Home Bibles ಸಾಮೇತಿಗಳು 7:21 · ಕನ್ನಡ ಬೈಬಲ್
ಸಾಮೇತಿಗಳು 7:21 · ಕನ್ನಡ ಬೈಬಲ್

ಬಹಳವಾದ ತನ್ನ ಸವಿಮಾತಿನಿಂದ ಅವಳು ಅವನನ್ನು ಒಪ್ಪಿಸಿ ತನ್ನ ತುಟಿಗಳ ಮುಖಸ್ತುತಿ ಯಿಂದ ಅವನನ್ನು ಬಲಾತ್ಕರಿಸಿದಳು.

Cross references

ನ್ಯಾಯಾಧಿಪತಿಗಳು 14:17

ಅವರಿಗೆ ಔತಣ ಇದ್ದ ಏಳು ದಿವಸಗಳಲ್ಲಿ ಅವನ ಮುಂದೆ ಅವಳು ಅತ್ತಳು. ಆದರೆ ಏಳನೇ ದಿನದಲ್ಲಿ ಅವಳು ಅವನನ್ನು ಬಹಳವಾಗಿ ಪೀಡಿಸಿದ್ದರಿಂದ ಅವಳಿಗೆ ತಿಳಿಸಿದನು. ಆಗ ಆಕೆ ತನ್ನ ಜನರ ಮಕ್ಕಳಿಗೆ ಆ ಒಗಟನ್ನು ತಿಳಿಸಿದಳು.

ನ್ಯಾಯಾಧಿಪತಿಗಳು 16:15

ಅವಳು ಅವನಿಗೆ--ನಿನ್ನ ಹೃದಯವು ನನ್ನ ಸಂಗಡ ಇಲ್ಲದೆ ಇರುವಾಗ ನಿನ್ನನ್ನು ಪ್ರೀತಿ ಮಾಡುತ್ತೇನೆ ಎಂದು ನೀನು ಹೇಗೆ ಹೇಳುತ್ತೀ? ನೀನು ಈ ಮೂರು ಸಾರಿ ನನಗೆ ವಂಚನೆಮಾಡಿದಿ; ನಿನ್ನ ದೊಡ್ಡ ಶಕ್ತಿ ಯಾವದರಲ್ಲಿ ಉಂಟೋ ನನಗೆ ತಿಳಿಸಲಿಲ್ಲ ಅಂದಳು.

1 ಸಮುವೇಲ 28:23

ಅದಕ್ಕವನು ಒಪ್ಪದೆ--ನಾನು ತಿನ್ನುವದಿಲ್ಲ ಅಂದನು. ಆದರೆ ಅವನ ದಾಸರೂ ಆ ಸ್ತ್ರೀಯೂ ಅವನನ್ನು ಬಲವಂತಮಾಡಿದ್ದರಿಂದ ಅವನು ಅವರ ಮಾತನ್ನು ಕೇಳಿ ನೆಲವನ್ನು ಬಿಟ್ಟು ಎದ್ದು ಮಂಚದ ಮೇಲೆ ಕುಳಿತುಕೊಂಡನು.

2 ಅರಸುಗಳು 4:8

ಆ ಕಾಲದಲ್ಲಿ ಏನಾಯಿತಂದರೆ, ಎಲೀಷನು ಶೂನೇ ಮಿಗೆ ಹೋದನು. ಅಲ್ಲಿ ಘನವುಳ್ಳ ಒಬ್ಬ ಸ್ತ್ರೀಯು ಇದ್ದಳು. ಅವಳು ಅವನನ್ನು ರೊಟ್ಟಿ ತಿನ್ನಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗೆಲ್ಲಾ ಅಲ್ಲಿ ರೊಟ್ಟಿ ತಿನ್ನಲು ಹೋಗುತ್ತಿ ದ್ದನು.

ನೆಹೆಮ್ಯ 6:4

ಅವರು ಈ ಪ್ರಕಾರ ನಾಲ್ಕು ಸಾರಿ ನನ್ನ ಬಳಿಗೆ ಕಳುಹಿಸಿದರು. ನಾನು ಅದೇ ಪ್ರಕಾರ ಅವರಿಗೆ ಪ್ರತ್ಯುತ್ತರ ಕಳುಹಿಸಿದೆನು.

ಕೀರ್ತನೆಗಳು 12:2

ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.

ಸಾಮೇತಿಗಳು 5:3

ಪರಸ್ತ್ರೀಯ ತುಟಿಗಳು ಜೇನು ತುಪ್ಪದಂತೆ ತೊಟ್ಟಿ ರುವವು, ಅವಳ ಬಾಯಿಯು ಎಣ್ಣೆಗಿಂತಲೂ ಮೃದು ವಾಗಿದೆ.

ಸಾಮೇತಿಗಳು 6:24

ಕೆಟ್ಟ ಹೆಂಗಸಿನಿಂದಲೂ ಪರ ಸ್ತ್ರೀಯ ನಾಲಿಗೆಯ ಮುಖಸ್ತುತಿಯಿಂದಲೂ ಅವು ನಿನ್ನನ್ನು ಕಾಪಾಡುವವು.

ಸಾಮೇತಿಗಳು 7:5

ಪರಸ್ತ್ರೀಯಿಂದಲೂ ತನ್ನ ಮಾತು ಗಳಿಂದ ಮುಖಸ್ತುತಿ ಮಾಡುವ ಅನ್ಯಳಿಂದಲೂ ಅವು ನಿನ್ನನ್ನು ಕಾಪಾಡುವವು.

ಲೂಕ 14:23

ಆಗ ಯಜ ಮಾನನು ಸೇವಕನಿಗೆ--ನೀನು ಬೀದಿಗಳಿಗೂ ಬೇಲಿಗಳ ಬಳಿಗೂ ಹೊರಟುಹೋಗಿ ನನ್ನ ಮನೆ ತುಂಬಿಕೊಳ್ಳುವಂತೆ ಒಳಗೆ ಬರಲು ಅವರನ್ನು ಬಲ ವಂತಮಾಡು;

ಲೂಕ 24:29

ಆದರೆ ಅವರು ಆತನಿಗೆ--ನಮ್ಮೊಂದಿಗೆ ಇರು; ಯಾಕಂದರೆ ಈಗ ಸಾಯಂಕಾಲ ವಾಗುತ್ತಾ ಇದೆ ಮತ್ತು ಹಗಲು ಬಹಳ ಮಟ್ಟಿಗೆ ಕಳೆಯಿತು ಎಂದು ಹೇಳಿ ಆತನನ್ನು ಬಲವಂತ ಮಾಡಿ ದರು. ಆಗ ಆತನು ಅವರೊಂದಿಗೆ ಇರುವದಕ್ಕಾಗಿ ಹೋದನು.

ಅಪೋಸ್ತಲರ ಕೃತ್ಯಗಳು 16:15

ಆಕೆಯೂ ಆಕೆಯ ಮನೆಯವರೂ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ--ನಾನು ಕರ್ತನಿಗೆ ನಂಬಿಗಸ್ತಳಾದವಳೆಂದು ನೀವು ತೀರ್ಮಾನಿಸಿದರೆ ನನ್ನ ಮನೆಗೆ ಬಂದು ಇರಬೇಕು ಎಂದು ಆಕೆಯು ನಮ್ಮನ್ನು ಬೇಡಿಕೊಂಡು ಬಲವಂತಮಾಡಿದಳು.

2 ಕೊರಿಂಥದವರಿಗೆ 5:14

ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಹೀಗೆ ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಾವು ಹೀಗೆ ನಿಶ್ಚಯಿಸಿಕೊಳ್ಳುತ್ತೇವೆ.

Interlinear

Choose Theme