ಮನೋಹರವಾದ ಮಾತುಗಳು ಜೇನು ತುಪ್ಪದಂತೆ ಪ್ರಾಣಕ್ಕೆ ಮಧುರವೂ ಎಲುಬು ಗಳಿಗೆ ಕ್ಷೇಮವೂ ಆಗಿವೆ.
Cross references
ನನ್ನ ಬೋಧನೆಯು ಮಳೆಯಂತೆ ಸುರಿಯುವದು; ನನ್ನ ಮಾತು ಮಂಜಿನಂತೆಯೂ ಹುಲ್ಲಿನ ಮೇಲೆ ಬೀಳುವ ತುಂತುರಿನ ಹಾಗೆಯೂ ಪಲ್ಯದ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವದು.
ಅವು ಬಂಗಾರಕ್ಕಿಂತಲೂ ಬಹಳ ಅಪರಂಜಿ ಗಿಂತಲೂ ಅಪೇಕ್ಷಿಸತಕ್ಕವುಗಳು; ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾದವು ಗಳು.
ನಿನ್ನ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿ ಯಾಗಿವೆ, ಅವು ನನ್ನ ಬಾಯಿಗೆ ಜೇನಿಗಿಂತ ಸಿಹಿ ಯಾಗಿವೆ.
ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು.
ಅವುಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ ಅವರ ದೇಹ ಕ್ಕೆಲ್ಲಾ ಆರೋಗ್ಯವೂ ಆಗಿವೆ.
ಕತ್ತಿಯ ಇರಿತದ ಹಾಗೆ ಮಾತನಾಡುವದು ಉಂಟು. ಜ್ಞಾನವಂತರ ನಾಲಿಗೆಯು ಆರೋಗ್ಯ.
ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ; ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು!
ದುಷ್ಟರ ಆಲೋಚನೆಯು ಕರ್ತನಿಗೆ ಅಸಹ್ಯವಾಗಿದೆ; ಶುದ್ಧನ ಮಾತುಗಳು ಸಂತೋಷಕರ ವಾದ ಮಾತುಗಳೇ.
ಹೌದು, ನಿನ್ನ ತುಟಿಗಳು ಯಥಾ ರ್ಥವಾದವುಗಳನ್ನು ಮಾತಾಡಿದರೆ ನನ್ನ ಅಂತರಾತ್ಮವು ಸಂತೋಷಿಸುವದು.
ನನ್ನ ಮಗನೇ, ಜೇನು ಚೆನ್ನಾಗಿರುವದರಿಂದಲೂ ನಿನ್ನ ಬಾಯಿಗೆ ಜೇನು ತುಪ್ಪವು ಸಿಹಿಯಾಗಿರುವದರಿಂದಲೂ ಅದನ್ನು ತಿನ್ನು;
ಸಮಯೋಚಿತವಾದ ಮಾತು ಬೆಳ್ಳಿಯ ಚಿತ್ರಗಳಲ್ಲಿ ಬಂಗಾರದ ಸೇಬಿನಂತಿದೆ.
ತೈಲವೂ ಸುಗಂಧ ದ್ರವ್ಯವೂ ಹೃದಯವನ್ನು ಸಂತೋಷಪಡಿಸುತ್ತದೆ, ಹಾಗೆಯೇ ಆದರಣೆಯ ಸಲಹೆಯಿಂದ ಸ್ನೇಹಿತನ ಮಧುರತ್ವವು ಇರುತ್ತದೆ.
ಪ್ರಸಂಗಿಯು ಒಪ್ಪಿಕೊಳ್ಳುವಂತಹ ವಾಕ್ಯಗಳನ್ನು ಕಂಡುಹಿಡಿಯಲು ಹುಡುಕಿದನು: ಆ ಬರೆದವುಗಳು ಒಪ್ಪಿದ ಸತ್ಯವಾದ ಮಾತುಗಳು.
ನಿನ್ನ ತುಟಿಗಳು, ಓ ನನ್ನ ವಧುವೇ, ಜೇನುಗೂಡಿನ ಹಾಗೆ ಸುರಿಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯ ಕೆಳಗೆ ಅವೆ; ನಿನ್ನ ವಸ್ತ್ರಗಳ ವಾಸನೆಯು ಲೆಬನೋನಿನ ವಾಸನೆಯ ಹಾಗೆ ಅವೆ.
ಇಗೋ, ನಾನು ಅನೇಕ ವಿಾನುಗಾರರನ್ನು ಕಳುಹಿಸುತ್ತೇನೆಂದು ಕರ್ತನು ಅನ್ನುತ್ತಾನೆ; ಇವರು ಅವರನ್ನು ಹಿಡಿಯುವರು; ಆಮೇಲೆ ಅನೇಕ ಬೇಟೆ ಗಾರರನ್ನು ಕಳುಹಿಸುವೆನು; ಇವರು ಎಲ್ಲಾ ಬೆಟ್ಟಗುಡ್ಡಗಳ ಮೇಲೆಯೂ ಎಲ್ಲಾ ಗುಡ್ಡಗಳ ಮೇಲೆಯೂ ಎಲ್ಲಾ ಬಂಡೆಗಳ ಬಿರುಕುಗಳಲ್ಲಿಯೂ ಅವರನ್ನು ಬೇಟೆಯಾಡು ವರು.
ಅದೇ ವಾರದ ಮೊದಲನೆಯ ದಿನದ ಸಾಯಂಕಾಲದಲ್ಲಿ ಯೆಹೂದ್ಯರ ಭಯದಿಂದ ಶಿಷ್ಯರು ಕೂಡಿ ಬಂದಿದ್ದ ಮನೆಯ ಬಾಗಲುಗಳು ಮುಚ್ಚಿದ್ದವು. ಆಗ ಯೇಸು ಬಂದು ಅವರ ಮಧ್ಯೆ ನಿಂತು-- ನಿಮಗೆ ಸಮಾಧಾನವಾಗಲಿ ಎಂದು ಅವರಿಗೆ ಹೇಳಿ ದನು.
ಆಗ ನಾನು ಆ ಚಿಕ್ಕ ಪುಸ್ತಕವನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಕೂಡಲೆ ನನ್ನ ಹೊಟ್ಟೆಯು ಕಹಿ ಯಾಯಿತು.ಅವನು ನನಗೆ--ನೀನು ಅನೇಕ ಪ್ರಜೆ, ಜನಾಂಗ, ಭಾಷೆ ಮತ್ತು ರಾಜರುಗಳ ಮುಂದೆ ತಿರಿಗಿ ಪ್ರವಾದಿಸತಕ್ಕದ್ದು ಎಂದು ಹೇಳಿದನು.