Home Bibles ☰ Books ಸಾಮೇತಿಗಳು 4:3 · ಕನ್ನಡ ಬೈಬಲ್
ಸಾಮೇತಿಗಳು 4:3 · ಕನ್ನಡ ಬೈಬಲ್

ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ.

Cross references

2 ಸಮುವೇಲ 12:24

ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯನ್ನು ಆದರಿಸಿ ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು.ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಕರ್ತನು ಅವ ನನ್ನು ಪ್ರೀತಿಮಾಡಿದನು.

1 ಅರಸುಗಳು 1:13

ನೀನು ದಾವೀದನ ಬಳಿಗೆ ಹೋಗಿ ಅವ ನಿಗೆ--ಅರಸನಾದ, ನನ್ನ ಒಡೆಯನೇ, ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವದು ಯಾಕೆ ಎಂದು ಹೇಳು.

1 ದಿನವೃತ್ತಾಂತ 3:5

ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರು ಯಾರಂದರೆ ಅವ್ಮೆಾಯೇಲನ ಮಗಳಾದ ಬತ್ಷೂವಳಿಂದ ಹುಟ್ಟಿದ ಶಿಮ್ಮನು, ಶೋಬಾಬನು, ನಾತಾನನು,

1 ದಿನವೃತ್ತಾಂತ 22:5

ಇದ ಲ್ಲದೆ ದಾವೀದನು--ನನ್ನ ಮಗನಾದ ಸೊಲೊಮೋ ನನು ಹುಡುಗನಾಗಿಯೂ ಮೃದುವಾದವನಾಗಿಯೂ ಇದ್ದಾನೆ; ಕರ್ತನಿಗೆ ಕಟ್ಟಬೇಕಾದ ಮನೆಯೂ ಸಮಸ್ತ ದೇಶಗಳಲ್ಲಿ ಕೀರ್ತಿಯಲ್ಲಿಯೂ ಸೌಂದರ್ಯದ ಲ್ಲಿಯೂ ಅಧಿಕ ಘನವಾಗಿರಬೇಕು; ನಾನು ಅದ ಕ್ಕೋಸ್ಕರ ಈಗ ಸಿದ್ಧಮಾಡುವೆನೆಂದು ಹೇಳಿದನು. ಆದದರಿಂದ ದಾವೀದನು ಸಾಯುವದಕ್ಕಿಂತ ಮುಂಚೆ ಬಹಳವಾಗಿ ಸಿದ್ಧಮಾಡಿದನು.

1 ದಿನವೃತ್ತಾಂತ 29:1

ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನಂದರೆ -- ದೇವರು ಒಬ್ಬನನ್ನೇ ಆದುಕೊಂಡ ನನ್ನ ಮಗನಾದ ಸೊಲೊ ಮೋನನು ಚಿಕ್ಕವನಾಗಿಯೂ ಮೃದುವಾಗಿಯೂ ಇದ್ದಾನೆ. ಆದರೆ ಕೆಲಸವು ದೊಡ್ಡದು; ಈ ಅರಮನೆ ಯು ಮನುಷ್ಯರಿಗೋಸ್ಕರವಲ್ಲ, ಕರ್ತನಾದ ದೇವರಿ ಗೋಸ್ಕರವೇ.

ಯೆರೆಮಿಯ 10:23

ಅವರಲ್ಲಿ ಶೇಷವು ಇರುವದಿಲ್ಲ; ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಅಂದರೆ ಅವರ ವಿಚಾರಣೆಯ ವರುಷವನ್ನೇ ತರುತ್ತೇನೆ.

ಜೆಕರ್ಯ 12:10

ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.

ರೋಮಾಪುರದವರಿಗೆ 12:16

ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.

Interlinear

Choose Theme