ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು.
Cross references
ಕರ್ತನಾದ ದೇವರು ಮಾಡಿದ ಅಡವಿಯ ಎಲ್ಲಾ ಮೃಗಗಳಿಗಿಂತ ಸರ್ಪವು ಯುಕ್ತಿ ಯುಳ್ಳದ್ದಾಗಿತ್ತು. ಅದು ಸ್ತ್ರೀಗೆ--ನೀವು ತೋಟ ದಲ್ಲಿರುವ ಯಾವ ಮರದ ಫಲವನ್ನು ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ ಎಂದು ಕೇಳಿತು.
ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು ಮುಸುಕು ಹಾಕಿ ಮುಚ್ಚಿಕೊಂಡು ತಿಮ್ನಾತಿನ ಮಾರ್ಗದಲ್ಲಿರುವ ಬಹಿರಂಗ ಸ್ಥಳದಲ್ಲಿ ಕೂತು ಕೊಂಡಳು; ಯಾಕಂದರೆ ಶೇಲಹನು ದೊಡ್ಡವನಾ ಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲ ವೆಂದು ನೋಡಿದಳು.
ಯೆಹೂದನು ಅವಳನ್ನು ನೋಡಿದಾಗ ಅವಳು ಮುಖಮುಚ್ಚಿಕೊಂಡಿದ್ದರಿಂದ ಅವಳು ಸೂಳೆಯೆಂದು ನೆನಸಿಕೊಂಡನು.
ಯೋರಾಮನು ಯೇಹು ವನ್ನು ನೋಡಿದಾಗ--ಯೇಹುವೇ, ಸಮಾಧಾನವೋ ಅಂದನು. ಅದಕ್ಕವನು--ನಿನ್ನ ತಾಯಿಯಾದ ಈಜೆ ಬೆಲಳ ಜಾರತ್ವವೂ ಅವಳ ಮಾಟಗಳೂ ಅಧಿಕವಾಗಿರು ವಾಗ ಸಮಾಧಾನವೇನು ಅಂದನು.
ಯೇಹುವು ಇಜ್ರೇಲಿಗೆ ಬಂದಿದ್ದಾನೆಂದು ಈಜೆ ಬೆಲಳು ಕೇಳಿ ಅವಳು ತನ್ನ ಮುಖಕ್ಕೆ ಬಣ್ಣ ಹಚ್ಚಿ ಕೊಂಡು ತನ್ನ ತಲೆಯನ್ನು ಶೃಂಗರಿಸಿಕೊಂಡು ಕಿಟಕಿ ಯಿಂದ ಇಣಿಕಿ ನೋಡಿದಳು.
ಪ್ರಾಣಿಗಾಗಿಯೋ ಎಂಬಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದೋಷಗಳನ್ನು ಹೆಚ್ಚಿಸುತ್ತಾಳೆ.
ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ,
ಮರೆತುಹೋದ ಸೂಳೆಯೇ, ಕಿನ್ನರಿಯನ್ನು ತಕ್ಕೋ, ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ ಬಹಳ ಗೀತೆಗಳನ್ನು ಹಾಡು (ಎಂಬದೇ).
ನೀನು ಸೂರೆ ಯಾದಾಗ ಏನು ಮಾಡುವಿ? ನೀನು ಕಡು ಕೆಂಪುಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣ ಗಳಿಂದ ನಿನ್ನನ್ನು ಅಲಂಕರಿಸಿದರೇನು? ಮುಖಕ್ಕೆ ಬಣ್ಣ ಹಚ್ಚಿಕೊಂಡರೇನು? ವ್ಯರ್ಥವಾಗಿ ನೀನು ನಿನ್ನನ್ನು ಸೌಂದರ್ಯಳಾಗಿ ಮಾಡಿಕೊಳ್ಳುವಿ; ನಿನ್ನ ಪ್ರಿಯರು ನಿನ್ನನ್ನು ಅಸಹ್ಯಿಸುವರು; ನಿನ್ನ ಪ್ರಾಣವನ್ನು ಹುಡುಕುವರು.
ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ.
ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಸ್ವಸ್ಥಬುದ್ಧಿಯುಳ್ಳವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತುಗಳು ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ
ಆಗ ಅವನು ಆತ್ಮದಲ್ಲಿ ನನ್ನನ್ನು ಎತ್ತಿಕೊಂಡು ಅಡವಿಗೆ ಹೋದನು; ಅಲ್ಲಿ ದೇವದೂಷಣೆಯ ಹೆಸರುಗಳಿಂದ ತುಂಬಿದ್ದು ಏಳು ತಲೆಗಳು ಹತ್ತು ಕೊಂಬುಗಳೂ ಇದ್ದ ಕೆಂಪುಬಣ್ಣದ ಮೃಗದ ಮೇಲೆ ಕೂತಿದ್ದ ಒಬ್ಬ ಸ್ತ್ರೀಯನ್ನು ನಾನು ಕಂಡೆನು.