Home Bibles ☰ Books 2 ಸಮುವೇಲ 18:9 · ಕನ್ನಡ ಬೈಬಲ್
2 ಸಮುವೇಲ 18:9 · ಕನ್ನಡ ಬೈಬಲ್

ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.

Cross references

ದ್ವಿತೀಯೋಪದೇಶಕಾಂಡ 21:23

ಅವನ ಹೆಣವು ರಾತ್ರಿಯಲ್ಲಿ ಮರದ ಮೇಲಿರಬಾರದು; ಅವನನ್ನು ಹೇಗಾದರೂ ಅದೇ ದಿವಸದಲ್ಲಿ ಹೂಣಿಡ ಬೇಕು; (ಯಾಕಂದರೆ ತೂಗಾಡುವವನು ದೇವರಿಂದ ಶಾಪಗ್ರಸ್ತನಾಗಿದ್ದಾನೆ); ಆದರೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.

ದ್ವಿತೀಯೋಪದೇಶಕಾಂಡ 27:16

ತನ್ನ ತಂದೆ ತಾಯಿಗಳನ್ನು ತಾತ್ಸಾರಮಾಡುವ ವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.

ದ್ವಿತೀಯೋಪದೇಶಕಾಂಡ 27:20

ತನ್ನ ತಂದೆಯ ಹೆಂಡತಿಯ ಸಂಗಡ ಮಲಗಿ ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆದವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.

2 ಸಮುವೇಲ 14:26

ಅವನು ತನ್ನ ತಲೆಯ ಕೂದಲು ಭಾರವಾಗಿದೆ ಎಂದು ಪ್ರತಿವರುಷದ ಕೊನೆಯಲ್ಲಿ ಬೋಳಿಸಿಕೊಳ್ಳುವನು; ಬೋಳಿಸಿಕೊಳ್ಳುವಾಗ ಅವನ ತಲೆಯ ಕೂದಲು ಅರಸನ ತೂಕದ ಪ್ರಕಾರ ಇನ್ನೂರು ಶೆಕೇಲು ತೂಕವಾಗಿರುವದು.

2 ಸಮುವೇಲ 17:23

ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ ಪಟ್ಟಣದಲ್ಲಿರುವ ತನ್ನ ಮನೆಗೆ ಹೋಗಿ ಅದನ್ನು ಕ್ರಮಪಡಿಸಿ ಉರ್ಲುಹಾಕಿ ಕೊಂಡು ಸತ್ತು ತನ್ನ ತಂದೆಯ ಸಮಾಧಿಯಲ್ಲಿ ಹೂಣಲ್ಪಟ್ಟನು.

2 ಸಮುವೇಲ 18:14

ಆಗ ಯೋವಾಬನು--ನಾನು ಹೀಗೆ ನಿನ್ನ ಮುಂದೆ ಆಲಸ್ಯಮಾಡೆನು ಎಂದು ಹೇಳಿ ಮೂರು ಈಟಿಗಳನ್ನು ತನ್ನ ಕೈಯಲ್ಲಿ ತಕ್ಕೊಂಡು ಅಬ್ಷಾಲೋಮನು ಇನ್ನೂ ಏಲಾಮರದ ಮಧ್ಯದಲ್ಲಿ ಜೀವದಿಂದಿರುವಾಗ ಅವು ಗಳನ್ನು ಅವನ ಎದೆಗೆ ತಿವಿದನು.

ಯೋಬ 18:8

ತನ್ನ ಕಾಲುಗಳಿಂದ ಬಲೆಯಲ್ಲಿ ಸಿಕ್ಕಿಕೊಂಡನು; ಉರ್ಲಿನ ಮೇಲೆ ನಡೆದುಕೊಳ್ಳುತ್ತಾನೆ.

ಯೋಬ 31:3

ದುಷ್ಟನಿಗೆ ನಾಶವಿಲ್ಲವೋ? ಅಪಕಾರ ಮಾಡುವವರಿಗೆ ಕಠಿಣ ಶಿಕ್ಷೆಯಿಲ್ಲವೋ?

ಕೀರ್ತನೆಗಳು 63:9

ಆದರೆ ನನ್ನ ಪ್ರಾಣವನ್ನು ನಾಶಮಾಡುವದಕ್ಕೆ ಹುಡುಕುವವರು ಭೂಮಿಯ ಕೆಳಭಾಗಗಳಿಗೆ ಹೋಗು ವರು.

ಸಾಮೇತಿಗಳು 20:20

ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.

ಸಾಮೇತಿಗಳು 30:17

ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.

ಮತ್ತಾಯ 27:5

ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.

Interlinear

Choose Theme