ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
Cross references
ಇದಲ್ಲದೆ ಸೊಲೊಮೋನನಿಗೆ ಐಗುಪ್ತ ದಿಂದ ಕುದುರೆಗಳೂ ಸಣಬಿನ ನೂಲು ತರಲ್ಪಟ್ಟವು. ಅರಸನ ವರ್ತಕರು ಕ್ರಯಕ್ಕೆ ಸಣಬಿನ ನೂಲನ್ನು ತೆಗೆದುಕೊಂಡರು.ಐಗುಪ್ತದಿಂದ ಹೊರಟುಬರುವ ರಥದ ಕ್ರಯವು ಆರು ನೂರು ಬೆಳ್ಳಿ ಶೆಕೇಲುಗಳು, ಕುದುರೆಯ ಕ್ರಯವು ನೂರ ಐವತ್ತು ಬೆಳ್ಳಿ ಶೆಕೇಲುಗಳು. ಈ ಪ್ರಕಾರ ಹಿತ್ತಿಯರ ಅರಸುಗಳೆಲ್ಲರಿಗೂ ಅರಾಮ್ಯದ ಅರಸುಗಳಿಗೂ ಅವರ ಮುಖಾಂತರ ತಕ್ಕೊಂಡು ಬರುತ್ತಿದ್ದರು.
ಆಕೆಯು ತನಗಾಗಿ ರತ್ನ ಕಂಬಳಿಗಳನ್ನು ಮಾಡು ತ್ತಾಳೆ; ಆಕೆಯ ಉಡುಪೋ ರೇಷ್ಮೆ ರಕ್ತಾಂಭರ.
ನನ್ನ ಪ್ರಿಯನೇ, ಇಗೋ, ನೀನು ಸೌಂದರ್ಯ ವಂತನು; ಹೌದು, ರಮ್ಯವಾದವನು; ನಮ್ಮ ಹಾಸಿಗೆ ಹಸುರಾಗಿದೆ.ನಮ್ಮ ಮನೆಯ ತೊಲೆಗಳು ದೇವದಾರು ಮರಗಳು, ನಮ್ಮ ಜಂತೆಗಳು ತುರಾಯಿ ಗಿಡಗಳು.
ಸೊಲೊಮೋನನ ಹಾಸಿಗೆಯನ್ನು ನೋಡು; ಇಸ್ರಾ ಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು ಮಂದಿ ಪರಾಕ್ರಮಶಾಲಿಗಳು ಅದನ್ನು ಸುತ್ತಿಕೊಂಡಿದ್ದಾರೆ.
ನಯವಾದ ನಾರಿನ ಕೆಲಸದವರು, ಬಟ್ಟೆ ನೇಯುವವರು ನಾಚಿಕೊ ಳ್ಳುವರು.
ನಿನ್ನ ಹಾಯಿಯು ನಿನಗೆ ಧ್ವಜವು ಆಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರುಬಟ್ಟೆಯಿಂದ ಮಾಡಿ ದ್ದಾರೆ. ಎಲೀಷದ ದ್ವೀಪಗಳಿಂದ ತಂದ ನೀಲಿಯೂ ನೇರಳೆ ಬಣ್ಣವೂ ನಿನಗೆ ಮುಚ್ಚಳವಾಯಿತು.
ಇಗೋ, ನಾನು ಅವಳನ್ನು ಹಾಸಿಗೆಯಲ್ಲಿಯೂ ಅವಳೊಂದಿಗೆ ವ್ಯಭಿಚಾರ ಮಾಡಿದವರು ತಮ್ಮ ಕೃತ್ಯಗಳಿ ಗಾಗಿ ಮಾನಸಾಂತರಪಡದಿದ್ದರೆ ಅವರನ್ನು ಮಹಾಸಂಕ ಟದಲ್ಲಿಯೂ ಹಾಕುವೆನು.