Home Bibles ಸಾಮೇತಿಗಳು 3:28 · ಕನ್ನಡ ಬೈಬಲ್
ಸಾಮೇತಿಗಳು 3:28 · ಕನ್ನಡ ಬೈಬಲ್

ಕೊಡತಕ್ಕದ್ದು ನಿನ್ನಲ್ಲಿರುವಾಗ--ಹೋಗಿ ಬಾ, ನಾಳೆ ನಿನಗೆ ಕೊಡು ವೆನು ಎಂದು ನಿನ್ನ ನೆರೆಯವನಿಗೆ ಹೇಳಬೇಡ.

Cross references

ಲೇವ್ಯಕಾಂಡ 19:13

ನಿನ್ನ ನೆರೆಯವನನ್ನು ವಂಚಿಸಬಾರದು ಅವನನ್ನು ಸುಲುಕೊಳ್ಳಬಾರದು. ಕೂಲಿಯವನ ಕೂಲಿಯು ನಿನ್ನ ಬಳಿಯಲ್ಲಿ ಮುಂಜಾನೆಯ ವರೆಗೆ ಇರಬಾರದು.

ದ್ವಿತೀಯೋಪದೇಶಕಾಂಡ 24:12

ಅವನು ಬಡವನಾದರೆ, ಅವನ ಒತ್ತೆ ಇಟ್ಟುಕೊಂಡು ಮಲಗ ಬೇಡ.

ಸಾಮೇತಿಗಳು 27:1

ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ; ಒಂದು ದಿನವು ಯಾವದನ್ನು ಸಂಭವಿಸುವಂತೆ ಮಾಡುತ್ತದೋ ಅದು ನಿನಗೆ ತಿಳಿ ಯದು.

ಸಭಾಪ್ರಸಂಗಿ 9:10

ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.

ಸಭಾಪ್ರಸಂಗಿ 11:6

ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು, ಸಂಜೆ ತನಕ ನಿನ್ನ ಕೈಯನ್ನು ಹಿಂತೆಗೆಯಬೇಡ; ಇದೋ, ಅದೋ ಯಾವದೋ ಕೈಗೂಡಿ ಬರು ವದೋ ಇಲ್ಲವೆ ಎರಡೂ ಒಂದೇ ರೀತಿ ಒಳ್ಳೆಯದಾ ಗುವವೋ ಎಂದು ನಿನಗೆ ತಿಳಿಯದು.

ಪರಮಗೀತ 5:3

ನಾನು ನನ್ನ ಅಂಗಿಯನ್ನು ತೆಗೆದಿದ್ದೇನೆ; ಅದನ್ನು ತೊಟ್ಟುಕೊಳ್ಳುವದು ಹೇಗೆ? ನಾನು ನನ್ನ ಕಾಲು ಗಳನ್ನು ತೊಳಕೊಂಡೆನು; ನಾನು ಅವುಗಳನ್ನು ಮೈಲಿಗೆ ಮಾಡುವದು ಹೇಗೆ?

2 ಕೊರಿಂಥದವರಿಗೆ 8:11

ಈ ಕಾರ್ಯವನ್ನು ಮಾಡುವದಕ್ಕೆ ಹೇಗೆ ನಿಮ್ಮಲ್ಲಿ ಸಿದ್ದಮನಸ್ಸು ಇತ್ತೋ ಹಾಗೆಯೇ ನೆರವೇರಿಸಿರಿ; ಹೀಗೆ ನಿಮಗಿರುವದರೊಳಗಿಂದ ಆ ಕಾರ್ಯವನ್ನು ಪೂರ್ತಿ ಮಾಡಿರಿ.

2 ಕೊರಿಂಥದವರಿಗೆ 9:3

ಆದರೂ ನಾವು ನಿಮ್ಮನ್ನು ಹೊಗಳಿದ್ದು ವ್ಯರ್ಥವಾಗದೆ ನಾನು ಹೇಳಿದ ಪ್ರಕಾರವೇ ನೀವು ಸಿದ್ಧವಾಗಿರಬೇಕೆಂದು ಆ ಸಹೋದರರನ್ನು ಕಳುಹಿಸಿದ್ದೇನೆ.

1 ತಿಮೋಥೆಯ 6:18

ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು.

Interlinear

Choose Theme