Home Bibles ಕೀರ್ತನೆಗಳು 111:1 · ಕನ್ನಡ ಬೈಬಲ್
ಕೀರ್ತನೆಗಳು 111:1 · ಕನ್ನಡ ಬೈಬಲ್

ಕರ್ತನನ್ನು ಸ್ತುತಿಸಿರಿ; ನಾನು ಕರ್ತನನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ ಸಭೆಯಲ್ಲಿಯೂ ಕೊಂಡಾಡುವೆನು.

Cross references

1 ದಿನವೃತ್ತಾಂತ 29:10

ಆಗ ದಾವೀದನು ಸಮಸ್ತ ಕೂಟದ ಮುಂದೆ ಕರ್ತನನ್ನು ಕೊಂಡಾಡಿ ಹೇಳಿದ್ದೇನಂದರೆ -- ನಮ್ಮ ತಂದೆ ಯಾದ ಇಸ್ರಾಯೇಲಿನ ದೇವರಾದ ಕರ್ತನೇ, ನೀನು ಯುಗಯುಗಾಂತರಗಳಿಂದ ಯುಗಯುಗಾಂತರ ಗಳಿಗೂ ಸ್ತುತಿಸಲ್ಪಡುವವನಾಗಿದ್ದೀ.

2 ದಿನವೃತ್ತಾಂತ 6:3

ಅರಸನು ಇಸ್ರಾಯೇಲಿನ ಸಭೆಯವರ ಕಡೆಗೆ ತಿರುಗಿಕೊಂಡು ಆಶೀರ್ವದಿಸಿದಾಗ ಇಸ್ರಾಯೇಲಿನ ಸಭೆಯು ನಿಂತಿತ್ತು.

2 ದಿನವೃತ್ತಾಂತ 20:26

ನಾಲ್ಕನೇ ದಿವಸ ದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡು ಅಲ್ಲಿ ಕರ್ತನನ್ನು ಸ್ತುತಿಸಿದರು. ಆದಕಾರಣ ಇಂದಿನ ವರೆಗೂ ಆ ಸ್ಥಳಕ್ಕೆ ಬೆರಾಕ ತಗ್ಗು ಎಂದು ಕರೆಯುತ್ತಾರೆ.

ಕೀರ್ತನೆಗಳು 9:1

ಓ ಕರ್ತನೇ, ನಾನು ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುತ್ತೇನೆ; ನಿನ್ನ ಅದ್ಭುತ ಕಾರ್ಯಗಳನ್ನೆಲ್ಲಾ ತೋರಿಸುವೆನು.

ಕೀರ್ತನೆಗಳು 22:23

ಕರ್ತನಿಗೆ ಭಯಪಡುವವರೇ, ಆತನನ್ನು ಸ್ತುತಿಸಿರಿ; ಯಾಕೋಬಿನ ಎಲ್ಲಾ ಸಂತಾನದವರೇ, ಆತನನ್ನು ಘನಪಡಿಸಿರಿ; ಇಸ್ರಾಯೇಲಿನ ಎಲ್ಲಾ ಸಂತಾನದವರೇ, ಆತನಿಗೆ ಭಯಪಡಿರಿ.

ಕೀರ್ತನೆಗಳು 22:25

ಮಹಾ ಸಭೆಯಲ್ಲಿ ನಿನ್ನನ್ನು ಕುರಿತು ನನ್ನ ಸ್ತೋತ್ರವು ನಿನಗಿ ರುವದು; ನನ್ನ ಪ್ರಮಾಣಗಳನ್ನು ಆತನಿಗೆ ಭಯಪಡು ವವರ ಮುಂದೆ ಸಲ್ಲಿಸುವೆನು.

ಕೀರ್ತನೆಗಳು 35:18

ಮಹಾಸಭೆ ಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರಲ್ಲಿ ನಿನ್ನನ್ನು ಸ್ತುತಿಸುವೆನು.

ಕೀರ್ತನೆಗಳು 40:9

ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.

ಕೀರ್ತನೆಗಳು 89:5

ಇದಲ್ಲದೆ, ಆಕಾಶಗಳು ಓ ಕರ್ತನೇ, ನಿನ್ನ ಅದ್ಭುತಗಳನ್ನು ಪರಿಶುದ್ಧರ ಸಭೆಯಲ್ಲಿ ನಿನ್ನ ನಂಬಿಗಸ್ತಿಕೆಯನ್ನು ಸಹ ಕೊಂಡಾಡುವವು.

ಕೀರ್ತನೆಗಳು 89:7

ದೇವರು ಪರಿಶುದ್ಧರ ಸಭೆಯಲ್ಲಿ ಬಹಳ ಭೀಕರನೂ ತನ್ನ ಸುತ್ತಲಿರುವವರೆಲ್ಲರಿಗೆ ಭಯಂ ಕರನೂ ಆಗಿದ್ದಾನೆ.

ಕೀರ್ತನೆಗಳು 103:1

ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು.

ಕೀರ್ತನೆಗಳು 106:1

ನೀವು ಕರ್ತನನ್ನು ಸ್ತುತಿಸಿರಿ, ಕರ್ತನಿಗೆ ಉಪಕಾರ ಸ್ತುತಿಮಾಡಿರಿ; ಆತನು ಒಳ್ಳೆಯವನು, ಆತನ ಕರುಣೆಯು ಶಾಶ್ವತ ವಾಗಿರುವದು.

ಕೀರ್ತನೆಗಳು 106:48

ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್‌ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.

ಕೀರ್ತನೆಗಳು 107:32

ಜನರು ಸಭೆಯಲ್ಲಿ ಆತನನ್ನು ಘನಪಡಿಸಿ ಹಿರಿಯರ ಸಭೆಯಲ್ಲಿ ಆತನನ್ನು ಸ್ತುತಿಸಲಿ.

ಕೀರ್ತನೆಗಳು 108:3

ಕರ್ತನೇ, ಜನರಲ್ಲಿ ನಿನ್ನನ್ನು ಕೊಂಡಾಡುವೆನು; ಜನಾಂಗಗಳಲ್ಲಿ ನಿನ್ನನ್ನು ಕೀರ್ತಿಸು ವೆನು.

ಕೀರ್ತನೆಗಳು 109:30

ಕರ್ತನನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಹೌದು, ಅನೇಕರ ಮಧ್ಯದಲ್ಲಿ ಆತನನ್ನು ಸ್ತುತಿಸುವೆನು.ಬಡವನ ಬಲಪಾರ್ಶ್ವದಲ್ಲಿ ಅವನ ಪ್ರಾಣಕ್ಕೆ ನ್ಯಾಯತೀರಿಸುವ ವರೊಳಗಿಂದ ಅವನನ್ನು ರಕ್ಷಿಸುವದಕ್ಕೆ ಆತನು ನಿಂತುಕೊಳ್ಳುವನು.

ಕೀರ್ತನೆಗಳು 138:1

ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಮುಂದೆ ನಿನ್ನನ್ನು ಕೀರ್ತಿಸುವೆನು.

ಕೀರ್ತನೆಗಳು 149:1

ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಹೊಸ ಹಾಡನ್ನೂ ಪರಿಶುದ್ಧರ ಸಭೆ ಯಲ್ಲಿ ಆತನ ಸ್ತೋತ್ರವನ್ನೂ ಹಾಡಿರಿ.

Interlinear

Choose Theme