ಸಾಮೇತಿಗಳು 25:13 · ಕನ್ನಡ ಬೈಬಲ್
ಸುಗ್ಗಿಯ ಕಾಲದಲ್ಲಿ ಹಿಮಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ಥನಾದ ಸೇವಕನಿ ದ್ದಾನೆ. ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ.
Cross references
ಯೆಹೋಶುವ 22:32
ಯಾಜಕನಾದ ಎಲಿಯಾಜರನ ಮಗನಾದ ಫೀನೆಹಾಸನೂ ಪ್ರಧಾನರೂ ಗಿಲ್ಯಾದ್ ದೇಶದಲ್ಲಿರುವ ರೂಬೇನನ ಮಕ್ಕಳನ್ನೂ ಗಾದನ ಮಕ್ಕಳನ್ನೂ ಬಿಟ್ಟು ಕಾನಾನ್ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ಬಳಿಗೆ ತಿರಿಗಿ ಬಂದು ಅವರಿಗೆ ವರ್ತಮಾನವನ್ನು ತಂದರು.
ಸಾಮೇತಿಗಳು 13:17
ದುಷ್ಟ ಸೇವಕನು ಕೇಡಿಗೆ ಬೀಳುತ್ತಾನೆ; ನಂಬಿಕೆಯಾದ ರಾಯಭಾರಿಯು ಆರೋಗ್ಯದಾಯಕ.
ಸಾಮೇತಿಗಳು 25:25
ಬಾಯಾರಿದವನಿಗೆ ತಣ್ಣೀರು ಹೇಗೋ ದೂರ ದೇಶ ದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.
ಸಾಮೇತಿಗಳು 26:6
ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ.
ಫಿಲಿಪ್ಪಿಯವರಿಗೆ 2:25
ಆದಾಗ್ಯೂ ನನ್ನ ಕೊರತೆಯನ್ನು ನೀಗುವದಕ್ಕೆ ನೀವು ಕಳುಹಿಸಿದಂಥ ನನ್ನ ಸಹೋದರನೂ ಜೊತೆ ಕೆಲಸದವನೂ ಸಹ ಭಟನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನಾನು ನೆನಸಿದ್ದೇನೆ.