ಪರಾ ಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳು ನಿನಗೆ ಕೊಡಲ್ಪಡಲಿ.
Cross references
ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿ ಡುವೆನು; ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.
ಅವನಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿ, ಹಿಂಸಿಸುವವರಿಗೋಸ್ಕರ ತನ್ನ ಬಾಣಗಳನ್ನು ಸಿದ್ಧಮಾಡುತ್ತಾನೆ.
ನಿನ್ನ ಹದವಾದ ಬಾಣಗಳು ಅರಸನ ಶತ್ರು ಗಳ ಹೃದಯದಲ್ಲಿ ನೆಟ್ಟಿವೆ; ಅವುಗಳಿಂದ ಜನರು ನಿನ್ನ ಕೆಳಗೆ ಬೀಳುತ್ತಾರೆ
ಆದದರಿಂದ ದೇವರು ಅದೇ ರೀತಿಯಲ್ಲಿ ನಿನ್ನನ್ನು ಸದಾಕಾಲಕ್ಕೂ ನಾಶಮಾಡಿ, ತೆಗೆದುಬಿಡುವನು. ನಿನ್ನ ವಾಸಸ್ಥಳದಿಂದ ಕಿತ್ತುಹಾಕುವನು; ಜೀವಿತರ ದೇಶ ದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವನು. ಸೆಲಾ.
ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
ಇಗೋ, ತಮ್ಮ ಬಾಯಿಯಿಂದ ಕಕ್ಕುತ್ತಾರೆ; ಅವರ ತುಟಿಗಳಲ್ಲಿ ಕತ್ತಿಗಳು ಅವೆ; ಅವರು--ಕೇಳುವವನಾರು ಎಂದು ಅನ್ನುತ್ತಾರೆ.
ನನ್ನ ಸುತ್ತಲಿರುವವರ ವಿಷವೂ ಅವರ ತುಟಿಗಳ ಕಾಟವೂ ಅವರನ್ನು ಮುಚ್ಚಲಿ.
ಒಬ್ಬ ಕಪಟಿಯು ಬಾಯಿಂದ ತನ್ನ ನೆರೆಯವನನ್ನು ಹಾಳುಮಾಡುತ್ತಾನೆ; ತಿಳುವಳಿಕೆಯ ಮೂಲಕ ನೀತಿವಂತನು ಬಿಡಿಸಲ್ಪ ಡುವನು.
ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ.
ದುಷ್ಟನು ಮೋಸದ ಕೃತ್ಯವನ್ನು ಮಾಡುತ್ತಾನೆ; ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹ ವಾಗಿ ಬಹುಮಾನವಿರುವದು.
ಸುಳ್ಳಾ ಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ.
ಭಕ್ತಿಹೀನನು ದುಷ್ಟತ್ವವನ್ನು ಅಗೆಯುತ್ತಾನೆ; ಅವನ ತುಟಿಗಳು ಉರಿಯುವ ಬೆಂಕಿ ಯಂತಿವೆ.
ಚಾಡಿಕೋರನ ಮಾತುಗಳು ಗಾಯಗಳಂತೆ ಇದ್ದು ಹೊಟ್ಟೆಯೊಳಗೆ ಇಳಿದುಹೋಗುವವು.
ನಾಲಿಗೆಯ ವಶದಲ್ಲಿ ಮರಣವೂ ಜೀವವೂ ಇವೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು.
ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರನು.
ಸುಳ್ಳು ಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ನಾಶವಾ ಗುವನು.
ಓ ಜನಾಂಗಗಳ ಅರಸನೇ, ನಿನಗೆ ಭಯಪಡದವ ನಾರು? ಅದು ನಿನಗೆ ಸಲ್ಲತಕ್ಕದ್ದು; ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ ಅವುಗಳ ಎಲ್ಲಾ ರಾಜ್ಯಗ ಳಲ್ಲಿಯೂ ನಿನ್ನ ಹಾಗೆ ಯಾರೂ ಇಲ್ಲ.
ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ.
ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.