Home Bibles ಸಾಮೇತಿಗಳು 31:26 · ಕನ್ನಡ ಬೈಬಲ್
ಸಾಮೇತಿಗಳು 31:26 · ಕನ್ನಡ ಬೈಬಲ್

ಆಕೆಯು ಜ್ಞಾನದಿಂದ ತನ್ನ ಬಾಯಿ ತೆರೆಯುತ್ತಾಳೆ; ತನ್ನ ನಾಲಿಗೆಯಲ್ಲಿ ದಯೆಯ ಉಪದೇಶವಿರುವದು.

Cross references

ಆದಿಕಾಂಡ 24:18

ಅದಕ್ಕವಳು--ನನ್ನ ಒಡೆಯನೇ, ಕುಡಿ ಎಂದು ಹೇಳಿ ತ್ವರೆಯಾಗಿ ತನ್ನ ಕೊಡವನ್ನು ಕೈಮೇಲೆ ಇಳಿಸಿ ಅವನಿಗೆ ಕುಡಿಯಲು ಕೊಟ್ಟಳು.

ನ್ಯಾಯಾಧಿಪತಿಗಳು 13:23

ಆ ಸ್ತ್ರೀಯು ಮಗನನ್ನು ಹೆತ್ತು ಅವನಿಗೆ ಸಂಸೋನನು ಎಂದು ಹೆಸರಿಟ್ಟಳು.

1 ಸಮುವೇಲ 25:24

ದಯಮಾಡಿ ನಿನ್ನ ದಾಸಿಯನ್ನು ಮಾತಾಡಗೊಡಿಸಿ ನಿನ್ನ ದಾಸಿಯ ಮಾತುಗಳನ್ನು ಕೇಳು.

2 ಸಮುವೇಲ 20:16

ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ--ಕೇಳಿರಿ, ಕೇಳಿರಿ, ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸವಿಾಪಿ ಸಲು ಬರಹೇಳಿರಿ ಎಂದು ಕೂಗಿ ಬೇಡಿಕೊಂಡಳು.

2 ಅರಸುಗಳು 22:15

ಆಗ ಅವಳು--ಅವರಿಗೆ ಹೇಳಿದ್ದು--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದು ಇದೇ--ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನು

ಎಸ್ತೇರ್ 4:4

ಆಗ ಎಸ್ತೇರಳ ದಾಸಿಯರೂ ಅವಳ ಪ್ರತಿ ವಿಚಾ ರಕರೂ ಬಂದು ಅವಳಿಗೆ ತಿಳಿಸಿದರು. ಆದದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆ ಕೈಯು ಗೋಣಿಯ ತಟ್ಟನ್ನು ತೆಗೆದು ಹಾಕಿ ಧರಿಸಿ ಕೊಳ್ಳುವದಕ್ಕೆ ವಸ್ತ್ರವನ್ನು ಕಳುಹಿಸಿದಳು.

ಎಸ್ತೇರ್ 5:8

ನನ್ನ ಬೇಡುವಿಕೆಯ ಪ್ರಕಾರ ಕೊಡಲೂ ನನ್ನ ವಿಜ್ಞಾಪನೆಯ ಪ್ರಕಾರ ಮಾಡಲೂ ಅರಸನಿಗೆ ಸಮ್ಮತಿ ಯಾದರೆ ಅರಸನಿಗೂ ಹಾಮಾನನಿಗೂ ನಾನು ಇನ್ನೂ ಮಾಡುವ ಔತಣಕ್ಕೆ ಬರಬೇಕು. ನಾಳೆ ಅರಸನು ಹೇಳಿದ ಪ್ರಕಾರ ಮಾಡುವೆನು ಅಂದಳು.

ಎಸ್ತೇರ್ 7:3

ಆಗ ರಾಣಿಯಾದ ಎಸ್ತೇರಳು ಪ್ರತ್ಯುತ್ತರ ಕೊಟ್ಟು--ಓ ಅರಸನೇ, ನಾನು ನಿನ್ನ ಮುಂದೆ ದಯ ಹೊಂದಿದ ವಳಾಗಿದ್ದರೆ ಅದು ಅರಸನಿಗೆ ಮೆಚ್ಚಿಕೆಯಾಗಿದ್ದರೆ ನನ್ನ ಬೇಡುವಿಕೆಗೆ ನನ್ನ ಪ್ರಾಣವೂ ನನ್ನ ವಿಜ್ಞಾಪನೆಗೆ ನನ್ನ ಜನವೂ ಕೊಡಲ್ಪಡಲಿ.

ಎಸ್ತೇರ್ 8:3

ಎಸ್ತೇರಳು ಅರಸನ ಮುಂದೆ ತಿರಿಗಿ ಮಾತನಾಡಿ ಅವನ ಪಾದಗಳ ಮುಂದೆ ಬಿದ್ದು ಅತ್ತು ಅಗಾಗನಾದ ಹಾಮಾನನ ಕೇಡನ್ನೂ ಅವನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ಯೋಚನೆಯನ್ನೂ ತೆಗೆ ದುಹಾಕಲು ಬೇಡಿಕೊಂಡಳು.

ಸಾಮೇತಿಗಳು 10:31

ನೀತಿವಂತರ ಬಾಯಿಯು ಜ್ಞಾನವನ್ನು ಫಲಿಸುತ್ತದೆ; ಮೂರ್ಖನ ನಾಲಿಗೆಯು ಕತ್ತರಿಸಲ್ಪಡುವದು.ಯಾವದು ಅಂಗೀಕರಿಸ ತಕ್ಕದ್ದೋ ಅದು ನೀತಿವಂತರ ತುಟಿಗಳಿಗೆ ತಿಳಿಯು ವದು; ದುಷ್ಟರ ಬಾಯಿಯು ಮೂರ್ಖತನವನ್ನು ಹೊರಗೆಡುವುತ್ತದೆ.

ಸಾಮೇತಿಗಳು 12:18

ಕತ್ತಿಯ ಇರಿತದ ಹಾಗೆ ಮಾತನಾಡುವದು ಉಂಟು. ಜ್ಞಾನವಂತರ ನಾಲಿಗೆಯು ಆರೋಗ್ಯ.

ಸಾಮೇತಿಗಳು 16:24

ಮನೋಹರವಾದ ಮಾತುಗಳು ಜೇನು ತುಪ್ಪದಂತೆ ಪ್ರಾಣಕ್ಕೆ ಮಧುರವೂ ಎಲುಬು ಗಳಿಗೆ ಕ್ಷೇಮವೂ ಆಗಿವೆ.

ಸಾಮೇತಿಗಳು 19:14

ಮನೆಯೂ ಐಶ್ವರ್ಯವೂ ಪಿತೃಗಳ ಸ್ವಾಸ್ಥ್ಯವು; ವಿವೇಕಿಯಾದ ಹೆಂಡತಿಯು ಕರ್ತ ನಿಂದಲೇ.

ಸಾಮೇತಿಗಳು 25:15

ದೀರ್ಘ ಶಾಂತಿಯಿಂದ ಪ್ರಭುವನ್ನು ಸಮ್ಮತಿಪಡಿಸಬಹುದು. ಮೃದುವಾದ ನಾಲಿಗೆಯು ಎಲುಬನ್ನು ಮುರಿಯುತ್ತದೆ.

ಸಾಮೇತಿಗಳು 31:8

ಮೂಕರಿಗಾಗಿಯೂ ನಾಶವಾಗುವದಕ್ಕೆ ನೇಮಿಸಲ್ಪಟ್ಟ ವರೆಲ್ಲರಿಗಾಗಿಯೂ ನಿನ್ನ ಬಾಯನ್ನು ತೆರೆ.

ಪರಮಗೀತ 2:14

ಗುಪ್ತವಾದ ಹಂತಗ ಳಲ್ಲಿಯೂ ಕಲ್ಲು ಸಂದುಗಳ ಮರೆಯಲ್ಲಿಯೂ ಇರುವ ಓ ನನ್ನ ಪಾರಿವಾಳವೇ, ನಿನ್ನ ಮುಖವನ್ನು ನನಗೆ ತೋರ ಮಾಡು. ನಿನ್ನ ಸ್ವರವನ್ನು ಕೇಳಿಸು. ನಿನ್ನ ಸ್ವರವು ರಮ್ಯವಾಗಿಯೂ ನಿನ್ನ ಮುಖವು ಸೌಂದರ್ಯ ವಾಗಿಯೂ ಅದೆ.

ಪರಮಗೀತ 4:11

ನಿನ್ನ ತುಟಿಗಳು, ಓ ನನ್ನ ವಧುವೇ, ಜೇನುಗೂಡಿನ ಹಾಗೆ ಸುರಿಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯ ಕೆಳಗೆ ಅವೆ; ನಿನ್ನ ವಸ್ತ್ರಗಳ ವಾಸನೆಯು ಲೆಬನೋನಿನ ವಾಸನೆಯ ಹಾಗೆ ಅವೆ.

ಮಲಾಕಿ 2:6

ಸತ್ಯದ ನ್ಯಾಯಪ್ರಮಾಣವು ಅವನ ಬಾಯಲ್ಲಿ ಇತ್ತು; ಅಕ್ರಮವು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ ನ್ಯಾಯ ದಿಂದಲೂ ನನ್ನ ಸಂಗಡ ನಡೆದುಕೊಂಡು ಅನೇಕರನ್ನು ಅಕ್ರಮದಿಂದ ತಿರುಗಿಸಿದನು.

ಲೂಕ 1:38

ಆಗ ಮರಿಯಳು--ನೋಡು, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗೆ ಆಗಲಿ ಅಂದಳು; ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.

ಲೂಕ 1:42

ಗಟ್ಟಿಯಾದ ಧ್ವನಿಯಿಂದ ಮಾತ ನಾಡಿ--ಸ್ತ್ರೀಯರಲ್ಲಿ ನೀನು ಧನ್ಯಳೇ; ನಿನ್ನ ಗರ್ಭಫಲವು ಆಶೀರ್ವದಿಸಲ್ಪಟ್ಟದ್ದೇ.

ಅಪೋಸ್ತಲರ ಕೃತ್ಯಗಳು 6:15

ಆಗ ಆಲೋಚನಾ ಸಭೆಯಲ್ಲಿ ಕೂತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲಾಗಿ ಅವನ ಮುಖವು ದೂತನ ಮುಖದಂತೆ ಇರುವದನ್ನು ಕಂಡರು.

ಅಪೋಸ್ತಲರ ಕೃತ್ಯಗಳು 18:26

ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಪೂರ್ಣವಾಗಿ ವಿವರಿಸಿದರು.

ಎಫೆಸದವರಿಗೆ 4:29

ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ.

ಕೊಲೊಸ್ಸೆಯವರಿಗೆ 4:5

ಸಮಯ ವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳ ವರಾಗಿ ನಡೆದುಕೊಳ್ಳಿರಿ.

1 ಪೇತ್ರ 3:1

ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಯಾರಾದರೂ ವಾಕ್ಯಕ್ಕೆ ಅವಿಧೇಯರಾಗಿದ್ದರೂ ಹೆಂಡತಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ

1 ಪೇತ್ರ 3:4

ಆದರೆ ಸಾತ್ವಿಕವಾದ ಶಾಂತ ಮನಸ್ಸು ಎಂಬ ಹೃದಯದ ಮರೆಯಾದ ಮನುಷ್ಯನ ಅಲಂಕಾರವೇ ನಿಮಗಿರಲಿ. ಇದು ಅಕ್ಷಯ ವಾಗಿದ್ದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ.

1 ಪೇತ್ರ 3:8

ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.

Interlinear

Choose Theme