋಗು. ಕರ್ತನ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ ಆತನು ನನ್ನನ್ನು ತಿರಿಗಿ ಬರಮಾಡಿ ಅದನ್ನೂ ಅದರ ವಾಸಸ್ಥಳವನ್ನೂ ನನಗೆ ತೋರಿಸುವನು.
ದಾವೀದನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ--ಇಗೋ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ ಎಷ್ಟೋ ಅಧಿಕವಾಗಿ ಈ ಬೆನ್ಯಾವಿಾನ್ಯನಾದವನು ಹೀಗೆ ಮಾಡುವದು ಯಾವ ದೊಡ್ಡಮಾತು? ಅವ ನನ್ನು ಬಿಟ್ಟುಬಿಡಿರಿ; ಅವನು ದೂಷಿಸಲಿ; ಯಾಕಂದರೆ ಕರ್ತನು ಅವನಿಗೆ ಹಾಗೆಯೇ ಹೇಳಿದ್ದಾನೆ.
ನನ್ನ ಪ್ರಾಣವೇ,ನೀನು ಕುಗ್ಗಿಹೋಗಿರುವದೇನು? ನನ್ನಲ್ಲಿ ನೀನು ಯಾಕೆ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು; ನಾನು ಆತನ ಸಹಾಯಕ್ಕಾಗಿ ಆತನನ್ನು ಇನ್ನೂ ಕೊಂಡಾಡುವೆನು.
ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.
ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
ನಿಜವಾಗಿ ನನ್ನ ಪ್ರಾಣವು ದೇವರಿಗಾಗಿ ಕಾಯುತ್ತದೆ; ನನ್ನ ರಕ್ಷಣೆಯು ಆತ ನಿಂದಲೇ.
ಇಸ್ರಾಯೇಲಿನ ಪರಿಶುದ್ಧ ಕರ್ತನಾದ ದೇವರು ಹೇಳುವದೇನೆಂದರೆ--ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗು ವದು. ಶಾಂತರಾಗಿ ಭರವಸದಿಂದಿರುವದೇ ನಿಮಗೆ ಬಲ ಎಂದು ಹೇಳಿದ್ದರೂ ನೀವು ಒಪ್ಪಿಕೊಂಡಿಲ್ಲ.
ಮನುಷ್ಯನು ನಿರೀಕ್ಷೆಯಿಂದ ಮೌನವಾಗಿ ಕರ್ತನ ರಕ್ಷಣೆಗಾಗಿ ಕಾಯು ವದು ಒಳ್ಳೆಯದು.
ನೀವು ತಿರುಗಿ ಕೊಂಡು ಚಿಕ್ಕ ಮಕ್ಕಳಂತೆ ಆಗದೆಹೋದರೆ ಪರಲೋಕ ರಾಜ್ಯದೊಳಗೆ ಪ್ರವೇಶಿಸುವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಯಾವನಾದರೂ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿದ್ದರೆ ಅವನು ಅದರೊಳಗೆ ಪ್ರವೇಶಿಸುವದಿಲ್ಲ.
ನೀವು ನಿಮ್ಮ ಸಹನೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತೀರಿ. 20ಆದರೆ ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.
ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
ಸಹೋದರರೇ, ಬುದ್ಧಿಯ ವಿಷಯ ದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು.