Home Bibles 2 ಸಮುವೇಲ 16:11 · ಕನ್ನಡ ಬೈಬಲ್
2 ಸಮುವೇಲ 16:11 · ಕನ್ನಡ ಬೈಬಲ್

ದಾವೀದನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ--ಇಗೋ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ ಎಷ್ಟೋ ಅಧಿಕವಾಗಿ ಈ ಬೆನ್ಯಾವಿಾನ್ಯನಾದವನು ಹೀಗೆ ಮಾಡುವದು ಯಾವ ದೊಡ್ಡಮಾತು? ಅವ ನನ್ನು ಬಿಟ್ಟುಬಿಡಿರಿ; ಅವನು ದೂಷಿಸಲಿ; ಯಾಕಂದರೆ ಕರ್ತನು ಅವನಿಗೆ ಹಾಗೆಯೇ ಹೇಳಿದ್ದಾನೆ.

Cross references

ಆದಿಕಾಂಡ 15:4

ಇಗೋ, ಕರ್ತನ ವಾಕ್ಯವು ಅವನಿಗೆ ಉಂಟಾಗಿ--ಇವನು ನಿನಗೆ ಬಾಧ್ಯನಾಗುವ ದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಬಾಧ್ಯನಾಗುವನು ಅಂದನು.

ಆದಿಕಾಂಡ 45:5

ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟು ಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ.

2 ಸಮುವೇಲ 7:2

ಅರ ಸನು ಪ್ರವಾದಿಯಾದ ನಾತಾನನಿಗೆ--ನೋಡು, ನಾನು ದೇವದಾರುಗಳ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಮಂಜೂಷವು ತೆರೆಗಳ ಮಧ್ಯದಲ್ಲಿ ವಾಸವಾಗಿದೆ ಅಂದನು.

2 ಸಮುವೇಲ 12:11

ಕರ್ತನು--ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು.

2 ಸಮುವೇಲ 17:1

ಇದಲ್ಲದೆ ಅಹೀತೋಫೆಲನು ಅಬ್ಷಾ ಲೋಮನಿಗೆ--ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆದುಕೊಳ್ಳುವೆನು.

2 ಸಮುವೇಲ 20:1

ಬೆನ್ಯಾವಿಾನನ ಕುಲದವನಾದ ಬಿಕ್ರೀಯಮಗನಾಗಿರುವ ಶೆಬನೆಂಬ ಹೆಸರುಳ್ಳ ಬೆಲಿಯಾಳನವನಾದ ಒಬ್ಬನು ಅಲ್ಲಿದ್ದನು. ಅವನು ತುತೂರಿಯನ್ನು ಊದಿ--ನಮಗೆ ದಾವೀದನಲ್ಲಿ ಪಾಲಿಲ್ಲ; ಇಷಯನ ಮಗನಲ್ಲಿ ನಮಗೆ ಬಾಧ್ಯತೆಯೂ ಇಲ್ಲ. ಓ ಇಸ್ರಾಯೇಲ್ಯರೇ, ನಿಮ್ಮ ನಿಮ್ಮ ಗುಡಾರಗಳಿಗೆ ಹೋಗಿರಿ ಅಂದನು.

2 ಅರಸುಗಳು 19:37

ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್‌ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.

2 ದಿನವೃತ್ತಾಂತ 32:21

ಆಗ ಕರ್ತನು ತನ್ನ ದೂತನನ್ನು ಕಳುಹಿಸಿದನು; ಅವನು ಅಶ್ಶೂರಿನ ಅರಸನ ದಂಡಿನಲ್ಲಿರುವ ಸಮಸ್ತ ಪರಾ ಕ್ರಮಶಾಲಿಗಳನ್ನೂ ನಾಯಕರನ್ನೂ ಅಧಿಪತಿಗಳನ್ನೂ ನಿರ್ಮೂಲಮಾಡಿದನು. ಹೀಗೆ ಇವನು ಲಜ್ಜಾ ಮುಖದಿಂದ ತನ್ನ ದೇಶಕ್ಕೆ ತಿರುಗಿದನು. ಅವನು ತನ್ನ ದೇವರ ಮನೆಯಲ್ಲಿ ಪ್ರವೇಶಿಸಿದಾಗ ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಕತ್ತಿಯಿಂದ ಕೊಂದುಹಾಕಿದರು.

ಯೆಶಾಯ 10:5

ಓ ನನ್ನ ಕೋಪದ ಕೋಲಾದ ಅಶ್ಶೂರವೇ, ಕೈಯಲ್ಲಿರುವ ಬೆತ್ತವು ನನ್ನ ರೌದ್ರವೇ.

ಯೆಹೆಜ್ಕೇಲ 14:9

ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು.

ಯೆಹೆಜ್ಕೇಲ 20:25

ಆದಕಾರಣ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.

ಮತ್ತಾಯ 10:21

ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.

Interlinear

Choose Theme