Home Bibles ಸಾಮೇತಿಗಳು 11:12 · ಕನ್ನಡ ಬೈಬಲ್
ಸಾಮೇತಿಗಳು 11:12 · ಕನ್ನಡ ಬೈಬಲ್

ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ.

Cross references

ನ್ಯಾಯಾಧಿಪತಿಗಳು 9:27

ಹೊರಗೆ ಹೋಗಿ ತಮ್ಮ ದ್ರಾಕ್ಷೇ ಫಲಗಳನ್ನು ಕೊಯಿದು ಅವು ಗಳನ್ನು ತುಳಿದು ಸಂತೋಷಪಟ್ಟು ತಮ್ಮ ದೇವರ ಮನೆಯೊಳಗೆ ಹೋಗಿ ತಿಂದು ಕುಡಿದು ಅಬೀಮೆಲೆಕ ನನ್ನು ಶಪಿಸಿದರು.

ನ್ಯಾಯಾಧಿಪತಿಗಳು 9:38

ಆಗ ಜೆಬುಲನು ಅವನಿಗೆ--ನಾವು ಅವನನ್ನು ಸೇವಿಸುವ ಹಾಗೆ ಅಬೀ ಮೆಲೆಕನು ಯಾರು ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನವಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧಮಾಡು ಅಂದನು.

1 ಸಮುವೇಲ 10:27

ಆದರೆ ಬೆಲಿಯಾಳ ಮಕ್ಕಳು--ಇವನು ಹೇಗೆ ನಮ್ಮನ್ನು ರಕ್ಷಿಸುವನು ಎಂದು ಅವನನ್ನು ತಿರಸ್ಕರಿಸಿ ದರು; ಅವನಿಗೆ ಕಾಣಿಕೆಗಳನ್ನು ತಕ್ಕೊಂಡು ಬರಲಿಲ್ಲ. ಆದರೆ ಅವನು ಕೇಳದವನ ಹಾಗೆ ಇದ್ದನು.

2 ಅರಸುಗಳು 18:36

ಆದರೆ ಜನರು ಅವನಿಗೆ ಪ್ರತ್ಯುತ್ತರವನ್ನು ಹೇಳದೆ ಸುಮ್ಮನಿದ್ದರು. ಯಾಕಂದರೆ ಅವನಿಗೆ ಪ್ರತ್ಯುತ್ತರ ಹೇಳಬೇಡಿ ಎಂದು ಅವರಿಗೆ ಅರಸನ ಆಜ್ಞೆ ಇತ್ತು.ಆಗ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ರಬ್ಷಾಕೆಯು ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.

ನೆಹೆಮ್ಯ 4:2

ಈ ಬಲಹೀನರಾದ ಯೆಹೂ ದ್ಯರು ಮಾಡುವದೇನು? ತಮ್ಮನ್ನು ಬಲಪಡಿಸು ವರೋ? ಬಲಿಯನ್ನು ಅರ್ಪಿಸುವರೋ? ಒಂದೇ ದಿವಸದಲ್ಲಿ ತೀರಿಸುವರೋ? ಮಣ್ಣು ದಿಬ್ಬೆಗಳಲ್ಲಿರುವ ಸುಡಲ್ಪಟ್ಟ ಕಲ್ಲುಗಳನ್ನು ಉಜ್ಜೀವಿಸ ಮಾಡುವರೋ ಅಂದನು.

ಕೀರ್ತನೆಗಳು 123:3

ನಮ್ಮನ್ನು ಕರುಣಿಸು; ಓ ಕರ್ತನೇ, ನಮ್ಮನ್ನು ಕರುಣಿಸು; ಬಹಳವಾಗಿ ತಿರ ಸ್ಕಾರದಿಂದ ತುಂಬಿದ್ದೇವೆ.ಭೋಗಿಗಳ ಹಾಸ್ಯದಿಂದ ನಮ್ಮ ಹೃದಯವು ತುಂಬಿಯದೆ, ಗರ್ವಿಷ್ಟರ ನಿಂದೆ ಯಿಂದ ನಮ್ಮ ಮನಸ್ಸು ಬೇಸತ್ತು ಹೋಯಿತು.

ಸಾಮೇತಿಗಳು 10:19

ಹೆಚ್ಚು ಮಾತುಗಳಿಂದ ಪಾಪಕ್ಕೆ ಕೊರತೆ ಇರುವದಿಲ್ಲ. ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು.

ಸಾಮೇತಿಗಳು 14:21

ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪ ಮಾಡುತ್ತಾನೆ; ಬಡವರ ಮೇಲೆ ಕನಿಕರ ತೋರಿ ಸುವವನು ಧನ್ಯನು.

ಲೂಕ 16:14

ಆಗ ಲೋಭಿ ಗಳಾದ ಫರಿಸಾಯರು ಸಹ ಇವೆಲ್ಲವುಗಳನ್ನು ಕೇಳಿ ಆತನಿಗೆ ಪರಿಹಾಸ್ಯ ಮಾಡಿದರು.

ಲೂಕ 18:9

ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು.

ಯೋಹಾನ 7:48

ಅಧಿಕಾರಿಗಳಲ್ಲಿಯೂ ಫರಿಸಾಯರಲ್ಲಿಯೂ ಯಾರಾದರೂ ಅವನ ಮೇಲೆ ವಿಶ್ವಾಸವಿಟ್ಟಿದ್ದಾರೋ?

1 ಪೇತ್ರ 2:23

ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.

Interlinear

Choose Theme