Home Bibles 2 ಕೊರಿಂಥದವರಿಗೆ 9:3 · ಕನ್ನಡ ಬೈಬಲ್
2 ಕೊರಿಂಥದವರಿಗೆ 9:3 · ಕನ್ನಡ ಬೈಬಲ್

ಆದರೂ ನಾವು ನಿಮ್ಮನ್ನು ಹೊಗಳಿದ್ದು ವ್ಯರ್ಥವಾಗದೆ ನಾನು ಹೇಳಿದ ಪ್ರಕಾರವೇ ನೀವು ಸಿದ್ಧವಾಗಿರಬೇಕೆಂದು ಆ ಸಹೋದರರನ್ನು ಕಳುಹಿಸಿದ್ದೇನೆ.

Cross references

1 ಕೊರಿಂಥದವರಿಗೆ 16:1

ಪರಿಶುದ್ಧರಿಗೋಸ್ಕರ ಹಣವನ್ನೆತ್ತುವ ವಿಷಯದಲ್ಲಿ ಗಲಾತ್ಯ ಸಭೆಗಳಿಗೆ ನಾನು ಅಪ್ಪಣೆಕೊಟ್ಟಂತೆ ನೀವೂ ಮಾಡಿರಿ.

2 ಕೊರಿಂಥದವರಿಗೆ 7:14

ಯಾಕಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದರಲ್ಲಿ ನಾಚಿಕೆಪಡಬೇಕಾಗಿ ಬರಲಿಲ್ಲ. ನಾವು ನಿಮಗೆ ಹೇಳಿದವುಗಳೆಲ್ಲಾ ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯೂ ಸತ್ಯವೆಂದು ಕಂಡುಬಂತು.

2 ಕೊರಿಂಥದವರಿಗೆ 8:6

ಹೀಗಿರಲಾಗಿ ಈ ಕೃಪಾಕಾರ್ಯವನ್ನು ಪ್ರಾರಂಭಿಸಿದ ತೀತನು ನಿಮ್ಮಲ್ಲಿ ಸಹ ಅದನ್ನು ಕೊನೆಗಾಣಿಸಬೇಕೆಂದು ನಾವು ಅವನನ್ನು ಬೇಡಿಕೊಂಡೆವು.

2 ಕೊರಿಂಥದವರಿಗೆ 8:17

ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ನಿಜ ವಾಗಿಯೂ ಒಪ್ಪಿದ್ದಲ್ಲದೆ ಅತ್ಯಾಸಕ್ತನಾಗಿದ್ದು ತನ್ನಷ್ಟಕ್ಕೆ ತಾನೇ ನಿಮ್ಮ ಬಳಿಗೆ ಬಂದಿದ್ದಾನೆ.

2 ಕೊರಿಂಥದವರಿಗೆ 9:4

ಸಿದ್ಧವಾಗಿರದಿದ್ದರೆ ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬದನ್ನು ಕಾಣುವಾಗ ನಮಗೆ ಇಂಥ ಭರವಸವಿದ್ದದ್ದಕ್ಕೆ ನಾವು ನಾಚಿಕೆಪಡಬೇಕಾದೀತು;

ತೀತ 3:1

ದೊರೆತನಗಳಿಗೂ ಅಧಿಕಾರಿಗಳಿಗೂ ಒಳಗಾಗಿ ನ್ಯಾಯಾಧಿಪತಿಗಳಿಗೆ ವಿಧೇಯ ರಾಗಿರಬೇಕೆಂತಲೂ ಪ್ರತಿಯೊಂದು ಸತ್ಕ್ರಿಯೆಗೆ ಸಿದರಾಗಿರಬೇಕೆಂತಲೂ

Interlinear

Choose Theme