Home Bibles ಸಾಮೇತಿಗಳು 23:28 · ಕನ್ನಡ ಬೈಬಲ್
ಸಾಮೇತಿಗಳು 23:28 · ಕನ್ನಡ ಬೈಬಲ್

ಪ್ರಾಣಿಗಾಗಿಯೋ ಎಂಬಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದೋಷಗಳನ್ನು ಹೆಚ್ಚಿಸುತ್ತಾಳೆ.

Cross references

ಆದಿಕಾಂಡ 39:10

ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದಾಗ್ಯೂ ಅವನು ಅವಳ ಕೂಡ ಮಲಗುವದಕ್ಕಾದರೂ ಅವಳ ಹತ್ತಿರ ಇರುವದ ಕ್ಕಾದರೂ ಕಿವಿಗೊಡದೆ ಹೋದನು.

ಅಂಕೆಗಳ ಪುಸ್ತಕ 25:1

ಆಗ ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ ಜನರು ಮೋವಾಬಿನ ಕುಮಾರ್ತೆಯರ ಸಂಗಡ ಜಾರತ್ವ ಮಾಡಲಾರಂಭಿ ಸಿದರು.

ನ್ಯಾಯಾಧಿಪತಿಗಳು 16:4

ಇದರ ತರುವಾಯ ಆದದ್ದೇನಂದರೆ, ಸೋರೇಕ್‌ ತಗ್ಗಿನಲ್ಲಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯನ್ನು ಪ್ರೀತಿಮಾಡಿದನು.

ಸಾಮೇತಿಗಳು 2:16

ಪರಸ್ತ್ರೀ ಯಿಂದ ಅಂದರೆ ತನ್ನ ಮಾತುಗಳಿಂದ ಮುಖಸ್ತುತಿ ಮಾಡುವ ಸ್ತ್ರೀಯಿಂದ ತನ್ನ ದೇವರ ಒಡಂಬಡಿಕೆ ಯನ್ನು ಮರೆತು

ಸಾಮೇತಿಗಳು 7:10

ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು.

ಸಾಮೇತಿಗಳು 7:12

ಒಂದು ಸಮಯದಲ್ಲಿ ಅವಳು ಹೊರಗೆ ಮತ್ತೊಂದು ಸಮಯದಲ್ಲಿ ಬೀದಿಗಳಲ್ಲಿ ಪ್ರತಿಯೊಂದು ಮೂಲೆ ಯಲ್ಲಿ ಹೊಂಚುಹಾಕುವಳು).

ಸಾಮೇತಿಗಳು 7:22

ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ

ಸಾಮೇತಿಗಳು 7:26

ಬಹು ಜನರನ್ನು ಅವಳು ಗಾಯಪಡಿಸಿ ಬೀಳಿಸಿ ದ್ದಾಳೆ; ಹೌದು, ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದುಹೋಗುತ್ತದೆ.

ಸಾಮೇತಿಗಳು 9:18

ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.

ಸಾಮೇತಿಗಳು 22:14

ಪರಸ್ತ್ರೀಯ ಬಾಯಿ ಆಳವಾದ ಕುಣಿ; ಕರ್ತನಿಗೆ ಅಸಹ್ಯವಾದವನು ಅದರಲ್ಲಿ ಬೀಳುವನು.

ಸಭಾಪ್ರಸಂಗಿ 7:26

ತನ್ನ ಹೃದಯವು ಉರುಲುಗಳೂ ಬಲೆ ಗಳೂ ಅವಳ ಕೈಗಳ ಕಟ್ಟುಗಳೂ ಆಗಿರುವ ಸ್ತ್ರೀಯು ಮರಣಕ್ಕಿಂತಲೂ ಕಠೋರವಾಗಿದ್ದಾಳೆಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯು ಅವಳಿಂದ ಹಿಡಿಯಲ್ಪ ಡುವನು.

ಯೆರೆಮಿಯ 3:2

ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆತ್ತುಕೊಂಡು ಎಲ್ಲಿ ನಿನ್ನ ಸಂಗಡ ಮಲಗಲಿಲ್ಲವೋ ನೋಡು. ಅರಣ್ಯದಲ್ಲಿ ಅರಬಿಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ; ಹೀಗೆ ನಿನ್ನ ಸೂಳೆತನಗಳಿಂದಲೂ ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀ.

ಹೊಶೇಯ 4:11

ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ.

1 ಕೊರಿಂಥದವರಿಗೆ 10:8

ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವ ಮಾಡದೆ ಇರೋಣ.

ಪ್ರಕಟನೆ 17:1

ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿ--ಇಲ್ಲಿಗೆ ಬಾ, ಬಹಳ ನೀರುಗಳ ಮೇಲೆ ಕೂತಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ.

Interlinear

Choose Theme