Home Bibles ಸಾಮೇತಿಗಳು 7:17 · ಕನ್ನಡ ಬೈಬಲ್
ಸಾಮೇತಿಗಳು 7:17 · ಕನ್ನಡ ಬೈಬಲ್

ರಕ್ತಬೋಳ ಅಗರು ಲವಂಗ ಚೆಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆ ಗೊಳಿಸಿದ್ದೇನೆ.

Cross references

ನಿರ್ಗಮಕಾಂಡ 30:23

ಉತ್ತಮ ವಾದ ತೈಲಗಳನ್ನು ಅಂದರೆ ಐದುನೂರು ಶೆಕೆಲ್‌ ಸ್ವಚ್ಚವಾದ ರಕ್ತ ಬೋಳವು, ಅದರ ಅರ್ಧದಷ್ಟು ಅಂದರೆ ಇನ್ನೂರೈವತ್ತು ಶೆಕೆಲಿನ ಸುಗಂಧವಾದ ಲವಂಗ ಪಟ್ಟೆ ಯನ್ನು ಮತ್ತು ಇನ್ನೂರೈವತ್ತು ಶೆಕೆಲ್‌ ಸುಗಂಧವಾದ ಬಜೆಯನ್ನು,

ಕೀರ್ತನೆಗಳು 45:8

ನಿನ್ನ ವಸ್ತ್ರಗಳೆಲ್ಲಾ ಬೋಳವು ಅಗರು ದಾಲ್ಚಿನ್ನಿ ಇವುಗಳ ಸುವಾಸನೆಯಿಂದ ಇರುತ್ತವೆ. ಇವುಗಳಿಂದ ಅವರು ದಂತದ ಅರಮನೆಗಳೊಳಗಿಂದ ನಿನ್ನನ್ನು ಸಂತೋಷಪಡಿಸುತ್ತಾರೆ.

ಕೀರ್ತನೆಗಳು 45:9

ಅರಸುಗಳ ಕುಮಾರ್ತೆ ಯರು ನಿನ್ನ ಗೌರವವುಳ್ಳ ಸ್ತ್ರೀಯರಲ್ಲಿ ಇದ್ದಾರೆ; ರಾಣಿಯು ಓಫಿರ್‌ ಬಂಗಾರವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿದ್ದಾಳೆ.

ಪರಮಗೀತ 3:6

ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು?

ಪರಮಗೀತ 4:13

ನಿನ್ನ ಗಿಡಗಳಲ್ಲಿ ದಾಳಿಂಬರದ ವನವೂ ರಮ್ಯವಾದ ಫಲಕೊಡುವ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಕೂಡ ಇವೆ.

ಪರಮಗೀತ 4:14

ಜಟಾಮಾಂಸಿಯೂ-- ಕೇಸರಿಯೂ ಬಜೆಯೂ ಲವಂಗವೂ ಎಲ್ಲಾ ಸಾಂಬ್ರಾಣಿ ಗಿಡಗಳೂ ರಕ್ತಬೋಳವೂ ಅಗರೂ

ಯೆಶಾಯ 57:7

ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀ. ಬಲಿ ಅರ್ಪಿಸುವ ದಕ್ಕೂ ಅಲ್ಲಿಗೆ ಏರಿದ್ದೀ.

ಯೆಹೆಜ್ಕೇಲ 27:19

ದಾನ್‌ ಮತ್ತು ಯಾವಾನ್‌ ಸಹ ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಸಂತೆಯಲ್ಲಿ ಇದ್ದವು.

Interlinear

Choose Theme