ಗಿಲ್ಯಾದ್ ನನ್ನದು; ಮನಸ್ಸೆ ನನ್ನದು; ಎಫ್ರಾಯಾಮ್ ನನ್ನ ತಲೆಯ ಬಲಸ್ಥಾನವು; ಯೆಹೂದವು ನನ್ನ ರಾಜ ದಂಡವಾಗಿದೆ
Cross references
ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು.
ಅವನ ಚೊಚ್ಚಲ ಹೋರಿಯಂತೆ ಅವನಿಗೆ ಪ್ರಭೆ ಇರುವದು; ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇವೆ. ಅವುಗಳಿಂದ ಜನಗಳನ್ನು ಒಟ್ಟಿಗೆ ಭೂಮಿಯ ಅಂತ್ಯಗಳ ವರೆಗೆ ನೂಕುತ್ತಾನೆ. ಇವು ಎಫ್ರಾಯಾಮನ ಹತ್ತು ಸಾವಿರಗಳೂ ಇವು ಮನಸ್ಸೆಯ ಸಹಸ್ರವೂ ಆಗಿವೆ ಎಂದು ಹೇಳಿದನು.
ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ:
ಆಗ ಫಿಲಿಷ್ಟಿ ಯರು ಕೂಡಿಕೊಂಡು ಬಂದು ಶೂನೇಮಿನಲ್ಲಿ ದಂಡಿ ಳಿದರು. ಸೌಲನು ಎಲ್ಲಾ ಇಸ್ರಾಯೇಲ್ಯರನ್ನು ಕೂಡಿಸಿ ಕೊಂಡು ಗಿಲ್ಬೋವದಲ್ಲಿ ದಂಡಿಳಿದನು.
ಆದರೆ ಸೌಲನ ಸೈನ್ಯಾಧಿಪತಿಯಾದ ನೇರನ ಮಗ ನಾಗಿರುವ ಅಬ್ನೇರನು ಸೌಲನ ಮಗನಾದ ಈಷ್ಬೋ ಶೆತನನ್ನು ಮಹನಯಿಮಿಗೆ ಕರಕೊಂಡು ಹೋಗಿ
ಅವನು ಹೆಬ್ರೋನಿನಲ್ಲಿ ಯೆಹೂದ ಜನರ ಮೇಲೆ ಏಳುವರೆ ವರುಷ ಆಳಿದನು. ಯೆರೂಸಲೇಮಿನಲ್ಲಿ ಎಲ್ಲಾ ಇಸ್ರಾಯೇಲ್ಯರ ಮೇಲೆಯೂ ಎಲ್ಲಾ ಯೆಹೂ ದದ ಜನರ ಮೇಲೆಯೂ ಮೂವತ್ತುಮೂರು ವರುಷ ಆಳಿದನು.
ಅಲ್ಲಿ ನ್ಯಾಯತೀರ್ವಿಕೆಗೆ ಸಿಂಹಾಸನಗಳೂ ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.