ನೀನು ಎದ್ದು, ಚೀಯೋನನ್ನು ಕನಿ ಕರಿಸುವಿ; ಯಾಕಂದರೆ ಅದನ್ನು ಕರುಣಿಸುವದಕ್ಕೆ ಕಾಲವಾಯಿತು; ಹೌದು ನಿರ್ಣಯಿಸಿದ ಸಮಯವು ಬಂದಿದೆ.
Cross references
ದೇವರು ಮೋಶೆಗೆ--ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿ ದ್ದಾನೆಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು; ಇದೇ ಯುಗ ಯುಗಕ್ಕೆ ನನ್ನ ಹೆಸರೂ ತಲತಲಾಂತರಕ್ಕೆ ನನ್ನ ಸ್ಮರಣೆಯೂ ಆಗಿದೆ ಎಂದು ಹೇಳಿದನು.
ಯೆರೆವಿಾಯನ ಮುಖಾಂತರ ಕರ್ತನು ಹೇಳಿದ ವಾಕ್ಯವು ಈಡೇರುವ ಹಾಗೆ ಪಾರಸಿಯ ಅರಸನಾದ ಕೋರೆಷನ ಮೊದಲನೇ ವರುಷದಲ್ಲಿ ಕರ್ತನು ಪಾರಸಿಯ ಅರಸನಾದ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲಿ ಎಲ್ಲೆಲ್ಲಿಯೂ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇನಂದರೆ--
ಓ ಕರ್ತನೇ, ನಿನ್ನ ಕೋಪದಿಂದ ಏಳು; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು; ನನ್ನ ನಿಮಿತ್ತ ಎಚ್ಚರಗೊಳ್ಳು; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ.
ನಮಗೆ ಸಹಾಯವಾಗಿ ಏಳು; ನಿನ್ನ ಕೃಪೆಯ ನಿಮಿತ್ತ ನಮ್ಮನ್ನು ವಿಮೋಚಿಸು.
ನಿನ್ನ ದಿವ್ಯ ಚಿತ್ತದ ಪ್ರಕಾರ ಚೀಯೋನಿಗೆ ಒಳ್ಳೇದು ಮಾಡು; ಯೆರೂಸಲೇಮಿನ ಗೋಡೆಗಳನ್ನು ಕಟ್ಟು.ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು.
ದೇವರು ಚೀಯೋನನ್ನು ರಕ್ಷಿಸಿ ಯೆಹೂದದ ಪಟ್ಟ ಣಗಳನ್ನು ಕಟ್ಟುವನು; ಹೀಗೆ ಅವರು ಅಲ್ಲಿ ವಾಸ ಮಾಡಿ ಅದನ್ನು ಸ್ವಾಧೀನಪಡಿಸಿಕೊಳ್ಳುವರು.ಅವನ ಸೇವಕರ ಸಂತತಿಯು ಸಹ ಅದನ್ನು ಬಾಧ್ಯವಾಗಿ ಹೊಂದುವದು; ಆತನ ಹೆಸರನ್ನು ಪ್ರೀತಿಮಾಡುವವರು ಅದರಲ್ಲಿ ವಾಸಮಾಡುವರು.
ನಾನು ಸಭೆಯನ್ನು ಅಂಗೀಕರಿಸು ವಾಗ ಸರಿಯಾಗಿ ನ್ಯಾಯತೀರಿಸುವೆನು;
ಬೆಟ್ಟಗಳು ಹುಟ್ಟುವದಕ್ಕಿಂತ ಮುಂಚೆಯೂ ನೀನು ಭೂಮಿಯನ್ನೂ ಲೋಕವನ್ನೂ ನಿರ್ಮಿಸುವದಕ್ಕಿಂತ ಮುಂಚೆಯೂ ನಿತ್ಯತ್ವದಿಂದ ನಿತ್ಯತ್ವಕ್ಕೂ ನೀನು ದೇವರಾಗಿದ್ದೀ.
ಇಗೋ, ಓ ಕರ್ತನೇ, ನಿನ್ನ ಶತ್ರು ಗಳು, ಓ ಕರ್ತನೇ, ಇಗೋ, ನಿನ್ನ ಶತ್ರುಗಳು ನಾಶವಾಗುವರು; ಅಕ್ರಮ ಮಾಡುವವರೆಲ್ಲರು ಚದರಿ ಹೋಗುವರು.
ಓ ಕರ್ತನೇ, ನಿನ್ನ ಹೆಸರು ಶಾಶ್ವತವಾದದ್ದು, ಓ ಕರ್ತನೇ, ನಿನ್ನ ಜ್ಞಾಪಕವು ತಲತಲಾಂತರಕ್ಕೂ ಇರುವದು.
ಆಗ ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡ ಬೇಕೆಂದರೆ? ಕರ್ತನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ಬಡವರು ಅದನ್ನು ಆಶ್ರಯಿಸಿ ಕೊಳ್ಳುವರು ಎಂಬದೇ.
ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.