ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರು ಯಾರಂದರೆ ಅವ್ಮೆಾಯೇಲನ ಮಗಳಾದ ಬತ್ಷೂವಳಿಂದ ಹುಟ್ಟಿದ ಶಿಮ್ಮನು, ಶೋಬಾಬನು, ನಾತಾನನು,
Cross references
ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಯಾವವೆಂದರೆ; ಶಮ್ಮೂವ ಶೊಬಾಬ್ ನಾತಾನ್
ಅರ ಸನು ಪ್ರವಾದಿಯಾದ ನಾತಾನನಿಗೆ--ನೋಡು, ನಾನು ದೇವದಾರುಗಳ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಮಂಜೂಷವು ತೆರೆಗಳ ಮಧ್ಯದಲ್ಲಿ ವಾಸವಾಗಿದೆ ಅಂದನು.
ಆ ಸ್ತ್ರೀಯು ಮಹಾಸೌಂದರ್ಯ ರೂಪವುಳ್ಳವಳಾಗಿದ್ದಳು. ಆಗ ದಾವೀದನು ಆ ಸ್ತ್ರೀ ಯಾರೆಂದು ಕೇಳುವದಕ್ಕೆ--ಕಳುಹಿಸಿದಾಗ ಒಬ್ಬನು--ಅವಳು ಹಿತ್ತಿಯನಾದ ಊರೀಯನ ಹೆಂಡತಿಯಾಗಿರುವ ಎಲೀಯಾಮನ ಮಗಳಾದ ಬತ್ಷೆಬೆಯಲ್ಲವೋ ಅಂದನು.
ಕರ್ತನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಅವನ ಬಳಿಗೆ ಬಂದು ಹೇಳಿದ್ದೇನಂದರೆ--ಒಂದು ಪಟ್ಟಣದಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು.
ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯನ್ನು ಆದರಿಸಿ ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು.ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಕರ್ತನು ಅವ ನನ್ನು ಪ್ರೀತಿಮಾಡಿದನು.
ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳೇನಂದರೆ--ಶಮ್ಮೂವನು, ಶೋಬಾ ಬನು, ನಾತಾನನು,
ಕರ್ತನು ನನಗೆ ಅನೇಕ ಕುಮಾ ರರನ್ನು ಕೊಟ್ಟಿರುವಾಗ ನನ್ನ ಸಮಸ್ತ ಕುಮಾರರಲ್ಲಿ ಇಸ್ರಾಯೇಲಿನ ಮೇಲಾಗಿ ಕರ್ತನ ರಾಜ್ಯದ ಸಿಂಹಾ ಸನದ ಮೇಲೆ ಕುಳಿತುಕೊಳ್ಳುವದಕ್ಕೆ ನನ್ನ ಮಗನಾದ ಸೊಲೊಮೋನನನ್ನು ಆದುಕೊಂಡನು.
ಇಷಯನಿಂದ ಅರಸನಾದ ದಾವೀದನು ಹುಟ್ಟಿದನು. ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು;
ಇವನು ಮೆಲೆಯಾನ ಮಗನು; ಇವನು ಮೆನ್ನನ ಮಗನು; ಇವನು ಮತ್ತಾಥನ ಮಗನು; ಇವನು ನಾತಾನನ ಮಗನು; ಇವನು ದಾವೀದನ ಮಗನು;